ಈಜುಪಟು ತ್ರಿಶೂಲ್

ಈಜುಪಟು ತ್ರಿಶೂಲ್

Friday, December 22nd, 2017

  ಪುತ್ತೂರಿನ ಬಾಲವನ ಈಜುಕೊಳದ ಈಜುಪಟು, ಹದಿನಾರರ ಹರೆಯದ ತ್ರಿಶೂಲ್ ಅಪ್ರತಿಮ ಪ್ರತಿಭೆಯ ಬಾಲಕ. ಇವರು ಡಿಸೆಂಬರ್ 12 ರಿಂದ 17ರವರೆಗೆ ಗೋವಾದಲ್ಲಿ ನಡೆದ ಹದಿನಾರರ ವಯೋಮಾನದ ಕೆಳಗಿನ ‘Rescue India- 2017’ ಚಾಂಪಿಯನ್‌ಶಿಪ್‌ನ ರಾಷ್ಟ್ರೀಯ ಸರ್ಫ್ ಸ್ಪರ್ಧೆಯಲ್ಲಿ 10 ಪದಕಗಳನ್ನು ತನ್ನ ಮಡಿಲಿಗೆ ಹಾಕಿಕೊಳ್ಳುವುದರ ಮೂಲಕ ಅತ್ಯುನ್ನತ ಸಾಧನೆಯನ್ನು ಪ್ರದರ್ಶಿಸಿರುತ್ತಾರೆ. ಇದು 9 ಚಿನ್ನದ ಪದಕ ಹಾಗೂ 1 ಬೆಳ್ಳಿ ಪದಕವನ್ನು ಒಳಗೊಂಡಿರುತ್ತದೆ. ಈ ಸ್ಪರ್ಧೆಯನ್ನು ರಾಷ್ಟ್ರೀಯ ಜೀವ ಸುರಕ್ಷಾ ಸೊಸೈಟಿ (India) ಆಯೋಜಿಸಿತ್ತು. ಇವರು […]

Read More..

Academic Workshop and Release of Principal’s Diary

Academic Workshop and Release of Principal’s Diary

Wednesday, December 13th, 2017

On the occasion of Diamond Jubilee celebrations of St Philomena PU College Puttur, Dakshina Kannada District PUC Principal’s Association and St Philomena PU College jointly organized an Academic Workshop and released Principal’s Diary-2018 on December 12, 2017 in college auditorium. The MLA of Puttur constituency and Parliamentary Secretary to Chief Minister, Government of Karnataka Mrs. […]

Read More..

‘ಶೈಕ್ಷಣಿಕ ಕಾರ್ಯಾಗಾರ, ಪ್ರಾಂಶುಪಾಲರ ಡೈರಿ’ ಬಿಡುಗಡೆ

‘ಶೈಕ್ಷಣಿಕ ಕಾರ್ಯಾಗಾರ, ಪ್ರಾಂಶುಪಾಲರ ಡೈರಿ’ ಬಿಡುಗಡೆ

Tuesday, December 12th, 2017

ಸಮಾಜಕ್ಕೆ ದಾರಿ ತೋರಿಸುವವರು ಶಿಕ್ಷಕರು. ಆದ್ದರಿಂದ ಮಕ್ಕಳು ಜಾರಿ ಬೀಳದ ಹಾಗೆ ಅವರನ್ನು ಸರಿ ದಾರಿಗೆ ಕೊಂಡೊಯ್ದು ಅವರನ್ನು ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಬೆಳೆಯುವಂತೆ ಶಿಕ್ಷಕರಾಗಲಿ, ಉಪನ್ಯಾಸಕರಾಗಲಿ ಕ್ರಿಯಾಶೀಲತೆಯಿಂದ ಅವರಲ್ಲಿ ವ್ಯಕ್ತಿತ್ವವನ್ನು ರೂಪಿಸುವಂತಾಗಬೇಕು ಎಂದು ರಾಜ್ಯ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕರಾದ ಶಕುಂತಳಾ ಟಿ. ಶೆಟ್ಟಿರವರು ಹೇಳಿದರು. ಅವರು ದ.12 ರಂದು ಕಾಲೇಜ್‌ನ ರಜತ ಮಹೋತ್ಸವದ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘ ಮಂಗಳೂರು ಮತ್ತು ಸಂತ ಫಿಲೋಮಿನಾ ಪದವಿ ಪೂರ್ವ […]

Read More..

ವಿಭಾಗ ಮಟ್ಟದ ಸ್ಪರ್ಧೆ

ವಿಭಾಗ ಮಟ್ಟದ ಸ್ಪರ್ಧೆ

Friday, December 8th, 2017

ಕರ್ನಾಟಕ ಸರಕಾರ, ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಸಾಹಿತ್ಸಿಕ/ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಇಲ್ಲಿನ ಪ್ರಥಮ ವಾಣಿಜ್ಯ ವಿಭಾಗದ ಆಕಾಶ್ ಸಿ. ಭಟ್ ಮತ್ತು ಅಂಜನ್ ಕುಮಾರ್ ಹಾಗೂ ದ್ವಿತೀಯ ವಿಜ್ಞಾನ ವಿಭಾಗದ ವಿಕ್ರಾಂತ್ ಶೆಣೈ ಮತ್ತು ಅಮನ್ ಮಹಮ್ಮದ್ ಇವರು ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಕೊಂಡಿರುತ್ತಾರೆ. ಇವರು ಡಿಸೆಂಬರ್ 13ರಂದು SBRR ಮಹಾಜನ ಪದವಿ ಪೂರ್ವ ಕಾಲೇಜು […]

Read More..

‘ಕಂಡಡೊಂಜಿ ದಿನ’

‘ಕಂಡಡೊಂಜಿ ದಿನ’

Monday, November 27th, 2017

  ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಇದರ ವಜ್ರಮಹೋತ್ಸವದ ಸಂಭ್ರಮಾಚರಣೆಯ ಪ್ರಯುಕ್ತ ಕಾಲೇಜ್‌ನ ವಿಜ್ಞಾನ ಸಂಘ ಹಾಗೂ ಮಾನವಿಕ ಸಂಘದ ಜಂಟಿ ಆಶ್ರಯದಲ್ಲಿ ಕಾಲೇಜ್‌ನ ವಿಜ್ಞಾನ ಹಾಗೂ ಕಲಾ ವಿಭಾಗದ ವಿದ್ಯಾರ್ಥಿಗಳಿಗಾಗಿ ವಿಟ್ಲ-ಪಡ್ನೂರು ಕೊಡಂಗಾಯಿ ರಾಜೇಶ್ ಡಿ.ಕೊಟ್ಟಾರಿಯವರ ಗದ್ದೆಯಲ್ಲಿ ನ.19 ರಂದು ಕಂಡಡೊಂಜಿ ದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಧ್ಯಕ್ಷತೆ ವಹಿಸಿದ ಕಾಲೇಜ್‌ನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋರವರು ಹಿಂಗಾರವನ್ನು ಅರಳಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಹಿಂದೆ ಹಿರಿಯರು ಗದ್ದೆಗಳಲ್ಲಿ ಬೇಸಾಯ, ಕೃಷಿ ಮಾಡುತ್ತಾ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿತ್ತು. […]

Read More..

ಮಲ್ಟಿ ಮೀಡಿಯಾ ಮಾಹಿತಿ ಕಾರ್ಯಕ್ರಮ

ಮಲ್ಟಿ ಮೀಡಿಯಾ ಮಾಹಿತಿ ಕಾರ್ಯಕ್ರಮ

Monday, November 27th, 2017

ವ್ಯಕ್ತಿ ತನ್ನ ಮನಸ್ಸಿನಲ್ಲಿರುವ ಆಲೋಚನೆಗಳನ್ನು, ಚಿಂತನೆಗಳನ್ನು ಅಭಿವ್ಯಕ್ತಿಗೊಳಿಸಲು ಮೀಡಿಯಗಳು ಬೆಂಬಲವಾಗಿ ನಿಲ್ಲಬಲ್ಲುದು. ಪ್ರಿಂಟ್ ಮಾಧ್ಯಮ, ದೃಶ್ಯ ಮಾಧ್ಯಮಗಳ ಪೈಕಿ ಮಲ್ಟಿ ಮೀಡಿಯಾಗಳಲ್ಲಿ ಕಲಾತ್ಮಕ ಕೌಶಲ್ಯವನ್ನು ಜಾಸ್ತಿ ಉಪಯೋಗಿಸಬೇಕಾಗುತ್ತದೆ ಎಂದು ಅನಿಕೇತನ ಎಜ್ಯುಕೇಶನ್ ಟ್ರಸ್ಟ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಕೃಷ್ಣಪ್ರಸಾದ್ ನಡ್ಸಾರ್‌ರವರು ಹೇಳಿದರು. ಅವರು ನ.20 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನ ಗಣಕ ವಿಜ್ಞಾನ ವಿಭಾಗದ ಆಶ್ರಯದಲ್ಲಿ ಕಾಲೇಜ್‌ನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ನಡೆದ ಆನಿಮೇಶನ್-ಮಲ್ಟಿ ಮೀಡಿಯದಿಂದ ಆಗುವ ಪ್ರಯೋಜನಗಳೇನು? ಎಂಬುದರ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು. […]

Read More..

ಬಾಲವನಕ್ಕೆ ಅಧ್ಯಯನ ಭೇಟಿ

ಬಾಲವನಕ್ಕೆ ಅಧ್ಯಯನ ಭೇಟಿ

Tuesday, November 21st, 2017

ಮಾದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನ ಪ್ರಥಮ ಹಾಗೂ ದ್ವಿತೀಯ ಕಲಾ ವಿಭಾಗದ ವಿದ್ಯಾರ್ಥಿಗಳು ಇಲ್ಲಿನ ಪರ್ಲಡ್ಕ ಡಾ.ಶಿವರಾಮ ಕಾರಂತ ಬಾಲವನಕ್ಕೆ ನ.16 ರಂದು ಅಧ್ಯಯನ ಭೇಟಿ ನೀಡಿದರು ಬಾಲವನದಲ್ಲಿನ ಶಿವರಾಮ ಕಾರಂತರ ನವೀಕೃತ ನಿವಾಸ, ಬರಹ ಕೊಠಡಿ, ಆರ್ಟ್ ಗ್ಯಾಲರಿ, ಗ್ರಂಥಾಲಯಗಳ ವಿದ್ಯಾರ್ಥಿಗಳು ವೀಕ್ಷಿಸಿದರು ಮಾತ್ರವಲ್ಲದೆ ಕಲಾ ವಿಭಾಗದ ಮುಖ್ಯಸ್ಥ ಭರತ್ ಕುಮಾರ್‌ರವರು ಡಾ.ಶಿವರಾಮ ಕಾರಂತರ ಜೀವನ ಹಾಗೂ ಕೃತಿಗಳ ಕುರಿತು ಉಪನ್ಯಾಸ ನೀಡಿದರು. ಕಲಾ ವಿಭಾಗದ 80  […]

Read More..

ವಿಜ್ಞಾನ ಮಾದರಿ ಸ್ಪರ್ಧೆ

ವಿಜ್ಞಾನ ಮಾದರಿ ಸ್ಪರ್ಧೆ

Friday, November 17th, 2017

ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್‌ಮೆಂಟ್‌ರವರು ನ.11 ರಂದು ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಆಯೋಜಿಸಿದ ವಿಜ್ಞಾನ ಮಾದರಿ ಸ್ಪರ್ಧೆ ‘ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್-2017’ ಇದರಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ದ್ವಿತೀಯ ಬಹುಮಾನ ಪಡೆದಿದೆ. ಕಾಲೇಜ್‌ನಿಂದ ಒಟ್ಟು 8 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಇದರಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ವಿಲಿಯಂ ಸಂತೋಷ್, ಸನತ್ ಎಂ.ನಾಯಕ್, ಪ್ರಥಮ ವಿಜ್ಞಾನ ವಿಭಾಗದ ಅನ್‌ಮೋಲ್ ಎನ್, ಲಿನ್ಸಿ ತೋಮಸ್, ಡೆಲ್ಮಾ ಲೋರಾ ಡಿ’ಕುನ್ಹರವರ ತಂಡಕ್ಕೆ […]

Read More..

ರಾಷ್ಟ್ರಮಟ್ಟದ ಅಥ್ಲೆಟಿಕ್ಸ್‌ನ ಪೋಲ್‌ವಾಲ್ಟ್ ಸ್ಪರ್ಧೆ

ರಾಷ್ಟ್ರಮಟ್ಟದ ಅಥ್ಲೆಟಿಕ್ಸ್‌ನ ಪೋಲ್‌ವಾಲ್ಟ್ ಸ್ಪರ್ಧೆ

Friday, November 17th, 2017

ಮಾದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನ ಪ್ರಥಮ ಕಲಾ ವಿಭಾಗದ ವಿದ್ಯಾರ್ಥಿ ಭವಿತ್ ಕುಮಾರ್‌ರವರು ಡಿಸೆಂಬರ್ ತಿಂಗಳಿನಲ್ಲಿ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾದ ವತಿಯಿಂದ ಹರಿಯಾಣದ ರೋಹ್ಟಕ್‌ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್‌ನ ಪೋಲ್‌ವಾಲ್ಟ್ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದಿರುತ್ತಾರೆ. ಉಡುಪಿ ಜಿಲ್ಲೆಯ ಬ್ರಹ್ಮಾವರದ ಎಸ್.ಎಂ.ಎಸ್ ಪದವಿ ಪೂರ್ವ ಕಾಲೇಜ್‌ನಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಅಥ್ಲೆಟಿಕ್ ಕೂಟದ ಪೋಲ್‌ವಾಲ್ಟ್ ಸ್ಪರ್ಧೆಯ ಬಾಲಕರ ವಿಭಾಗದಲ್ಲಿ 3.20ಮೀ ಎತ್ತರಕ್ಕೆ ಜಿಗಿಯುವುದರೊಂದಿಗೆ […]

Read More..

ತೆಲಂಗಾಣದಲ್ಲಿ ನಡೆದ ರಾಷ್ಟ್ರಮಟ್ಟದ ಚೆಸ್ ಸ್ಪರ್ಧೆ

ತೆಲಂಗಾಣದಲ್ಲಿ ನಡೆದ ರಾಷ್ಟ್ರಮಟ್ಟದ ಚೆಸ್ ಸ್ಪರ್ಧೆ

Friday, November 17th, 2017

ತೆಲಂಗಾಣದ ವಾರಂಗಲ್‌ನಲ್ಲಿ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾದ ವತಿಯಿಂದ ನಡೆದ ರಾಷ್ಟ್ರಮಟ್ಟದ ಚೆಸ್ ಸ್ಪರ್ಧೆಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ಮಾದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿ ಪ್ರಶಾಂತ್ ಜೆ.ನಾಕ್‌ರವರ ತಂಡಕ್ಕೆ ಬೆಳ್ಳಿ ಪದಕ ಲಭಿಸಿದೆ. ಒಟ್ಟು 6 ಸುತ್ತುಗಳ ಪಂದ್ಯಾಟದಲ್ಲಿ 5 ಸುತ್ತುಗಳನ್ನು ಜಯಿಸಿದ ಪ್ರಶಾಂತ್‌ರವರು ಪ್ರತಿನಿಧಿಸಿದ ಕರ್ನಾಟಕ ತಂಡವು ದ್ವಿತೀಯ ಸ್ಥಾನ ಪಡೆಯುವುದರೊಂದಿಗೆ ಬೆಳ್ಳಿ ಪದಕ ಪ್ರಶಸ್ತಿಗೆ ಭಾಜನವಾಯಿತು. ಅಲ್ಲದೆ ಪ್ರಶಾಂತ್‌ರವರು […]

Read More..