ಈಜುಪಟು ತ್ರಿಶೂಲ್

 

ಪುತ್ತೂರಿನ ಬಾಲವನ ಈಜುಕೊಳದ ಈಜುಪಟು, ಹದಿನಾರರ ಹರೆಯದ ತ್ರಿಶೂಲ್ ಅಪ್ರತಿಮ ಪ್ರತಿಭೆಯ ಬಾಲಕ. ಇವರು ಡಿಸೆಂಬರ್ 12 ರಿಂದ 17ರವರೆಗೆ ಗೋವಾದಲ್ಲಿ ನಡೆದ ಹದಿನಾರರ ವಯೋಮಾನದ ಕೆಳಗಿನ ‘Rescue India- 2017’ ಚಾಂಪಿಯನ್‌ಶಿಪ್‌ನ ರಾಷ್ಟ್ರೀಯ ಸರ್ಫ್ ಸ್ಪರ್ಧೆಯಲ್ಲಿ 10 ಪದಕಗಳನ್ನು ತನ್ನ ಮಡಿಲಿಗೆ ಹಾಕಿಕೊಳ್ಳುವುದರ ಮೂಲಕ ಅತ್ಯುನ್ನತ ಸಾಧನೆಯನ್ನು ಪ್ರದರ್ಶಿಸಿರುತ್ತಾರೆ. ಇದು 9 ಚಿನ್ನದ ಪದಕ ಹಾಗೂ 1 ಬೆಳ್ಳಿ ಪದಕವನ್ನು ಒಳಗೊಂಡಿರುತ್ತದೆ. ಈ ಸ್ಪರ್ಧೆಯನ್ನು ರಾಷ್ಟ್ರೀಯ ಜೀವ ಸುರಕ್ಷಾ ಸೊಸೈಟಿ (India) ಆಯೋಜಿಸಿತ್ತು. ಇವರು ಆಸ್ಟ್ರೇಲಿಯಾದ ಆಡಿಲೇಡ್‌ನಲ್ಲಿ ಜರಗಲಿರುವ ರಾಷ್ಟ್ರೀಯ ಜೀವರಕ್ಷಕ ಪಂದ್ಯಾವಳಿ-2018ರಲ್ಲಿ ಭಾರತವನ್ನು ಪ್ರತಿನಿಧಿಸಲಿರುವರು.

ತರಬೇತುದಾರರಾದ ಶ್ರೀ ಪಾರ್ಥ ವಾರಣಾಸಿ ಮತ್ತು ಶ್ರೀ ನಿರೂಪ್‌ರವರ ಪ್ರಕಾರ ಇವರು 2024 ರ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ವಿಫುಲ ಅವಕಾಶವನ್ನು ಹೊಂದಿರುತ್ತಾರೆ.

ಪ್ರಸ್ತುತ ಇವರು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾಗಿದ್ದು, ಬಾಲವನ ಉದ್ಯೋಗಿಯಾಗಿರುವ ಶಿವಣ್ಣ ಮತ್ತು ನಳಿನಿ ದಂಪತಿಗಳ ಸುಪುತ್ರರಾಗಿರುತ್ತಾರೆ.