ತೆಲಂಗಾಣದಲ್ಲಿ ನಡೆದ ರಾಷ್ಟ್ರಮಟ್ಟದ ಚೆಸ್ ಸ್ಪರ್ಧೆ

ತೆಲಂಗಾಣದ ವಾರಂಗಲ್‌ನಲ್ಲಿ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾದ ವತಿಯಿಂದ ನಡೆದ ರಾಷ್ಟ್ರಮಟ್ಟದ ಚೆಸ್ ಸ್ಪರ್ಧೆಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ಮಾದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿ ಪ್ರಶಾಂತ್ ಜೆ.ನಾಕ್‌ರವರ ತಂಡಕ್ಕೆ ಬೆಳ್ಳಿ ಪದಕ ಲಭಿಸಿದೆ.

ಒಟ್ಟು 6 ಸುತ್ತುಗಳ ಪಂದ್ಯಾಟದಲ್ಲಿ 5 ಸುತ್ತುಗಳನ್ನು ಜಯಿಸಿದ ಪ್ರಶಾಂತ್‌ರವರು ಪ್ರತಿನಿಧಿಸಿದ ಕರ್ನಾಟಕ ತಂಡವು ದ್ವಿತೀಯ ಸ್ಥಾನ ಪಡೆಯುವುದರೊಂದಿಗೆ ಬೆಳ್ಳಿ ಪದಕ ಪ್ರಶಸ್ತಿಗೆ ಭಾಜನವಾಯಿತು. ಅಲ್ಲದೆ ಪ್ರಶಾಂತ್‌ರವರು 5ನೇ ಬೋರ್ಡ್ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡರು. ಪುತ್ತೂರಿನ ಜೀನಿಯಸ್ ಚೆಸ್ ಅಕಾಡೆಮಿಯಲ್ಲಿ ತರಬೇತಿಯನ್ನು ಪಡೆದ ಇವರು ಕೌಡಿಚ್ಚಾರ್ ನಿವಾಸಿ ಜಗದೀಶ್ ನಾಕ್ ಹಾಗೂ ಉಮಾ ನಾಕ್ ದಂಪತಿ ಪುತ್ರ. ಪ್ರಶಾಂತ್‌ರವರ ಸಾಧನೆಗೆ ಕಾಲೇಜ್‌ನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋ ಹಾಗೂ ಕಾಲೇಜ್‌ನ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರಕಾಶ್ ಡಿ’ಸೋಜ ಹಾಗೂ ಸೌಮ್ಯಲತಾರವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.