‘ಕಂಡಡೊಂಜಿ ದಿನ’

 

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಇದರ ವಜ್ರಮಹೋತ್ಸವದ ಸಂಭ್ರಮಾಚರಣೆಯ ಪ್ರಯುಕ್ತ ಕಾಲೇಜ್‌ನ ವಿಜ್ಞಾನ ಸಂಘ ಹಾಗೂ ಮಾನವಿಕ ಸಂಘದ ಜಂಟಿ ಆಶ್ರಯದಲ್ಲಿ ಕಾಲೇಜ್‌ನ ವಿಜ್ಞಾನ ಹಾಗೂ ಕಲಾ ವಿಭಾಗದ ವಿದ್ಯಾರ್ಥಿಗಳಿಗಾಗಿ ವಿಟ್ಲ-ಪಡ್ನೂರು ಕೊಡಂಗಾಯಿ ರಾಜೇಶ್ ಡಿ.ಕೊಟ್ಟಾರಿಯವರ ಗದ್ದೆಯಲ್ಲಿ ನ.19 ರಂದು ಕಂಡಡೊಂಜಿ ದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಅಧ್ಯಕ್ಷತೆ ವಹಿಸಿದ ಕಾಲೇಜ್‌ನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋರವರು ಹಿಂಗಾರವನ್ನು ಅರಳಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಹಿಂದೆ ಹಿರಿಯರು ಗದ್ದೆಗಳಲ್ಲಿ ಬೇಸಾಯ, ಕೃಷಿ ಮಾಡುತ್ತಾ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿತ್ತು. ಅದರೆ ಇಂದಿನ ವಾಟ್ಸಫ್ ಯುಗದಲ್ಲಿ ಮನುಷ್ಯ ಸಿರಿತನವನ್ನು ಅನುಭವಿಸಬೇಕು, ದುಡಿಯದೆ ಸಾಕಷ್ಟು ಹಣವನ್ನು ಗಳಿಸಬೇಕು ಎನ್ನುತ್ತಾ ಸ್ವಾರ್ಥಿಯಾಗಿ ಜೀವನಕ್ಕೆ ಸಹಕಾರಿಯಾಗುತ್ತಿದ್ದ ಗದ್ದೆಗಳಲ್ಲಿ ಕಟ್ಟಡಗಳನ್ನು ನಿರ್ಮಿಸಿ ಮಾನವ ನಿರ್ಮಿತ ದುಷ್ಪರಿಣಾಮಕ್ಕೆ ಕಾರಣವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಇಂದಿನ ಯುವ ಸಮೂಹಕ್ಕೆ ಹಿಂದಿನ ಗದ್ದೆಗಳ ಸಂಸ್ಕೃತಿ ಬಗ್ಗೆ ಎಳ್ಳಷ್ಟು ಮಾಹಿತಿಯಿಲ್ಲ. ಈ ನಿಟ್ಟಿನಲ್ಲಿ ಇಂದಿನ ಯುವ ಸಮೂಹಕ್ಕೆ ಗದ್ದೆ ಕೃಷಿ ಎಷ್ಟು ಪ್ರಯೋಜನಕಾರಿ ಎಂಬುದಕ್ಕೆ ಕಾಲೇಜ್‌ನ ವಿಜ್ಞಾನ ಸಂಘ ಹಾಗೂ ಮಾನವಿಕ ಸಂಘದವರು ಒಂದು ದಿನದ ಈ ಕಾರ್ಯಕ್ರಮ ಏರ್ಪಡಿಸಿದ್ದು ಶ್ಲಾಘನೀಯ ಎಂದರು.

ಬಳಿಕ ಕಾಲೇಜ್‌ನ ವಿದ್ಯಾರ್ಥಿಗಳಿಗೆ ಕೆಸರು ಗದ್ದೆಯಲ್ಲಿ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಇದರಲ್ಲಿ ಪ್ರಮುಖವಾಗಿ 100ಮೀ ಓಟ, ಹಗ್ಗ-ಜಗ್ಗಾಟ, ಉಪ್ಪು ಮೂಟೆ, ಮೂರು ಕಾಲು ಓಟ, ನಿಂಬೆ-ಚಮಚ ನಡೆತ, ಬಲೂನ್ ಸ್ಪರ್ಧೆ, ಹಾಳೆ ಎಳೆತ, ಲಕ್ಕಿ ಗೇಮ್ಸ್ ಸ್ಪರ್ಧೆ, ಉಪನ್ಯಾಸಕರುಗಳಿಗೆ 100 ಮೀ.ಓಟ ಹಾಗೂ ಹಗ್ಗ-ಜಗ್ಗಾಟವನ್ನು ಏರ್ಪಡಿಸಲಾಗಿತ್ತು. ಕೃಷಿ ಪರಂಪರೆ, ಹಳ್ಳಿಯ ಸೊಬಗು, ಜೀವನ ಶೈಲಿ, ಕೃಷಿ ಚಟುವಟಿಕೆಗಳಿಗೆ ಆದ್ಯತೆ ಹಾಗೂ ವಿದ್ಯಾರ್ಥಿಗಳಿಗೆ ಅದರ ವಿಶೇಷತೆಯನ್ನು ಮನದಟ್ಟು ಮಾಡಿ ಕೊಡುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

ಸಾಯಂಕಾಲ ನಡೆದ ಸಮಾರೋಪ ಸಮಾರಂಭದಲ್ಲಿ ವಿಟ್ಲ-ಪಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವೀಶ್ ಕಾರ್ಕಳ್, ಸ್ಥಳೀಯ ಮುಖಂಡರಾದ ಜಗನ್ನಾಥ್ ಹಾಗೂ ನೆಹರು ಪದವಿ ಕಾಲೇಜ್‌ನ ದೈಹಿಕ ಶಿಕ್ಷಣ ನಿರ್ದೇಶಕರಾದ ಸೀತಾರಾಮ ಗೌಡರವರು ಉಪಸ್ಥಿತರಿದ್ದರು. ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಈ ಸಂದರ್ಭದಲ್ಲಿ ಬಹುಮಾನವನ್ನು ನೀಡಿ ಅಭಿನಂದಿಸಲಾಯಿತು. ಆಟೋಟ ಸ್ಪರ್ಧೆಗಳನ್ನು ಆಯೋಜಿಸಲು ಸಹಕರಿಸಿದ ಸೀತಾರಾಮ ಗೌಡರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕ ಹರ್ಷದ್ ಇಸ್ಮಾಯಿಲ್ ವಿಜೇತರ ಪಟ್ಟಿಯನ್ನು ಓದಿದರು. ವಿಜ್ಞಾನ ಸಂಘದ ನಿರ್ದೇಶಕಿ ಹಾಗೂ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ದಿವ್ಯಾ ಕೆ ಮತ್ತು ಮಾನವಿಕ ಸಂಘದ ನಿರ್ದೇಶಕಿ, ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕಿ ಜ್ಯೋತಿರವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹಿರಿಯ ಉಪನ್ಯಾಸಕರುಗಳಾದ ರಸಾಯನಶಾಸ್ತ್ರ ವಿಭಾಗದ ಅಶ್ವಿನಿ ಕೆ, ಕನ್ನಡ ವಿಭಾಗದ ಉಪನ್ಯಾಸಕಿ ಉಷಾ ಯಶ್ವಂತ್, ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕ ಅನಿಲ್ ಕುಮಾರ್, ವಾಣಿಜ್ಯ ವಿಭಾಗದ ಉಪನ್ಯಾಸಕ ಸಂಜಯ್, ಆಡಳಿತ ಸಿಬ್ಬಂದಿಗಳಾದ ಮಾರ್ಟಿನ್ ಡಿ’ಸೋಜ, ರಾಮಚಂದ್ರರವರು ಸಹಕರಿಸಿದರು. ಸುಮಾರು 85 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮಧ್ಯಾಹ್ನದ ಭೋಜನವಾಗಿ ಗಂಜಿ-ಚಟ್ನಿ, ಮಜ್ಜಿಗೆ ಹಾಗೂ ನಾಟಿ ಕೋಳಿ ಖಾದ್ಯ ಕಾರ್ಯಕ್ರಮದ ವಿಶೇಷತೆಯಾಗಿತ್ತು.

ರಶ್ಮಿತ ಮತ್ತು ಬಳಗ ಪ್ರಾರ್ಥಿಸಿದರು. ಅರ್ಪಿತ ಸ್ವಾಗತಿಸಿ ವಂದಿಸಿದರು. ದ್ವಿತೀಯ ವಿಜ್ಞಾನ ವಿಭಾಗದ ಜಯೇಶ್‌ರವರು ಕಾರ್ಯಕ್ರಮ ನಿರೂಪಿಸಿದರು.