ಬಾಲವನಕ್ಕೆ ಅಧ್ಯಯನ ಭೇಟಿ

ಮಾದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನ ಪ್ರಥಮ ಹಾಗೂ ದ್ವಿತೀಯ ಕಲಾ ವಿಭಾಗದ ವಿದ್ಯಾರ್ಥಿಗಳು ಇಲ್ಲಿನ ಪರ್ಲಡ್ಕ ಡಾ.ಶಿವರಾಮ ಕಾರಂತ ಬಾಲವನಕ್ಕೆ ನ.16 ರಂದು ಅಧ್ಯಯನ ಭೇಟಿ ನೀಡಿದರು

ಬಾಲವನದಲ್ಲಿನ ಶಿವರಾಮ ಕಾರಂತರ ನವೀಕೃತ ನಿವಾಸ, ಬರಹ ಕೊಠಡಿ, ಆರ್ಟ್ ಗ್ಯಾಲರಿ, ಗ್ರಂಥಾಲಯಗಳ ವಿದ್ಯಾರ್ಥಿಗಳು ವೀಕ್ಷಿಸಿದರು ಮಾತ್ರವಲ್ಲದೆ ಕಲಾ ವಿಭಾಗದ ಮುಖ್ಯಸ್ಥ ಭರತ್ ಕುಮಾರ್‌ರವರು ಡಾ.ಶಿವರಾಮ ಕಾರಂತರ ಜೀವನ ಹಾಗೂ ಕೃತಿಗಳ ಕುರಿತು ಉಪನ್ಯಾಸ ನೀಡಿದರು. ಕಲಾ ವಿಭಾಗದ 80  ವಿದ್ಯಾರ್ಥಿಗಳು ಈ ಅಧ್ಯಯನ ಭೇಟಿ ಸಂದರ್ಭದಲ್ಲಿನ ಪ್ರಯೋಜನವನ್ನು ಪಡೆದುಕೊಂಡರು. ಕಲಾ ವಿಭಾಗದ ಉಪನ್ಯಾಸಕರಾದ ಜ್ಯೋತಿ ಹಾಗೂ ಸವಿತಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾಲೇಜ್‌ನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋರವರ ಮಾರ್ಗದರ್ಶನದಲ್ಲಿ ಈ ಅಧ್ಯಯನ ಭೇಟಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.