ಫಿಲೋಮಿನಾ ಪ.ಪೂ ಕಾಲೇಜು-ನಮ್ಮ ನಡಿಗೆ ಜಾಂಬ್ರಿ ಕಡೆಗೆ
ಪುತ್ತೂರು: ಸಂತ ಫಿಲೋಮಿನಾ ಪ. ಪೂ ಕಾಲೇಜಿನ ಸಂಸ್ಕೃತ ಸಂಘ, ರೋವರ್ಸ್ ಮತ್ತು ರೇಂಜರ್ಸ್ ಘಟಕ ಹಾಗೂ ಇಕೋ ಕ್ಲಬ್ ಇದರ ಆಶಯದಲ್ಲಿ ಸೆ.16ರಂದು ಕಾಸರಗೋಡು ಜಿಲ್ಲೆಯ ನೆಟ್ಟಣಿಗೆ ಗ್ರಾಮದ ಜಾಂಬ್ರಿ ಗುಹೆಗೆ ಕಾಲ್ನಡಿಗೆ ಭೇಟಿ ಕಾರ್ಯಕ್ರಮ ನಡೆಯಿತು.
ಕಾಲೇಜಿನ 120 ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ತಂಡ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗಿಳಿಯಾಲು ಮಹಾಬಲೇಶ್ವರ ಭಟ್ಟರವರು ಮಾತನಾಡಿ ಇಂತಹ ಅನೇಕ ಪುಣ್ಯ ಸ್ಥಳವನ್ನು ಗುರುತಿಸಿ ರಕ್ಷಿಸಬೇಕು. ವಿದ್ಯಾರ್ಥಿಗಳು ಪಾಠದ ಜೊತೆಗೆ ಇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು. ಜೊತೆಗೆ ಗುಹೆಯ ಐತಿಹಾಸಿಕ ಮಾಹಿತಿಯನ್ನು ನೀಡಿದರು. ಕಡಂದೇಲು ರಾಮಚಂದ್ರ ಭಟ್ಟರವರು ಬೆಳಗ್ಗಿನ ಉಪಹಾರವನ್ನು ನೀಡಿದರು. ಭರಣ್ಯ ಗಣಪತಿ ಭಟ್ಟರವರು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಿದರು. ಗಿಳಿಯಾಲು ಮಹಾಬಲೇಶ್ವರ ಭಟ್ಟ ಲಘು ಪಾನೀಯ ವ್ಯವಸ್ಥೆಯನ್ನು ಮಾಡಿದರು.
ಕಾಲೇಜಿನ ಪ್ರಾಚಾರ್ಯರಾದ ರೆ .ಫಾ ಅಶೋಕ್ ರಾಯನ್ ಕ್ರಾಸ್ತಾ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.