ಅಖಿಲ ಭಾರತ ಹುಡುಗಿಯರ ಟ್ರಕ್ಕಿಂಗ್ ಶಿಬಿರಕ್ಕೆ ಈರ್ವರು ಆಯ್ಕೆ

ಊಟಿಯಲ್ಲಿ ಒಂಭತ್ತು ದಿನಗಳ ಕಾಲ ನಡೆದಿರುವ ಅಖಿಲ ಭಾರತ ಹುಡುಗಿಯರ ಟ್ರಕ್ಕಿಂಗ್ ಶಿಬಿರಕ್ಕೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ಎನ್‍ಸಿಸಿಯ ಈರ್ವರು ವಿದ್ಯಾರ್ಥಿನಿಯರು ಭಾಗವಹಿಸಿದ್ದಾರೆ.

ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ಈರ್ವರು ವಿದ್ಯಾರ್ಥಿನಿಯರಾದ ದ್ವಿತೀಯ ಪಿಸಿಎಂಬಿ-ಡಿ ವಿಭಾಗದ ರಕ್ಷಾ ಅಂಚನ್ ಹಾಗೂ ದ್ವಿತಿಯ ಕಲಾ ವಿಭಾಗದ ಕ್ಯಾತ್ರಿನ ಪಿ.ಎಕ್ಸ್‍ರವರೇ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್‍ನ್ನು ಪ್ರತಿನಿಧಿಸುವವರಾಗಿರುತ್ತಾರೆ. ಟ್ರಕ್ಕಿಂಗ್ ಶಿಬಿರದಲ್ಲಿ ಭಾಗವಹಿಸಿದವರ ಪೈಕಿ ಮಡಿಕೇರಿಯಿಂದ ಐವರು ವಿದ್ಯಾರ್ಥಿನಿಯರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಿಂದ ಫಿಲೋಮಿನಾದ ರಕ್ಷಾ ಅಂಚನ್ ಹಾಗೂ ಕ್ಯಾತ್ರಿನಾರವರೀರ್ವರೇ ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ. ಆಯ್ಕೆಯಾದ ಶಿಬಿರಾರ್ಥಿಗಳು ಟ್ರಕ್ಕಿಂಗ್‍ನಲ್ಲಿ 65ಕಿ.ಮೀ ನಡಿಗೆ ನಡೆಸಿ, 7500 ಅಡಿ ಎತ್ತರದ ಪರ್ವತವನ್ನು ಏರಿರುತ್ತಾರೆ. ಇದರಲ್ಲಿ ರಕ್ಷಾ ಅಂಚನ್‍ರವರು ಎನ್‍ಸಿಸಿಯಲ್ಲಿ ಮಾತ್ರವಲ್ಲದೆ ಅಥ್ಲೆಟಿಕ್ ನಡಿಗೆ ಸ್ಪರ್ಧೆಯಲ್ಲೂ ಗಮನಾರ್ಹ ಸಾಧನೆಯನ್ನು ಮಾಡಿರುವ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಾರೆ. ರಕ್ಷಾ ಅಂಚನ್‍ರವರು ನೆಲ್ಯಾಡಿ ನಿವಾಸಿ ರಮೇಶ್ ಪೂಜಾರಿ ಹಾಗೂ ಉಷಾ ಅಂಚನ್‍ರವರ ಪುತ್ರಿ. ಕ್ಯಾತ್ರಿನಾರವರು ಮಡಿಕೇರಿ ನಿವಾಸಿ ಝೇವಿಯರ್ ಹಾಗೂ ಮರಿಯಮ್ಮರವರ ಪುತ್ರಿಯಾಗಿರುತ್ತಾರೆ ಎಂದು ಕಾಲೇಜ್‍ನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋ ಹಾಗೂ ಎನ್‍ಸಿಸಿ ಲೆಪ್ಟಿನೆಂಟ್ ಜೋನ್ಸನ್ ಡೇವಿಡ್ ಸಿಕ್ವೇರಾರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.