ಚಾರಣ ಮತ್ತು ಸಸ್ಯ ವೀಕ್ಷಣೆ

 

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ರೋವರ‍್ಸ್ ಮತ್ತು ರೇಂಜರ‍್ಸ್ ಹಾಗೂ ಸಂಸ್ಕೃತ ಸಂಘದ ಜಂಟಿ ಆಶ್ರಯದಲ್ಲಿ ಸಂಘಗಳ ನಿರ್ದೇಶಕರಾದ ಶ್ರೀ ಸಂದೇಶ್ ಲೋಬೊ, ಶ್ರೀ ಹರ್ಷದ್ ಇಸ್ಮಾಯಿಲ್ ಮತ್ತು ಶ್ರೀ ಸುರೇಶ್ ಕುಮಾರ್ ಇವರ ಮಾರ್ಗದರ್ಶನದಲ್ಲಿ ಪುತ್ತೂರು ತಾಲೂಕು ಆರ್ಲಪದವಿನ ಜಾಂಬ್ರಿ ಬೆಟ್ಟ ಪ್ರದೇಶಕ್ಕೆ ಸಂಘಗಳ ಒಟ್ಟು 80 ವಿದ್ಯಾರ್ಥಿಗಳ ತಂಡವು ದಿನಾಂಕ 02-07-2017 ರಂದು ಚಾರಣ ಕೈಗೊಂಡಿತು. ಅಲ್ಲಿರುವ ವಿವಿಧ ಪ್ರಸಿದ್ಧ ಸ್ಥಳ ವೀಕ್ಷಣೆ ಹಾಗೂ ವಿವಿಧ ಸಸ್ಯಗಳ ವೀಕ್ಷಣೆ, ಔಷಧೀಯ ಗಿಡ ಮೂಲಿಕೆಗಳ ಅಧ್ಯಯನ ಮಾಡಿದರು.

ಈ ಚಾರಣದಲ್ಲಿ ಕಾಲೇಜಿನ ಉಪನ್ಯಾಸಕರಾದ ಡಾ| ಆಶಾ ಸಾವಿತ್ರಿ, ಶ್ರೀ ರಾಮ ನಾಕ್, ಶ್ರೀ ರಾಮಚಂದ್ರ ಇವರು ಭಾಗವಹಿಸಿ ಸಹಕರಿಸಿದರು.