ಜಿಲ್ಲಾ ಮಟ್ಟದ ಈಜು ಸ್ಪರ್ಧೆ

ದಕ್ಷಿಣ ಕನ್ನಡ ಪದವಿ ಪೂರ್ವ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ 2018-19 ಸಾಲಿನ ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯ ಕ್ರೀಡಾಕೂಟದಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ಬಾಲಕಿಯರು ರನ್ನರ್ಸ್ ಆಪ್ ಪ್ರಶಸ್ತಿಯನ್ನು ಪಡೆಯುವುದರ ಮೂಲಕ ರಾಜ್ಯ ಮಟ್ಟದ ಈಜು ಚಾಂಪಿಯನ್‍ಶಿಪ್ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

ದ್ವಿತೀಯ ವಾಣಿಜ್ಯ ವಿಭಾಗದ ಸಿಂಚನಾ ಡಿ.ಗೌಡರವರು 2 ಚಿನ್ನ, 3 ಬೆಳ್ಳಿ ಪದಕ, ದ್ವಿತೀಯ ವಿಜ್ಞಾನ ವಿಭಾಗದ ಜೇನ್ ನೀನಾ ಕುಟಿನ್ಹಾರವರು 1 ಚಿನ್ನ, 4 ಬೆಳ್ಳಿ ಪದಕವನ್ನು, ಪ್ರಥಮ ವಾಣಿಜ್ಯ ವಿಭಾಗದ ತೃಪ್ತಿ ವಿ.ಎಸ್‍ರವರು 3 ಬೆಳ್ಳಿ, 1 ಕಂಚಿನ ಪದಕ ಹಾಗೂ ಪ್ರಥಮ ವಿಜ್ಞಾನ ವಿಭಾಗದ ನಯನಾರವರು 3 ಬೆಳ್ಳಿ, 1 ಕಂಚಿನ ಪದಕವನ್ನು ಪಡೆದುಕೊಂಡಿದ್ದು ಮಾತ್ರವಲ್ಲದೆ ಇವರು ನಾಲ್ವರು ಬಾಲಕಿಯರು ರಾಜ್ಯ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಬಾಲಕರ ವಿಭಾಗದ ಈಜು ಸ್ಪರ್ಧೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ತ್ರಿಶೂಲ್‍ರವರು 3 ಚಿನ್ನ, 1 ಬೆಳ್ಳಿ, ಕಂಚಿನ ಪದಕ ಪಡೆದು ರಾಜ್ಯ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಅಲ್ಲದೆ ತ್ರಿಶೂಲ್‍ರವರು ಆಸ್ಟ್ರೇಲಿಯಾದ ಆ್ಯಡಿಲೇಡ್‍ನಲ್ಲಿ ನಡೆಯಲಿರುವ ಅಂತರ್ರಾಷ್ಟ್ರೀಯ ಈಜು ಚಾಂಪಿಯನ್‍ಶಿಪ್-2018 ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ದ್ವಿತೀಯ ವಿಜ್ಞಾನ ವಿಭಾಗದ ಆಶ್ರಿತ್‍ರವರು 2 ಬೆಳ್ಳಿ, 3 ಕಂಚು, ಆಶ್ಲೆಯ್ ಬ್ರೇನ್ ಲೋಬೋರವರು 1 ಬೆಳ್ಳಿ, 2 ಕಂಚು ಹಾಗೂ ಶಾನ್ ಜೋಸೆಫ್ ಡಿ’ಸೋಜರವರು 1 ಬೆಳ್ಳಿ, 1 ಕಂಚಿನ ಪದಕವನ್ನು ಗಳಿಸಿಕೊಂಡಿದ್ದಾರೆ ಎಂದು ಕಾಲೇಜ್‍ನ ಪ್ರಾಂಶುಪಾಲ ವಂ|ವಿಜಯ್ ಲೋಬೋ, ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರಕಾಶ್ ಡಿ’ಸೋಜ, ರಾಜೇಶ್ ಮೂಲ್ಯರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.