ಆಸ್ಟ್ರೇಲಿಯಾದ ಆ್ಯಡಿಲೇಡ್‍ನಲ್ಲಿ ಜರಗುವ ಅಂತರಾಷ್ಟ್ರೀಯ ವಿಶ್ವ ಚಾಂಪಿಯನ್‍ಶಿಪ್ ಈಜು ಸ್ಪರ್ಧೆ

ಆಸ್ಟ್ರೇಲಿಯಾದ ಆ್ಯಡಿಲೇಡ್ ನಲ್ಲಿ ಜರಗುವ ಅಂತರಾಷ್ಟ್ರೀಯ ಜೀವರಕ್ಷಕ ವಿಶ್ವ ಚಾಂಪಿಯನ್‍ಶಿಪ್ ಈಜು ಸ್ಪರ್ಧೆಗೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿ ತ್ರಿಶೂಲ್‍ರವರು ಆಯ್ಕೆಯಾಗಿ ಭಾರತ ದೇಶವನ್ನು ಪ್ರತಿನಿಧಿಸಲಿದ್ದಾರೆ.

ಪುಣೆಯಲ್ಲಿ ನಡೆದ ರಾಷ್ಟ್ರಮಟ್ಟದ ಜೀವರಕ್ಷಕ ಈಜು ಚಾಂಪಿಯನ್‍ಶಿಪ್‍ನಲ್ಲಿ ನಡೆದ ಆಯ್ಕೆ ಟ್ರಯಲ್‍ನಲ್ಲಿ 17 ರ ಹರೆಯದ ತ್ರಿಶೂಲ್‍ರವರು ಉತ್ತೀರ್ಣರಾಗಿ ಯುವ ಪ್ರತಿಷ್ಟಿತ ಅಂತರಾಷ್ಟ್ರೀಯ ಜೀವರಕ್ಷಕ ವಿಶ್ವಚಾಂಪಿಯನ್‍ಶಿಪ್ ಈಜು ಸ್ಪರ್ಧೆಗೆ ಅರ್ಹತೆಗಿಟ್ಟಿಸಿದ ಪ್ರತಿಭಾನ್ವಿತರೆನಿಸಿಕೊಂಡಿದ್ದಾರೆ. ದ.ಕ. ಪ.ಪೂ. ಶಿಕ್ಷಣ ಇಲಾಖೆಯ ಆಶ್ರಯದಲ್ಲಿ 2018-19 ಸಾಲಿನ ಪ.ಪೂ. ಶಿಕ್ಷಣ ವಿದ್ಯಾರ್ಥಿಗಳ ಜಿಲ್ಲಾಮಟ್ಟದ ಈಜು ಸ್ಪರ್ಧೆಯ ಕ್ರೀಡಾಕೂಟದಲ್ಲಿ 3 ಚಿನ್ನ, 1 ಬೆಳ್ಳಿ, ಕಂಚಿನ ಪದಕ ಪಡೆದು ರಾಜ್ಯಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.