ಸ್ವಸ್ತಿಕ್ ಪಿ. ರಾಜ್ಯದಲ್ಲಿ ತೃತೀಯ ಸ್ಥಾನ


 
ಪುತ್ತೂರು 2018-19ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವು ಪ್ರಕಟಣೆಗೊಂಡಿದ್ದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾದ ಸ್ವಸ್ತಿಕ್ ಪಿ. ಇವರು ವಾಣಿಜ್ಯ ವಿಭಾಗದಲ್ಲಿ 594 ಅಂಕಗಳನ್ನು ಪಡೆದು ರಾಜ್ಯದಲ್ಲಿ ತೃತೀಯ ಸ್ಥಾನವನ್ನು ದಾಖಲಿಸಿರುತ್ತಾರೆ.

ಅರ್ಥಶಾಸ್ತ್ರ -100, ಲೆಕ್ಕಶಾಸ್ತ್ರ-100, ಸಂಖ್ಯಾಶಾಸ್ತ್ರ-100 , ಸಂಸ್ಕøತ -100, ಇಂಗ್ಲಿಷ್-95 ಮತ್ತು ಬಿಸಿನೆಸ್ ಸ್ಟಡೀಸ್-99 ಅಂಕಗಳನ್ನು ಪಡೆದು ಸಂಸ್ಥೆಯ ಕೀರ್ತಿಯನ್ನು ಬೆಳಗಿಸಿದ್ದಾನೆ.

ಮಾಡವು ನಿವಾಸಿಯಾದ ಶ್ರೀ ಕೃಷ್ಣಮೂರ್ತಿ ಪಿ. ಹಾಗೂ ವಿದ್ಯಾ ದಂಪತಿಗಳ ಪುತ್ರನಾಗಿರುತ್ತಾನೆ.

600 ಅಂಕಗಳಲ್ಲಿ 594 ಅಂಕಗಳು ಬಂದಿರುವುದು ನನಗೆ ಅತೀವ ಸಂತೋಷವನ್ನುಂಟುಮಾಡಿದೆ. ಗುರುಗಳ ಮಾರ್ಗದರ್ಶನ, ಹೆತ್ತವರ ಪ್ರೋತ್ಸಾಹ ಹಾಗೂ ತಂಗಿಯ ಜೊತೆಗೆ ಕಲಿಕೆಯು ಉತ್ತಮ ಅಂಕಗಳನ್ನು ಗಳಿಸಲು ಸಹಕಾರಿಯಾಯಿತು. ಪ್ರತಿನಿತ್ಯ 5ಗಂಟೆಗಳ ಶ್ರಮದಿಂದ ಅಂಕಗಳನ್ನು ಗಳಿಸಲು ಸಾಧ್ಯವಾಯಿತು.
                                                                                                                                             –ಸ್ವಸ್ತಿಕ್ ಪಿ., ದ್ವಿತೀಯ ವಾಣಿಜ್ಯ ವಿಭಾಗ