ರಾಷ್ಟ್ರೀಯ ಚಾಂಪಿಯನ್‍ಶಿಪ್

ಚೆನ್ನೈನ ಕೊವಲಮ್‍ನಲ್ಲಿ ನಡೆದ ಮ್ಯೂಸಿಕ್ ಯೋಗ ಫೆಸ್ಟಿವಲ್ 2018ರ ಸರ್ಫಿಂಗ್‍ನ ಮಹಿಳಾ ವಿಭಾಗ(6ನೇ ಕೊವಲಿಂಗ್ ಪಾಯಿಂಟ್)ದಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸಿಂಚನಾ ಡಿ.ಗೌಡರವರು 5ನೇ ಬಾರಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇವರು ಮಂಗಳೂರಿನ ಸ್ಟೋಕ್ಡ್ ಸರ್ಫರ್ಸ್ ಕ್ಲಬ್‍ನಲ್ಲಿ ಶ್ರೀಕೃಷ್ಣ ವಸಂತ್‍ರವರಲ್ಲಿ ತರಬೇತಿ ಪಡೆಯುತ್ತಿದ್ದು, ಇವರು ಪುತ್ತೂರಿನ ನೆಹರುನಗರ ನಿವಾಸಿ ದೇರಪ್ಪ ಗೌಡ ಕಲ್ಲೇಗ ಮತ್ತು ಮೀನಾಕ್ಷಿ ದಂಪತಿ ಪುತ್ರಿ.ಇವರನ್ನು ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ವಿಜಯ್ ಲೋಬೊ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಕಾಶ್ ಡಿ’ಸೋಜ ಮತ್ತು ಸತೀಶ್ ಮೂಲ್ಯರವರು ಅಭಿನಂದಿಸಿದರು.