ವಿದ್ಯಾರ್ಥಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

 

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ 2019-20 ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ದಿನಾಂಕ 29-05-2019 ರಂದು ಸಭಾಂಗಣದಲ್ಲಿ ನಡೆಯಿತು.

ವಿದ್ಯಾರ್ಥಿ ಸಂಘದ ನಾಯಕನಾಗಿ ದ್ವಿತೀಯ ವಾಣಿಜ್ಯ ಎಸ್.ಇ.ಬಿ.ಎ.- ‘ಎ’ ವಿಭಾಗದ ಶೋಭಿತ್ ರೈ ಎಂ. ಇವರು ಆಯ್ಕೆಯಾಗಿರುತ್ತಾರೆ. ಇವರು ಮರಿಕೆ ನಿವಾಸಿಯಾದ ಜಯಪ್ರಸಾದ ರೈ ಎಂ. ಹಾಗೂ ಸತ್ಯಶೀಲಾ ಜೆ. ರೈ ದಂಪತಿಗಳ ಪುತ್ರ.

ಕಾರ್ಯದರ್ಶಿಯಾಗಿ ದ್ವಿತೀಯ ಕಲಾ ವಿಭಾಗದ ಸತ್ಯಾತ್ಮ ಭಟ್ ಕೆ. ಇವರು ಆಯ್ಕೆಯಾಗಿದ್ದು, ಇವರು ಮುರ ಬನಾರಿ ನಿವಾಸಿಯಾದ ಶಾಂತ ರವಿ ಕುಂಟಿನಿ ದಂಪತಿಗಳ ಪುತ್ರ.

ಜತೆ ಕಾರ್ಯದರ್ಶಿಯಾಗಿ ದ್ವಿತೀಯ ವಿಜ್ಞಾನ ಪಿ.ಸಿ.ಎಂ.ಸಿ. ವಿಭಾಗದ ಕ್ಯಾಲಿನ್ ಡಿ’ಸೋಜ ಆಯ್ಕೆಯಾಗಿರುತ್ತಾರೆ. ಇವರು ಪಡೀಲ್ ನಿವಾಸಿ ಎಂ.ಡಿ.ಎಸ್. ಸಂಸ್ಥೆಯ ಮಾಲಕರಾದ ಹೆನ್ರಿ ಡಿ’ಸೋಜ ಮತ್ತು ಈಟ ಡಿ’ಸೋಜ ದಂಪತಿಗಳ ಸುಪುತ್ರಿಯಾಗಿರುತ್ತಾರೆ.

ಆಯ್ಕೆ ಪ್ರಕ್ರೀಯೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ರೆ|ಫಾ| ವಿಜಯ್ ಲೋಬೊ, ವಿದ್ಯಾರ್ಥಿ ಸಂಘದ ನಿರ್ದೇಶಕರಾದ ಉಪನ್ಯಾಸಕ ಯಶವಂತ್ ಎಂ. ಡಿ., ಶ್ರೀಮತಿ ಉಷಾ ಎ., ಶ್ರೀಮತಿ ಲವೀನ ಸಾಂತುಮಯೋರ್ ಉಪಸ್ಥಿತರಿದ್ದರು