ವಿದ್ಯಾರ್ಥಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

 

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ 2018-19 ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ ಪ್ರಕ್ರೀಯೆ ದಿನಾಂಕ 28/05/2018 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ವಿದ್ಯಾರ್ಥಿ ಸಂಘದ ನಾಯಕನಾಗಿ ದ್ವಿತೀಯ ವಾಣಿಜ್ಯ ವಿಭಾಗ(ಎಸ್‌ಸಿಬಿಎ)ದ ಆಕಾಶ್ ಸಿ ಭಟ್ ಇವರು ಆಯ್ಕೆಯಾದರು. ಇವರು ಮೊಟ್ಟೆತ್ತಡ್ಕ ನಿವಾಸಿ ಶ್ರೀ ಚಂದ್ರಶೇಕರ್ ಭಟ್ ಮತ್ತು ಶ್ರೀಮತಿ ಶ್ರೀದೇವಿ ಸಿ ಭಟ್ ರವರ ಪುತ್ರ. ಕಾರ್ಯದರ್ಶಿಯಾಗಿ ದ್ವಿತೀಯ ವಾಣಿಜ್ಯ ವಿಭಾಗ(ಎಸ್‌ಇಬಿಎ)ದ ಶ್ರೀದೇವಿ ಕೆ ರವರು ಆಯ್ಕೆಯಾದರು.. ಇವರು ಪುತ್ತೂರು ನಿವಾಸಿ ಶ್ರೀ ಮಹಾಬಲ ಭಟ್ ಮತ್ತು ಸಂತ ಫಿಲೋಮಿನಾ ಕಾಲೇಜಿನ ಉಪನ್ಯಾಸಕಿ ಪ್ರೇಮಲತಾ ಕೆ ದಂಪತಿಗಳ ಪುತ್ರಿ. ಜತೆ ಕಾರ್ಯದರ್ಶಿಯಾಗಿ ದ್ವಿತೀಯ ವಿಜ್ಞಾನ (ಪಿ.ಸಿ.ಎಂ.ಬಿ) ವಿಭಾಗದ ಡೆಲ್ಮಾ ಲೋರ ಡಿಕುನ್ಹಾ ಆಯ್ಕೆಯಾದರು. ಇವರು ಶಾಂತಿಗೋಡಿನ ಮರಕ್ಕೂರು ನಿವಾಸಿಯಾದ ದಿವಂಗತ ಡೆನಿಸ್ ಡಿಕುನ್ಹಾಮತ್ತು ಲೂಸಿ ಡಿಕುನ್ಹಾದಂಪತಿಗಳ ಪುತ್ರಿಯಾಗಿರುತ್ತಾರೆ.

ಆಯ್ಕೆ ಪ್ರಕ್ರೀಯೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ರೆ|ಫಾ| ವಿಜಯ್ ಲೋಬೊ , ವಿದ್ಯಾರ್ಥಿ ಸಂಘದ ನಿರ್ದೇಶಕರಾದ ಉಪನ್ಯಾಸಕ ಯಶವಂತ್ ಎಂ.ಡಿ. , ಶೀಮತಿ ಉಷಾ ಎ. , ಶ್ರೀಮತಿ ಲವೀನ ಸಾಂತುಮಯೋರ್ ಉಪಸ್ಥಿತರಿದ್ದರು.