ರಾಜ್ಯಮಟ್ಟದ ಅಥ್ಲೆಟಿಕ್ಸ್ ಪೋಲ್‍ವಾಲ್ಟ್

ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿ ಭವಿತ್ ಕುಮಾರ್‍ರವರು 3.80ಮೀ. ಎತ್ತರಕ್ಕೆ ಜಿಗಿದು ಚಿನ್ನದ ಪದಕ ಹಾಗೂ ಕೂಟ ದಾಖಲೆಯೊಂದಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಭವಿತ್ ಕುಮಾರ್‍ರವರು ಈ ಹಿಂದಿನ 3.60ಮೀ. ದಾಖಲೆಯನ್ನು ಅಳಿಸಿ ನೂತನ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. 2019, ಜನವರಿಯಲ್ಲಿ ದೆಹಲಿಯಲ್ಲಿ ಜರಗಲಿರುವ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾದವರು ಆಯೋಜಿಸಲಿರುವ ಪದವಿ ಪೂರ್ವ ಕಾಲೇಜುಗಳ 19 ವರ್ಷದ ವಯೋಮಿತಿಯ ರಾಷ್ಟ್ರಮಟ್ಟದ ಪೋಲ್‍ವಾಲ್ಟ್ ಸ್ಪರ್ಧೆಗೆ ಭವಿತ್ ಕುಮಾರ್‍ರವರು ಭಾಗವಹಿಸಲಿದ್ದಾರೆ. ಭವಿತ್‍ರವರು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ 3.80ಮೀ ಹಾಗೂ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ 3.70ಮೀ ಜಿಗಿದು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದರು. ಸೆಪ್ಟೆಂಬರ್‍ನಲ್ಲಿ ಮೂಡಬಿದ್ರೆಯ ಸ್ವರಾಜ್ಯ ಮೈದಾನದಲ್ಲಿ ಜರಗಿದ ರಾಜ್ಯ ಅಮೆಚೂರು ಅಥ್ಲೆಟಿಕ್ಸ್ ಪೋಲ್‍ವಾಲ್ಟ್‍ನ 20 ವರ್ಷದ ವಯೋಮಿತಿಯ ಸ್ಪರ್ಧೆಯಲ್ಲಿ 3.50ಮೀ. ಎತ್ತರ ಜಿಗಿದು ಬೆಳ್ಳಿ ಪದಕವನ್ನು ಪಡೆದಿದ್ದರು.

ಭವಿತ್ ಕುಮಾರ್‍ರವರು ಶಾಂತಿಗೋಡು ಮರಕ್ಕೂರು ನಿವಾಸಿ ಎಂ.ಶ್ರೀಧರ್ ಪೂಜಾರಿ ಹಾಗೂ ಎಂ.ವನಜಾಕ್ಷಿ ದಂಪತಿ ಪುತ್ರ. ರಕ್ಷಾ ಅಂಚನ್‍ರವರು ತಾಲೂಕು ಪಂಚಾಯತ್ ಸದಸ್ಯೆ ಉಷಾ ಅಂಚನ್ ಹಾಗೂ ರವರ ಪುತ್ರಿ. ಭವಿತ್ ಕುಮಾರ್‍ರವರಿಗೆ ಮಾಜಿ ರಾಷ್ಟ್ರೀಯ ಪೋಲ್‍ವಾಲ್ಟ್ ಕ್ರೀಡಾಪಟು ಹಾಗೂ ಕಾಲೇಜ್‍ನ ಹಿರಿಯ ವಿದ್ಯಾರ್ಥಿ ಸಜ್ಜನ್ ಕುಮಾರ್‍ರವರು ತರಬೇತಿಯನ್ನು ನೀಡಿರುತ್ತಾರೆ ಎಂದು ಕಾಲೇಜು ಪ್ರಾಂಶುಪಾಲ ವಂ|ವಿಜಯ್ ಲೋಬೋ, ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರಕಾಶ್ ಡಿ’ಸೋಜ ಹಾಗೂ ರಾಜೇಶ್ ಮೂಲ್ಯರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.