ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾ ಕೂಟಾ


ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾ ಕೂಟಾದಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಕ್ರೀಡಾಪಟುಗಳು ಒಂದು ಚಿನ್ನ ಹಾಗೂ ಒಂದು ಕಂಚಿನ ಪದಕವನ್ನು ಕೊರಳಿಗೇರಿಸುವ ಮೂಲಕ ಸಾಧನೆಯನ್ನು ಮಾಡಿರುತ್ತಾರೆ. ದ್ವಿತೀಯ ಕಲಾ ವಿಬ್ಃಆಗದ ಭವಿತ್ ಕುಮಾರ್ ಇವರು ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ ಕೂಟದಾಖಾಲೆಯೊಂದಿಗೆ ಚಿನ್ನದ ಪದಕವನ್ನು ಪಡೆದುಕೊಂಡಿರುತ್ತಾರೆ. ೩.೮೦ ಮೀ ಜಿಗಿಯುವುದರೊಂದಿಗೆ ಈ ಹಿಂದಿನ ೩.೬೦ ಮೀ ಇದ್ದ ದಾಖಲೆಯನ್ನು ಮುರಿದಿರುವ ಇವರಿಗೆ ಫಿಲೋಮಿನಾ ಕಾಳೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಮಾಜಿ ರಾಷ್ಟೀಯ ಪೋಲ್ ವಾಲ್ಟ್ ಕ್ರೀಡಾ ಪಟು ಶ್ರೀ ಸಜ್ಜನ್ ಕುಮಾರ್ ತರಭೇತಿ ನೀಡಿರುತ್ತಾರೆ. ಪ್ರಥಮ ವಿಜ್ಞಾನ ವಿಬ್ಃಆಗದ ರಕ್ಷಾ ಅಂಚನ್ ಇವರು ಬಾಲಕಿಯರ ವಿಭಾಗದ ಮೂರು ಕ್.ಮೀ. ನಡಿಗೆ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಫಾ| ವಿಜಯ್ ಲೋಬೊ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರಕಾಶ್ ಡಿಸೋಜ , ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.