ಅವಳಿ ಚಾಂಪಿಯನ್‍ಶಿಪ್

ಶ್ರೀ ಸೀತಾರಾಘವ ಪದವಿ ಪೂರ್ವ ಕಾಲೇಜು ಪೆರ್ನಾಜೆ ಇದರ ಆಶ್ರಯದಲ್ಲಿ ಪುತ್ತೂರಿನ ಕೊಂಬೆಟ್ಟು ಕ್ರೀಡಾಂಗಣದಲ್ಲಿ ಜರಗಿದ ಪದವಿ ಪೂರ್ವ ಕಾಲೇಜುಗಳ ಪುತ್ತೂರು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಬಾಲಕರ ಹಾಗೂ ಬಾಲಕಿಯರ ತಂಡಗಳೆರಡೂ ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಬಾಲಕರ ವಿಭಾಗ:
ವಿನೀತ್ ಜಿ.ಆರ್(ಹ್ಯಾಮರ್ ಎಸೆತ-ಚಿನ್ನ, ಡಿಸ್ಕಸ್ ಎಸೆತ-ಚಿನ್ನ, ಶಾಟ್‍ಫುಟ್-ಬೆಳ್ಳಿ), ಮಹಮ್ಮದ್ ನಿಯಾಝ್(100ಮೀ, 200ಮೀ-ಚಿನ್ನ, 4*100ಮೀ ರಿಲೇ-ಚಿನ್ನ), ಭವಿತ್(4*100ಮೀ ರಿಲೇ-ಚಿನ್ನ), ಆತ್ಮಿಕ್ ಕೆ.ಯು(ಶಾಟ್‍ಫುಟ್-ಬೆಳ್ಳಿ), ಸೈಫುಲ್ಲಾ ಖಾನ್(ಹ್ಯಾಮರ್ ಎಸೆತ-ಬೆಳ್ಳಿ, ಜಾವೆಲಿನ್ ಎಸೆತ-ಕಂಚು), ತೇಜಸ್ ಜೆ.ಎ(400ಮೀ-ಬೆಳ್ಳಿ, 4*100ಮೀ ರಿಲೇ-ಚಿನ್ನ, 4*400ಮೀ ರಿಲೇ-ಬೆಳ್ಳಿ), ಅಂಕಿತ್ ಬಿ.ಎಸ್(4*400ಮೀ ರಿಲೇ-ಬೆಳ್ಳಿ), ಅಭಿಷೇಕ್ ಕೆ.ಎಸ್(4*400ಮೀ-ಬೆಳ್ಳಿ), ಸುಜಿತ್ ಎಸ್.ಪಿ(4*400ಮೀ ರಿಲೇ-ಬೆಳ್ಳಿ), ದಿಲಾನ್ ರೈ ಬಿ.ವಿ(500ಮೀ ನಡಿಗೆ-ಕಂಚು), ಗೌರವ್ ಪವಾಣ್(ಜಾವೆಲಿನ್ ಎಸೆತ-ಬೆಳ್ಳಿ)ರವರು ಅನುಕ್ರಮವಾಗಿ ಪದಕಗಳನ್ನು ಪಡೆದುಕೊಂಡಿದ್ದಾರೆ.

ಬಾಲಕಿಯರ ವಿಭಾಗ:
ನೇಹಾ(100ಮೀ, 200ಮೀ-ಚಿನ್ನ, ತ್ರಿವಿಧ ಜಿಗಿತ-ಚಿನ್ನ, 4*400ಮೀ ರಿಲೇ-ಬೆಳ್ಳಿ), ಪ್ರಣಮ್ಯ ಶೆಟ್ಟಿ(ಡಿಸ್ಕಸ್ ಎಸೆತ-ಚಿನ್ನ, ಜಾವೆಲಿನ್ ಎಸೆತ-ಚಿನ್ನ, ಶಾಟ್‍ಫುಟ್-ಚಿನ್ನ), ರಕ್ಷಾ ಅಂಚನ್(3000ಮೀ ನಡಿಗೆ-ಚಿನ್ನ, 4*100ಮೀ ರಿಲೇ-ಬೆಳ್ಳಿ), ಹರ್ಷಿತಾ ಎ(800ಮೀ-ಬೆಳ್ಳಿ, 1500ಮೀ-ಕಂಚು, 4*100ಮೀ ರಿಲೇ-ಬೆಳ್ಳಿ, 3000ಮೀ-ಕಂಚು), ಹರ್ಷಿತಾ ಕೆ.ಎನ್(ಡಿಸ್ಕಸ್ ಎಸೆತ-ಬೆಳ್ಳಿ), ಅಂಕಿತಾ(ತ್ರಿವಿಧ ಜಿಗಿತ-ಕಂಚು), ಟೀನಾ ಟಲ್ವಿರಾ ಡಿ’ಸೋಜ(ಹ್ಯಾಮರ್ ಎಸೆತ-ಬೆಳ್ಳಿ), ವಿಶ್ಮಿತಾ ಡಿ’ಸೋಜ(4*100ಮೀ ರಿಲೇ-ಬೆಳ್ಳಿ)ರವರು ಅನುಕ್ರಮವಾಗಿ ಪದಕಗಳನ್ನು ಪಡೆದುಕೊಂಡಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ವಂ|ವಿಜಯ್ ಲೋಬೋ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರಕಾಶ್ ಡಿ’ಸೋಜ, ರಾಜೇಶ್ ಮೂಲ್ಯರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾಕ್ಸ್
ವಿನೀತ್ ಜಿ.ಆರ್, ನೇಹಾ, ಪ್ರಣಮ್ಯ ಶೆಟ್ಟಿ ಕೂಟದ ವೈಯಕ್ತಿಕ ಚಾಂಪಿಯನ್ಸ್..
ಬಾಲಕರ ವಿಭಾಗದಲ್ಲಿ 5 ಚಿನ್ನ, 5 ಬೆಳ್ಳಿ ಹಾಗೂ 3 ಕಂಚಿನ ಪದಕಗಳೊಂದಿಗೆ 43 ಅಂಕಗಳನ್ನು ಪಡೆದು ಚಾಂಪಿಯನ್ ಪಟ್ಟ ಗಳಿಸಿದೆ. ಬಾಲಕಿಯರ ವಿಭಾಗದಲ್ಲಿ 7 ಚಿನ್ನ, 4 ಬೆಳ್ಳಿ ಹಾಗೂ 3 ಕಂಚಿನ ಪದಕಗಳೊಂದಿಗೆ 50 ಅಂಕ ಪಡೆದು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಫಿಲೋಮಿನಾದ ವಿನೀತ್ ಜಿ.ಆರ್ ಬಾಲಕರ ವಿಭಾಗದಲ್ಲಿ ಮತ್ತು ಬಾಲಕಿಯರ ವಿಭಾಗದಲ್ಲಿ ನೇಹ ಹಾಗೂ ಪ್ರಣಮ್ಯ ಶೆಟ್ಟಿ ಹೊಸ ವೈಯಕ್ತಿಕ ಚಾಂಪಿಯನ್‍ಗಳಾಗಿ ಮೂಡಿ ಬಂದರು.