ಸ್ಕೌಟ್ ಗೈಡ್ ಫೆಲೋಶಿಪ್ ಘಟಕದ ಉದ್ಘಾಟನೆ

ಸಂತ ಫಿಲೋಮಿನಾ ರೋವರ್ಸ್ ಮತ್ತು ರೇಂಜರ್ಸ್ ಘಟಕದ ಆಶ್ರಯದಲ್ಲಿ ಮಂಗಳೂರು ಸ್ಕೌಟ್ ಗೈಡ್ ಫೆಲೋಶಿಪ್ ಘಟಕದ ಉದ್ಘಾಟನೆ ಮತ್ತು ಈ-ವೇಸ್ಟ್ ನ ಬಗ್ಗೆ ಜಾಗೃತಿ ಕಾರ್ಯಕ್ರಮವು ದಿನಾಂಕ 30-6-2018 ರಂದು ಪೂರ್ವಾಹ್ನ 10.30 ಕ್ಕೆ ಕಾಲೇಜಿನಲ್ಲಿ ನೆರವೇರಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಸ್ಕೌಟ್ ಗೈಡ್ ಫೆಲೋಶಿಪ್ ನ ರಾಷ್ಟ್ರೀಯ ಮುಖ್ಯ ಕಾರ್ಯದರ್ಶಿಗಳಾದ ಎಂ.ಎ.ಕೆ.ಮೆಕ್ಕಿ ಯವರು ನೆರವೇರಿಸಲಿದ್ದಾರೆ. ಗೌರವ ಅತಿಥಿಗಳಾಗಿ ಇಂಡಿಯನ್ ಸ್ಕೌಟ್ ಗೈಡ್ ಫೆಲೋಶಿಪ್ ನ  ರಾಷ್ಟ್ರೀಯ  ಉಪಾಧ್ಯಕ್ಷರಾದ ಮುನೀರ ಬಿ ಮಿಸ್ಟ್ರಿ ಹಾಗೂ ಸ್ಕೌಟ್ ಗೈಡ್ ಫೆಲೋಶಿಪ್ ಘಟಕ ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಅನು ತಿಮ್ಮಪ್ಪ ಇವರು ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ವಂ|ಫಾ| ವಿಜಯ್ ಲೋಬೊ ವಹಿಸಲಿದ್ದಾರೆ ಎಂದು ರೋವರ್ಸ್ ಮತ್ತು ರೇಂಜರ್ಸ್ ಘಟಕದ ನಿರ್ದೇಶಕರಾದ ಹರ್ಷದ್ ಇಸ್ಮಾಯಿಲ್ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.