ಮತ್ಸ್ಯಸಂಕುಲ ಕಾರ್ಯಾಗಾರ

 
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿಜ್ಞಾನ ಸಂಘದ ವತಿಯಿಂದ `ಮತ್ಸ್ಯಸಂಕುಲ’ ಇದರ ಬಗ್ಗೆ ಕಾರ್ಯಾಗಾರ ಆ.27 ರಂದು ನಡೆಯಿತು.

ಸಂಪನ್ಮೂಲ ವ್ಯಕ್ತಿಗಳಾದ ಮಂಗಳೂರಿನ ಫಿಶರೀಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮಂಜುಳೇಶ್ ಪೈಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಭೂಮಿಯು ಶೇ.71ರಷ್ಟು ನೀರಿನಿಂದ ಕೂಡಿದ್ದು, ಅದರಲ್ಲಿ ಶೇ.97ರಷ್ಟು ಉಪ್ಪು ನೀರು, ಶೇ.2ರಷ್ಟು ಮಂಜುಗಡ್ಡೆ, ಶೇ.1ರಷ್ಟು ಸಿಹಿನೀರು ಹೊಂದಿದೆ. ಭೂಮಿಯು ಬಹುಪಾಲು ನೀರು ಹೊಂದಿದ್ದು ಅವುಗಳನ್ನು ಅರಿಯುವುದು ಮತ್ತು ಸಂರಕ್ಷಿಸುವುದು ಬಹಳ ಮುಖ್ಯ. ಸಿಹಿನೀರು, ಸವಳು ನೀರು ಮತ್ತು ಸಮುದ್ರ ನೀರಿನ ವ್ಯತ್ಯಾಸ, ನೀರಿನ ಗುಣಧರ್ಮಗಳು, ಸಿಹಿನೀರು, ಸವಳು ಮತ್ತು ಸಮುದ್ರ ನೀರಿನಲ್ಲಿನಲ್ಲಿರುವ ಜಲಜೀವಿಗಳ ಬಗ್ಗೆ ಮತ್ತು ಅವುಗಳಲ್ಲಿ ವೈವಿಧ್ಯತೆ ಬಗ್ಗೆ ಅವರು ವಿವರಿಸಿದರು. ಸಿಹಿ ನೀರಿನಲ್ಲಿ ಸಿಗುವ ಮೀನುಗಳು ಸಿಗಡಿ, ಏಡಿ, ನಳಿ(ಲ್ಯಾಬ್‍ಸ್ಟರ್, ಕ್ರೇಫಿಶ್) ಹಾಗೆಯೇ ಸಮುದ್ರ ನೀರಿನಲ್ಲಿ ವೃದ್ವುಂಗಿ(ಮರುವಾಯಿ, ಮಸ್ಸಲ್, ಸ್ಯಾಲೊಪ್)ಗಳ ದೇಹ ವೈಶಿಷ್ಟ್ಯ, ಜೀವ ವರ್ಗೀಕರಣಗಳು, ಗಾತ್ರ, ಜೀವಿತಾವಧಿ, ವೈಜ್ಞಾನಿಕ ಹೆಸರು, ಬಣ್ಣ, ಆಹಾರದ ಬಗ್ಗೆ ವಿವರಣೆ ನೀಡುತ್ತಾ, ಬಣ್ಣದ ಮೀನುಗಳ ಪ್ರಾಮುಖ್ಯತೆ, ಬೆಳವಣಿಗೆ, ಸಾಕುವುದು, ಸಂತನಾಭಿವೃದ್ಧಿ ಮತ್ತು ಮರಿಗಳನ್ನು ಸಲಹುವ ಬಗ್ಗೆ ತಿಳಿಸಿದರು.

ನಯನಾ ಮತ್ತು ಬಳಗ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಅಫ್ರೀನಾ ಸ್ವಾಗತಿಸಿ, ವಿದ್ಯಾರ್ಥಿ ಗೌತಮ್ ವಂದಿಸಿದರು. ವಿದ್ಯಾರ್ಥಿ ಸುಧನ್ವ ಶ್ಯಾಂ ಕಾರ್ಯಕ್ರಮ ನಿರೂಪಿಸಿದರು. ಸಂಪನ್ಮೂಲ ವ್ಯಕ್ತಿಗಳ ಪರಿಚಯವನ್ನು ವಿದ್ಯಾರ್ಥಿನಿ ಲಿಯಾನ್ನಾ ಡಿ’ಸೋಜ ನೀಡಿದರು. ವಿಜ್ಞಾನ ಸಂಘದ ನಿರ್ದೇಶಕ ಉಪನ್ಯಾಸಕರುಗಳಾದ ರವಿಪ್ರಸಾದ್, ಜಯಲಕ್ಷ್ಮೀ, ಉಷಾರವರ ಸಂಯೋಜನೆಯಲ್ಲಿ ಕಾರ್ಯಕ್ರಮ ನಡೆಯಿತು.

ಬಾಕ್ಸ್
ಮತ್ಸ್ಯಸಂಕುಲದ ಬಗೆಗಿನ ವಿಷಯವು ಕುತೂಹಲಕಾರಿ ವಿಷಯವಾಗಿದೆ ಮತ್ತು ಮಕ್ಕಳಿಗೆ ವಿಶೇಷ ಆಸಕ್ತಿಯನ್ನು ಉಂಟುಮಾಡುತ್ತದೆ. ಜೀವಜಲರಾಶಿಗಳು ಬದಲಾದ ತಾಪಮಾನಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. ವಿದ್ಯಾರ್ಥಿಗಳು ಜೀವಜಲರಾಶಿಗಳ ಬಗ್ಗೆ ಅನ್ವೇಷಣೆ ಮಾಡುವಂತಹುದು, ಅದರಲ್ಲಿ ಹೊಸತನವನ್ನು ಕಂಡುಹುಡುಕುವಂತಹುದು ಅತೀ ಸೂಕ್ತವಾಗಿದೆ. ಹೇಗೆ ಜೀವಜಲರಾಶಿಗಳು ಕಾಲಕ್ಕೆ ತಕ್ಕಂತೆ ಅವುಗಳು ಹೊಂದಿಕೊಳ್ಳುವ ಹೊಂದಾಣಿಕೆ ಗುಣವನ್ನು ಹೊಂದಿರುತ್ತವೆಯೋ ಹಾಗೆಯೇ ಮಾನವ ಕೂಡ ಹೊಂದಾಣಿಕೆ ಮತ್ತು ಹೊಂದಿಕೊಳ್ಳುವ ಗುಣವನ್ನು ಮೈಗೂಡಿಸಿಕೊಳ್ಳುವ ಮೂಲಕ ಮನಸ್ಸಿನಲ್ಲಿನ ಆಸ್ತಿತ್ವವನ್ನು ಕಾಪಾಡಿಕೊಳ್ಳಬೇಕು.

-ವಂ|ವಿಜಯ್ ಲೋಬೋ, ಪ್ರಾಂಶುಪಾಲರು, ಸಂತ ಫಿಲೋಮಿನಾ ಪಿಯು ಕಾಲೇಜು