ಒಂದು ದಿನದ ಸಸ್ಯಗಳ ಅಧ್ಯಯನ ಹಾಗೂ ಜಲಮೂಲ ಅಧ್ಯಯನ

ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ಸಂಸ್ಕೃತ ಸಂಘ ಹಾಗೂ ರೋವರ್ಸ್ ರೇಂಜರ್ಸ್ ಕ್ಲಬ್‍ಗಳ ಆಶ್ರಯದಲ್ಲಿ ಒಂದು ದಿನದ ಸಸ್ಯಗಳ ಅಧ್ಯಯನ ಹಾಗೂ ಜಲಮೂಲ ಅಧ್ಯಯನದ ಬಗ್ಗೆ ಜೂ.24 ರಂದು ಸವಣೂರಿನ ಕಾನಾವು ಇಲ್ಲಿಗೆ ವಿದ್ಯಾರ್ಥಿಗಳ ತಂಡ ಭೇಟಿ ನೀಡಿದರು.

ಕಾಲೇಜ್‍ನ ಹಿರಿಯ ವಿದ್ಯಾರ್ಥಿಯೂ ಆಗಿರುವ ಸವಣೂರಿನ ಕಾನಾವು ನಿವಾಸಿ ಗೋಪಾಲಕೃಷ್ಣ ಭಟ್‍ರವರು ವಿವಿಧ ಜಾತಿಯ ಸಸ್ಯಗಳು, ಔಷಧೀಯ ಸಸ್ಯಗಳು ಹಾಗೂ ಅವುಗಳ ಗುಣಲಕ್ಷಣಗಳ ಬಗ್ಗೆ ಮಾಹಿತಿ ನೀಡಿದರು. ಒಂದು ಹೆಕ್ಟೇರ್‍ಗಿಂತಲೂ ದೊಡ್ಡದಾದ ಕೆರೆಯಲ್ಲಿ ನೀರು ಸಂಗ್ರಹಿಸಿಡುವ ಕುರಿತು, ಇಂಗು ಗುಂಡಿಯ ಮಹತ್ವದ ಕುರಿತು, ಸಾವಯವ ಕೃಷಿಗಳ ಬಗ್ಗೆ ತಮ್ಮ ವಿಚಾರಧಾರೆಗಳನ್ನು ಅನುಭವದ ಮೂಲಕ ವಿದ್ಯಾರ್ಥಿಗಳೊಡನೆ ಹಂಚಿಕೊಂಡರು.

ಕಾಲೇಜ್‍ನಿಂದ 42 ವಿದ್ಯಾರ್ಥಿಗಳು ಪಾಲ್ಗೊಂಡು ಮಾಹಿತಿ ಪಡೆದರು. ಬಳಿಕ ಈ ತಂಡವು ಪ್ರೇಕ್ಷಣೀಯ ಸ್ಥಳಗಳಾದ ಹನುಮಗಿರಿ ಹಾಗೂ ಜಾಂಬ್ರಿಗುಡ್ಡೆ ಇಲ್ಲಿಗೆ ಭೇಟಿ ನೀಡಿದರು. ಕಾಲೇಜ್‍ನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋರವರ ಮಾರ್ಗದರ್ಶನದಲ್ಲಿ ಸಂಸ್ಕøತ ಸಂಘದ ಮುಖ್ಯಸ್ಥ ಉಪನ್ಯಾಸಕರಾದ ಸುರೇಶ್ ಕುಮಾರ್, ರೋವರ್ಸ್ ರೇಂಜರ್ಸ್‍ನ ಮುಖ್ಯಸ್ಥರಾದ ಹರ್ಷದ್ ಇಸ್ಮಾಯಿಲ್ ಹಾಗೂ ಸಂದೇಶ್ ಜೋನ್ ಲೋಬೋ ಹಾಗೂ ಉಪನ್ಯಾಸಕರಾದ ಸಂಸ್ಕೃತ ವಿಭಾಗದ ಸತೀಶ್ ಎಂ, ಅರ್ಥಶಾಸ್ತ್ರ ವಿಭಾಗದ ವಿಜಯ್ ಮ್ಯಾಕ್ಸಿಂ ಡಿ’ಸೋಜರವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.