ಕೊಠಡಿ ಮೇಲ್ವಿಚಾರಕರಿಗೆ ತರಬೇತಿ ಕಾರ್ಯಾಗಾರ

 

ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾ.1ರಿಂದ ಆರಂಭಗೊಳ್ಳಲಿದ್ದು ಪರೀಕ್ಷೆಗಳು ಮಾ.18ರ ತನಕ ನಡೆಯಲಿದೆ. ಆ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರಗಳಲ್ಲೊಂದಾದ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನಲ್ಲಿ ಪರೀಕ್ಷಾ ಕೊಠಡಿ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಉಪನ್ಯಾಸಕರಿಗೆ ಪರೀಕ್ಷೆ ಸಂದರ್ಭದಲ್ಲಿ ಕಾರ್ಯ ನಿರ್ವಹಿಸುವ ಬಗ್ಗೆ ತರಬೇತಿ ಕಾರ್ಯಾಗಾರವು ಮಾ.77 ರಂದು ನಡೆಯಿತು.

ಫಿಲೋಮಿನಾ ಕೇಂದ್ರದಲ್ಲಿ ಮುಖ್ಯ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸಲಿರುವ ಕಾಲೇಜ್‍ನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋರವರು ಮಾತನಾಡಿ, ಪ್ರಸ್ತುತ ವರ್ಷ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರವು ಹೊಸತಾಗಿದ್ದು ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಉಪನ್ಯಾಸಕರಾಗಲಿ, ಆಡಳಿತ ಸಿಬ್ಬಂದಿಗಳಾಗಲಿ ವಿದ್ಯಾರ್ಥಿ ಸ್ನೇಹಿಯಾಗಿ ವರ್ತಿಸಬೇಕು. ಫಿಲೋಮಿನಾ ಕಾಲೇಜು ಪರೀಕ್ಷಾ ಕೇಂದ್ರ(ಎಕ್ಸ್‍ಸಿ 5904)ದಲ್ಲಿ ಒಟ್ಟು 1142 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದು, ಅದರಲ್ಲೂ ವಿಕಲಾಂಗ ಚೇತನ ವಿದ್ಯಾರ್ಥಿಗಳೂ ಇದ್ದು ಅವರಿಗೆ ವಿಶೇಷ ಮುತುವರ್ಜಿಯನ್ನು ವಹಿಸಬೇಕಾಗಿದೆ ಎಂದು ಹೇಳಿದರು.

ಕಛೇರಿ ಅಧೀಕ್ಷಕರಾಗಿ ವತ್ಸಲಾ ಪಿ, ಉತ್ತರ ಪತ್ರಿಕಾ ಪಾಲಕರಾಗಿ ಸುಕುಮಾರ್ ಎಸ್.ಕೆರವರು ಪರೀಕ್ಷಾ ಸಂದರ್ಭದಲ್ಲಿ ಸಹಕರಿಸಲಿದ್ದಾರೆ. ಫಿಲೋಮಿನಾ ಪಿಯು ಕಾಲೇಜ್‍ನಲ್ಲಿ ಪಿಯು ಕಾಲೇಜುಗಳಾದ ವಿವೇಕಾನಂದ ಪಿಯು ಕಾಲೇಜು, ಬೆಟ್ಟಂಪಾಡಿ ಸರಕಾರಿ ಪಿಯು ಕಾಲೇಜು, ಮುಕ್ರಂಪಾಡಿ ಮಹಿಳಾ ಪದವಿಪೂರ್ವ ಕಾಲೇಜು, ಬಪ್ಪಳಿಗೆ ಅಂಬಿಕಾ ಪಿಯು ಕಾಲೇಜ್‍ನಿಂದ ಒಟ್ಟು 1142 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯುತ್ತಿದ್ದಾರೆ. ಅಂಬಿಕಾ ಪದವಿ ಪೂರ್ವ ಕಾಲೇಜು ಬಪ್ಪಳಿಗೆ, ಬುಶ್ರಾ ಪದವಿ ಪೂರ್ವ ಕಾಲೇಜು, ವಿದ್ಯಾರಶ್ಮಿ ಪದವಿ ಪೂರ್ವ ಕಾಲೇಜು ಸವಣೂರು, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ಉಪನ್ಯಾಸಕರು ಕೊಠಡಿ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.