ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಹೊಸ ಪ್ರಯೋಗಾಲಯದ ಶಿಲಾನ್ಯಾಸದ ಆಶೀರ್ವಚನ ಕಾರ್ಯಕ್ರಮ

2018-19ರ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಹೊಸ ಪ್ರಯೋಗಾಲಯದ ಶಿಲಾನ್ಯಾಸದ ಆಶೀರ್ವಚನ ಕಾರ್ಯಕ್ರಮವು ದಿನಾಂಕ 7-6-2018 ರಂದು ಪೂರ್ವಾಹ್ನ 10.00 ಗಂಟೆಗೆ ಎಸ್.ಜೆ.ಎಂ. ಸಭಾಂಗಣದಲ್ಲಿ ನೆರವೇರಲಿದೆ. ಉದ್ಘಾಟನೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಹಾಗೂ ಕಥೋಲಿಕ್ ಶಿಕ್ಷಣ ಮಂಡಳಿಯ ಅದ್ಯಕ್ಷರಾದ ಪರಮಪೂಜ್ಯ ಡಾ| ಅಲೋಶಿಯಸ್ ಪೌಲ್ ಡಿಸೋಜರವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕ್ಯಾಂಪಸ ನಿರ್ದೇಶಕರು ಹಾಗೂ ಸ್ನಾತಕೋತ್ತರ ಅಧ್ಯಯನ ವಿಭಾಗದ ಮುಖ್ಯಸ್ಥರಾದ ವಂ|ಡಾ| ಆಂಟನಿ ಪ್ರಕಾಶ್ ಮೊಂತೆರೊ ವಹಿಸಲಿದ್ದಾರೆ ಹಾಗು ಗೌರವ ಅತಿಥಿಯಾಗಿ ಸಂತ ಫಿಲೋಮಿನ ಪದವಿ ಕಾಲೇಜಿನ ಪ್ರಾಂಶುಪಾಲರಾದ ಲಿಯೋ ನೊರೊನ್ಹಾ ವಹಿಸಲಿದ್ದಾರೆ. ಕಾಲೇಜಿನ ಸಂಚಾಲಕರಾದ ವಂ| ಆಲ್ಫ್ರೆಡ್ ಜೆ. ಪಿಂಟೊ ಹಾಗು ಪ್ರಾಂಶುಪಾಲರಾದ ವಂ| ವಿಜಯ್ ಲೋಬೊರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.