ಜಿಲ್ಲಾ ಮಟ್ಟದ ‘ಪ್ರತಿಭಾ’ ಸಮಾರೋಪ

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಕಾಲೇಜಿನ ಬೆಳ್ಳಿ ಹಬ್ಬದ ಸಭಾಂಗಣದಲ್ಲಿ ಆಯೋಜಿಸಲಾದ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಗೊಳಪಡುವ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಉದೇಶದಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಒಂದು ದಿನದ ಅಂತರ್-ಶಾಲಾ ಜಿಲ್ಲಾ ಮಟ್ಟದ ಸ್ಪರ್ಧೆ ‘ಪ್ರತಿಭಾ 2018’ ಕಾರ್ಯಕ್ರಮ ಯಶಸ್ವಿ ಸಮಾರೋಪ ಕಂಡಿದೆ.

ತೃತೀಯ ವರ್ಷದ ಈ ಬಾರಿಯ ಪ್ರತಿಭಾ ಸ್ಪರ್ಧೆಯಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಪ್ರೌಢಶಾಲೆ ಚಾಂಪಿಯನ್ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಸುಳ್ಯ ಮಿತ್ತಡ್ಕ ರೋಟರಿ ಪ್ರೌಢಶಾಲೆ ರನ್ನರ್ಸ್ ಅಪ್ ಪ್ರಶಸ್ತಿ ಪಡೆದುಕೊಂಡಿತು. ಬೆಳ್ತಂಗಡಿ ಹೋಲಿ ರೆಡಿಮರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ರಸಪ್ರಶ್ನೆ, ಸೆಮಿನಾರ್, ಬೆಸ್ಟ್ ಔಟ್ ಆಫ್ ವೇಸ್ಟ್, ಪೇಂಯ್ಟಿಂಗ್, ಪೆನ್ಸಿಲ್ ಸ್ಕೆಚ್, ಕ್ಲೇ ಮಾಡೆಲಿಂಗ್, ಸೈನ್ಸ್ ಮಾಡೆಲ್, ಪ್ರೊಡಕ್ಟ್ ಲಾಂಚಿಂಗ್, ಕೊಲಾಜ್, ಜಾನಪದ ನೃತ್ಯ ಹೀಗೆ ಹತ್ತು ಸ್ಪರ್ಧೆಗಳಲ್ಲಿ 27 ಪ್ರೌಢಶಾಲೆಗಳಿಂದ ಸುಮಾರು 400ಕ್ಕೂ ಮಿಕ್ಕಿ ವಿದ್ಯಾರ್ಥಿಗಳ ಉತ್ಸಾಹಭರಿತವಾದ ಭಾಗವಹಿಸಿದ್ದರು.

ಉಪ್ಪಿನಂಗಡಿ ಶಾಲೆಯ ನಿವೃತ್ತ ಮುಖ್ಯಗುರು ವಿನ್ಸೆಂಟ್ ಫೆರ್ನಾಂಡೀಸ್‌ರವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಸುಪ್ತ ಪ್ರತಿಭೆಗಳನ್ನು ಅನಾವರಣಗೊಳಿಸಲು ಫಿಲೋಮಿನಾ ಪಿಯು ಕಾಲೇಜ್‌ನವರ ಪ್ರಯತ್ನ ನಿಜಕ್ಕೂ ಪ್ರಶಂಸನೀಯವಾದುದು. ಕಳೆದ ವರ್ಷದಿಂದ ಆರಂಭಗೊಂಡ ಯಶಸ್ಸಿನ ಯಶೋಗಾಥೆಯು ಈ ಬಾರಿಯು ಮುಂದುವರೆದಿದೆ. ಅಂಕಗಳು ಮಾತ್ರ ವಿದ್ಯೆ ಅಲ್ಲ. ಹೇಗೆ ಕತ್ತಲೆಯನ್ನು ಹೋಗಲಾಡಿಸಲು ಹಣತೆ/ದೀಪವನ್ನು ಉರಿಸುತ್ತೇವೆಯೋ ಹಾಗೆಯೇ ಜೀವನವೆಂಬ ಕತ್ತಲೆಗೆ ವಿದ್ಯೆ ಮುಖ್ಯವಾಗಿದೆ ಸಹಜ. ಆದರೆ ವಿದ್ಯೆಯ ಜೊತೆಗೆ ವಿದ್ಯಾರ್ಥಿಗಳಲ್ಲಿ ಪ್ರತಿಭೆಯನ್ನು ಕೂಡ ಅನಾವರಣಗೊಳಿಸಿದಾಗ ಜೀವನ ಯಶಸ್ವಿಯಾಗುವುದು ಎಂದ ಅವರು ಭಾರತವು ಸಾಂಸ್ಕೃತಿಕ ನಗರಿ ಎಂದು ಬಿಂಬಿತವಾಗಿದೆ. ಈ ಸಾಂಸ್ಕೃತಿಕ ನಗರಿಯ ದೇಶದಲ್ಲಿ ಕೌಶಲ್ಯ ಸಾಧನೆಗೆ ಹೆಚ್ಚಿನ ಒತ್ತನ್ನು ನೀಡಲಾಗುತ್ತದೆ. ಅಂಕಗಳ ಜೊತೆಗೆ ಕೌಶಲ್ಯ ಸಾಧನೆಗೆ ಬೆಲೆ ಕೊಟ್ಟಾಗ ಜೀವನವನ್ನು ಪರಿಪೂರ್ಣತೆಯತ್ತ ಕೊಂಡೊಯ್ಯಬಹುದು ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಹಾಗೂ ಕ್ಯಾಂಪಸ್ ನಿರ್ದೇಶಕರಾಗಿರುವ ವಂ|ಡಾ|ಆಂಟನಿ ಪ್ರಕಾಶ್ ಮೊಂತೆರೋರವರು ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆ ಬೆಳಗಬೇಕಾದರೆ ಮೊದಲು ಅವರಲ್ಲಿ ಆಸಕ್ತಿ ಮನಮಾಡಬೇಕು. ಪ್ರತಿಭೆ ಅರಳಬೇಕಾದರೆ ವಿಷಯದ ಬಗ್ಗೆ ಆಳವಾದ ಜ್ಞಾನವಿರಬೇಕು. ಆಸಕ್ತಿಯ ಜೊತೆಗೆ ಕಲಿಯುತ್ತೇನೆ ಎಂಬ ಕುತೂಹಲವೂ ಇಲ್ಲದಿದ್ದರೆ ಸಾಧನೆ ಮಾಡಲು ಸಾಧ್ಯವಿಲ್ಲ. ಇಂದಿಲ್ಲಿ ಪ್ರತಿಭೆ ತೋರ್ಪಡಿಸಿದ ಪ್ರತಿಯೊಬ್ಬರೂ ವಿಜಯಿಗಳೇ. ಬಹುಮಾನ ಸಿಗದವರು ಮುಂದಿನ ಬಾರಿಯಾದರೂ ಬಹುಮಾನ ಪಡೆಯುತ್ತೇನೆ ಎಂಬ ಭರವಸೆ ವಿದ್ಯಾರ್ಥಿಗಳದ್ದಾಗಬೇಕು. ಭಾಗವಹಿಸುವಿಕೆಯಿಂದ ಜೀವನಕ್ಕೆ ಬೇಕಾಗುವ ಅನುಭವದ ಪಾಠವನ್ನು ಕಲಿಸಿಕೊಡುತ್ತದೆ ಎಂದರು.

ವೇದಿಕೆಯಲ್ಲಿ ಪ್ರಾಂಶುಪಾಲ ವಂ|ವಿಜಯ್ ಲೋಬೋರವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕಿ ಅಶ್ವಿನಿ ಕೆ ವಿಜೇತರ ಪಟ್ಟಿಯನ್ನು ಓದಿದರು. ಉಪನ್ಯಾಸಕಿ ಸುಮ ಡಿ ಸ್ವಾಗತಿಸಿ, ಉಪನ್ಯಾಸಕ ರಾಹುಲ್ ನಿರೂಪಿಸಿದರು.

ಭಾಗವಹಿಸಿದ 27 ಪ್ರೌಢಶಾಲೆಗಳು:
ವಿವೇಕಾನಂದ ಆಂಗ್ಲ ಮಾಧ್ಯಮ, ಬೆಥನಿ ಆಂಗ್ಲ ಮಾಧ್ಯಮ, ಇಂಡಿಯನ್ ಆಂಗ್ಲ ಮಾಧ್ಯಮ, ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ, ಎಣ್ಮೂರು ಸರಕಾರಿ ಪ್ರೌಢಶಾಲೆ, ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಮಂಗಳೂರು, ಬಾಳಿಲ ವಿದ್ಯಾಬೋಧಿನಿ, ಕೊಂಬೆಟ್ಟು ಸರಕಾರಿ ಪ್ರೌಢಶಾಲೆ, ಸರಕಾರಿ ಪಿಯುಸಿ ಕಾಲೇಜು ಕುಂಬ್ರ, ಸಂತ ಫಿಲೋಮಿನಾ ಪ್ರೌಢಶಾಲೆ, ಸರ್ವೆ ಎಸ್.ಜಿ.ಎಂ, ಹಿರೇಬಂಡಾಡಿ ಸರಕಾರಿ ಪ್ರೌಢಶಾಲೆ, ಕಡಬ ಸೈಂಟ್ ಜೋಕಿಮ್ಸ್, ಬೆಳ್ತಂಗಡಿ ಹೋಲಿ ರೆಡಿಮರ್ ಆಂಗ್ಲ ಮಾಧ್ಯಮ, ನೆಲ್ಯಾಡಿ ಸೈಂಟ್ ಜಾರ್ಜ್ ಆಂಗ್ಲ ಮಾಧ್ಯಮ, ಸುಳ್ಯ ರೋಟರಿ ಪ್ರೌಢಶಾಲೆ, ಶ್ರೀರಾಮಕೃಷ್ಣ ಪ್ರೌಢಶಾಲೆ, ನೆಲ್ಯಾಡಿ ಜ್ಞಾನೋದಯ ಬೆಥನಿ, ಮಂಗಳೂರು ಸಂತ ಅಲೋಶಿಯಸ್, ವಿಟ್ಲ ಸಂತ ರೀಟಾ, ಪುತ್ತೂರು ಸಂತ ವಿಕ್ಟರ್ ಆಂಗ್ಲ ಮತ್ತು ಕನ್ನಡ ಮಾಧ್ಯಮ, ಮಂಗಳೂರು ಶಾರದಾ ವಿದ್ಯಾಲಯ, ಪುತ್ತೂರು ಸುದಾನ ಶಾಲೆ, ವಿಟ್ಲ ಸಂತ ಜೇಸಿ ಶಾಲೆ, ಉಪ್ಪಿನಂಗಡಿ ಸರಕಾರಿ ಪಿಯು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದೆ.

ವಿಭಾಗವಾರು ಫಲಿತಾಂಶ:
ಕಸದಿಂದ ರಸ: ಅಮಿತಾ/ಸಂಗೀತಾ, ಸರಕಾರಿ ಪಿಯು ಕಾಲೇಜು, ಉಪ್ಪಿನಂಗಡಿ(ಪ್ರ), ರಕ್ಷಿತ್ ಎಸ್.ಯು/ಅಂಕಿತ್‌ಚಂದ್ರ ಕೆ.ಸಿ, ಸುಳ್ಯ ರೋಟರಿ ಪ್ರೌಢಶಾಲೆ(ದ್ವಿ), ತನುಶ್/ಎಂ.ಯುತಿಕಾ ಶೆಟ್ಟಿ, ಎಸ್‌ಡಿಎಂ ಆಂಗ್ಲ ಮಾಧ್ಯಮ ಪ್ರೌಢಶಾಲೆ(ತೃ), ಪೆನ್ಸಿಲ್ ಸ್ಕೆಚ್: ಅನನ್ಯ ಡಿ, ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಪ್ರೌಢಶಾಲೆ(ಪ್ರ), ದೀಪಿಕಾ ಪಿ.ಎಂ, ಸುದಾನ ಪ್ರೌಢಶಾಲೆ(ದ್ವಿ), ಜೆಸ್ವಿನ್, ಜ್ಞಾನೋದಯ ಬೆಥನಿ ಪ್ರೌಢಶಾಲೆ/ಸಾತ್ವಿಕ್ ಎಸ್, ಸಂತ ಅಲೋಶಿಯಸ್ ಪ್ರೌಢಶಾಲೆ(ತೃ)

ಪೇಂಯ್ಟಿಂಗ್: ರೋಹನ್ ಪಿಂಟೋ, ಸಂತ ಅಲೋಶಿಯಸ್ ಪ್ರೌಢಶಾಲೆ(ಪ್ರ),, ವನ್ಯಶ್ರೀ ಎಚ್.ಸಿ, ಸುಳ್ಯ ರೋಟರಿ ಪ್ರೌಢಶಾಲೆ(ದ್ವಿ), ಕೆ.ವಿವೇಕ್ ಆಚಾರ್ಯ, ಹೋಲಿ ರೆಡಿಮರ್ ಆಂಗ್ಲ ಮಾಧ್ಯಮ ಪ್ರೌಢಶಾಲೆ/ಶಿವಂ ವಿ.ನಾಕ್, ಸುದಾನ ಪ್ರೌಢಶಾಲೆ(ತೃ), ಕ್ಲೇ ಮಾಡೆಲಿಂಗ್: ಲಿಶಾನ್, ಸಂತ ಅಲೋಶಿಯಸ್ ಪ್ರೌಢಶಾಲೆ(ಪ್ರ), ಸೌಜನ್ಯ ಎಂ.ಕೆ, ಸಮತ ಆನ್ಸ್ ಆಂಗ್ಲ ಮಧ್ಯಮ ಪ್ರೌಢಶಾಲೆ/ಜೀವನ್ ಕೆ, ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆ(ದ್ವಿ), ರಂಜಿತ್, ಎಸ್.ಜಿ.ಎಂ ಪ್ರೌಢಶಾಲೆ(ತೃ)

ವಿಜ್ಞಾನ ಮಾದರಿ ಸ್ಪರ್ಧೆ: ಮೊಹಮ್ಮದ್ ಅದ್ನಾನ್/ಅತಿಥಿ ಶೆಟ್ಟಿ, ಸಂತ ಆನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ(ಪ್ರ), ಅಭಿಷೇಕ್ ಎಂ.ಜಿ/ಗೌರವ್ ಬದಿಕಾನ, ಸುಳ್ಯ ರೋಟರಿ ಪ್ರೌಢಶಾಲೆ ಹಾಗೂ ಮೆಲನ್ ಡೊಮಿನಿಕ್/ಸಾಲ್ವನ್ ಡಿ’ಸೋಜ, ಸುದಾನ ಶಾಲೆ(ದ್ವಿ), ಅಭಿಷೇಕ್ ಎನ್.ಎಸ್/ಲೆವನ್ ವೀತ್ ಡಿ’ಸೋಜ, ಮಾಣಿ ಬಾಲವಿಕಾಸ ಪ್ರೌಢಶಾಲೆ ಹಾಗೂ ಮಯೂರ್ ಕೆ/ನಿಸನ್ ಗಟ್ಟಿ, ಸಂತ ಅಲೋಶಿಯಸ್ ಪ್ರೌಢಶಾಲೆ(ತೃ), ಕನ್ನಡ ಸೆಮಿನಾರ್: ಅನುಪಮ ಟಿ, ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆ(ಪ್ರ), ಲವಿನ್ ಎ.ಪಿ, ರೋಟರಿ ಪ್ರೌಢಶಾಲೆ ಸುಳ್ಯ ಹಾಗೂ ಹಿಶಾ, ನೆಲ್ಯಾಡಿ ಜ್ಞಾನೋದಯ ಬೆಥನಿ(ದ್ವಿ), ಸಿಂಚನಾ ಲಕ್ಷ್ಮೀ, ವಿವೇಕಾನಂದ ಆಂಗ್ಲ ಮಾಧ್ಯಮ(ತೃ)

ಇಂಗ್ಲೀಷ್ ಸೆಮಿನಾರ್: ಡಿಲ್ರೋಯ್ ಮಸ್ಕರೇನ್ಹಸ್, ಸಂತ ರೀಟಾ ಪ್ರೌಢಶಾಲೆ ವಿಟ್ಲ(ಪ್ರ), ಭರಣ್ ಎನ್, ಎಸ್‌ಡಿಎಂ ಆಂಗ್ಲ ಮಾಧ್ಯಮ/ಸುಜನ್ ಎಸ್.ರೈ, ಬೆಥನಿ ಆಂಗ್ಲ ಮಾಧ್ಯಮ ದರ್ಬೆ(ದ್ವಿ), ಮೇಘಾನ, ಮಂಗಳೂರು ಶಾರದಾ ವಿದ್ಯಾಲಯ/ವಿಯಾನ್ ಜೋವನ್ ಡಿ’ಸೋಜ, ಬೆಳ್ತಂಗಡಿ ಹೋಲಿ ರೆಡಿಮರ್ ಪ್ರೌಢಶಾಲೆ(ತೃ), ಕೊಲಾಜ್ ಮೇಕಿಂಗ್: ಧೀರಜ್ ಎಸ್.ಎನ್/ಸುಧಾಂಶು, ಸಂತ ಅಲೋಶಿಯಸ್ ಪ್ರೌಢಶಾಲೆ(ಪ್ರ), ವಿನಿಶ್ ಲಸ್ರಾದೋ/ಎಂ.ಆಶಿಯಲ್, ಬೆಳ್ತಂಗಡಿ ಹೋಲಿ ರೆಡಿಮರ್ ಪ್ರೌಢಶಾಲೆ(ದ್ವಿ), ಸುಶ್ಮಿತಾ ಕೆ/ಶ್ವೇತಾ ಎಚ್, ಹಿರೇಬಂಡಾಡಿ ಸರಕಾರಿ ಪ್ರೌಢಶಾಲೆ ಹಾಗೂ ಅಂಜುಶಾ ಕೆ.ಜೆ/ರಹೀಶಾ, ನೆಲ್ಯಾಡಿ ಜ್ಞಾನೋದಯ(ತೃ)

ಕ್ವಿಜ್: ಪನ್ನಗ/ಪ್ರದ್ಯುಮ್ನ ಉಪಾಧ್ಯಾಯ, ಶಾರದಾ ವಿದ್ಯಾಲಯ ಮಂಗಳೂರು(ಪ್ರ), ಸ್ವರ್ಣ ಶೆಣೈ/ಸನ್ಮತಿ, ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆ(ದ್ವಿ), ಮೊಹಮ್ಮದ್ ಆಶಿಕ್/ಪ್ರಥಮ್, ಮಾಣಿ ಬಾಲವಿಕಾಸ(ತೃ), ಪ್ರೊಡಕ್ಟ್ ಲಾಂಚಿಂಗ್: ಸಾತ್ವಿ ಜಿ.ಭಟ್ ಮತ್ತು ಬಳಗ, ಎಸ್‌ಡಿಎಂ ಆಂಗ್ಲ ಮಾಧ್ಯಮ(ಪ್ರ), ಸುಮೇದ್ ಮತ್ತು ಬಳಗ, ವಿವೇಕಾನಂದ ಪ್ರೌಢಶಾಲೆ(ದ್ವಿ), ಅರ್ಜುನ್ ಮತ್ತು ಬಳಗ, ನೆಲ್ಯಾಡಿ ಜ್ಞಾನೋದಯ ಬೆಥನಿ(ತೃ), ಜಾನಪದ ನೃತ್ಯ: ಬೆಳ್ತಂಗಡಿ ಹೋಲಿ ರೆಡಿಮರ್ ಪ್ರೌಢಶಾಲೆ(ಪ್ರ), ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ(ದ್ವಿ), ಪುತ್ತೂರು ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆ(ತೃ)