ಫಿಲೋಮಿನಾ ಪ.ಪೂ ಕಾಲೇಜಿನ ಪ್ರಾರ್ಥನಾ ಬಿ ಯವರಿಗೆ ಹಲವು ಪ್ರಶಸ್ತಿಗಳು

ಫಿಲೋಮಿನಾ .ಪೂ ಕಾಲೇಜಿನ ಪ್ರಾರ್ಥನಾ ಬಿ ಯವರಿಗೆ ಹಲವು ಪ್ರಶಸ್ತಿಗಳು

ಪುತ್ತೂರು : ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಪ್ರಾರ್ಥನಾ ಬಿ ಇವರು ಬೆಂಗಳೂರು ನ್ಯಾಷನಲ್ ಏರ್ ಫೋರ್ಸ್ ಲ್ಯಾಬೋರೇಟೋರಿಸ್ ಆಯೋಜಿಸಿದ ಕಣಾದ ವಿಜ್ಞಾನ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ , ಸಂಗೀತ ಹಾಗೂ ಲಲಿತ ಕಲಾ ಸಂಸ್ಥೆ ವೀಣಾಧರಿ ಬೆಂಗಳೂರು ಆಯೋಜಿಸಿದ ಕಲಾಸೌರಭ – 2023 ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಪುತ್ತೂರು ತಾಲೂಕು ರೋಟರಿ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಹಾಡುಗಾರಿಕೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಇವರು ದರ್ಬೆ ಪ್ರಕಾಶ್ ಡೆಂಟಲ್ ಕ್ಲಿನಿಕ್ ನ ಡಾ.ಶ್ರೀಪ್ರಕಾಶ್ ಇವರ ಪುತ್ರಿ.

ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.  ಪ್ರದರ್ಶನ ಕಲಾ ಸಂಘದ ನಿರ್ದೇಶಕರಾದ ಸುಮನಾ ರಾವ್, ರಶ್ಮಿ ಪಿ.ಎಸ್ ಹಾಗೂ ಭರತ್ ಜಿ.ಪೈ ಉಪಸ್ಥಿತರಿದ್ದರು.