ಅಂತರ್ ಜಿಲ್ಲಾ ಮಟ್ಟದ ಸಮೂಹ ಗಾಯನ ಸ್ಪರ್ಧೆಯಲ್ಲಿ ಫಿಲೋಮಿನಾ  ಪ .ಪೂ. ಕಾಲೇಜಿಗೆ  ಪ್ರಶಸ್ತಿ

ಅಂತರ್ ಜಿಲ್ಲಾ ಮಟ್ಟದ ಸಮೂಹ ಗಾಯನ ಸ್ಪರ್ಧೆಯಲ್ಲಿ ಫಿಲೋಮಿನಾ  .ಪೂ. ಕಾಲೇಜಿಗೆ  ಪ್ರಶಸ್ತಿ

ಪುತ್ತೂರು : ಮಂಗಳೂರಿನ ಸೈಂಟ್ ಅಲೋಶಿಯಸ್  ಕಾಲೇಜಿನಲ್ಲಿ ನಡೆದ ಅಂತರ್ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜಿನ  ಸಮೂಹ ಗಾಯನ ಸ್ಪರ್ಧೆಯಲ್ಲಿ  ಪುತ್ತೂರು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ  ವಿದ್ಯಾರ್ಥಿಗಳು ಪ್ರಥಮ  ಸ್ಥಾನದೊಂದಿಗೆ 11,111 ನಗದು ಬಹುಮಾನವನ್ನು ಪಡೆದುಕೊಂಡಿರುತ್ತಾರೆ. ಪ್ರಥಮ ವಿಜ್ಞಾನ ವಿಭಾಗದ ಪ್ರಾರ್ಥನಾ ಬಿ , ಕುಷಿ ವಿಟ್ಲ, ದೀಪ್ತಿ ಕೆ ಆರ್, ಯಶ್ವಿತ್ ಯು, ದ್ವಿತೀಯ ವಿಜ್ಞಾನ ವಿಭಾಗದ ವಿಂಧ್ಯಾ ಶ್ರೀ ರೈ ,ಮಾನಸ ಬಿ , ಹಾಗೂ ದ್ವಿತೀಯ ವಾಣಿಜ್ಯ ವಿಭಾಗದ ಶ್ರುತಿ ರಂಜನಿ  ಸ್ಪರ್ಧೆಯಲ್ಲಿ ಪಾಲ್ಗೊಂಡಿರುತ್ತಾರೆ .

ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.  ಪ್ರದರ್ಶನ ಕಲಾ ಸಂಘದ ನಿರ್ದೇಶಕರಾದ ಸುಮನಾ ರಾವ್, ರಶ್ಮಿ ಪಿ.ಎಸ್ ಹಾಗೂ ಭರತ್ ಜಿ.ಪೈ ಉಪಸ್ಥಿತರಿದ್ದರು.