ಫಿಲೋ ಸಿಂಚನ ಸಂಗೀತ ವೈಭವ

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ವಜ್ರ ಮಹೋತ್ಸವದ ಅಂಗವಾಗಿ ಪ್ರದರ್ಶನ ಕಲಾ ಸಂಘ ಇದರ ಆಶ್ರಯದಲ್ಲಿ ಫಿಲೋ ಸಿಂಚನ ಸಂಗೀತ ವೈಭವ ಕಾರ್ಯಕ್ರಮವು ಸೆ.26 ರಂದು ಕಾಲೇಜ್‍ನ ರಜತ ಮಹೋತ್ಸವದ ಸಭಾಭವನದಲ್ಲಿ ಪೂರ್ವಾಹ್ನ ಜರಗಲಿದೆ.

ಕಾಲೇಜ್‍ನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಸಂಗೀತ ವಿಶಾರದೆ ವಿದುಷಿ ಸುಚಿತ್ರಾ ಹೊಳ್ಳರವರು ಭಾಗವಹಿಸಲಿದ್ದಾರೆ. ಬಳಿಕ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ವಿದ್ಯಾರ್ಥಿಗಳಿಂದ ಗೋಷ್ಠಿ ಗಾಯನ, ವಿದ್ಯಾರ್ಥಿ ಸಾತ್ವಿಕ್ ಬೆಡೇಕರ್ ಹಾಗೂ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ಉಪನ್ಯಾಸಕಿ ಸುಮನಾ ಪ್ರಶಾಂತ್‍ರವರು ಗಾಯನ ನಡೆಸಲಿದ್ದು, ವಯಲಿನ್‍ನಲ್ಲಿ ವಿದ್ವಾನ್ ಜಗದೀಶ್ ಕೊರೆಕ್ಕಾನ, ಮೃದಂಗದಲ್ಲಿ ವಿದ್ವಾನ್ ಮುರಳೀಕೃಷ್ಣ ಕುಕ್ಕಿಲರವರು ಸಹಕರಿಸಲಿದ್ದಾರೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.