ಸಿ.ಪಿ.ಟಿ. ಪರೀಕ್ಷೆಯಲ್ಲಿ ನಾಲ್ವರು ವಿದ್ಯಾರ್ಥಿಗಳು ತೇರ್ಗಡೆ

ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಟೆಂಟ್ಸ್ ಆಫ್ ಇಂಡಿಯಾ (ICAI) 2017 ಇವರು ಜೂನ್ ತಿಂಗಳಲ್ಲಿ ನಡೆಸಿದ ಕಾಮನ್ ಪ್ರೊಫಿಷಿಯನ್ಸಿ ಟೆಸ್ಟ್ (ಸಿ.ಪಿ.ಟಿ. ) ಪರೀಕ್ಷೆಯಲ್ಲಿ ಈ ಬಾರಿ ಸಂತ ಫಿಲೋಮಿನ ಪದವಿ ಪೂರ್ವ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ

ಮೊಟ್ಟೆತ್ತಡ್ಕ ನಿವಾಸಿ ಚಂದ್ರಶೇಖರ ಎಸ್. ಭಟ್ ಹಾಗೂ ಶ್ರೀ ದೇವಿ ಸಿ, ಭಟ್ ರವರ್ ಪುತ್ರಿ ದೀಪಾ ಸಿ. ಭಟ್ (122/200), ಎಲಿಯ ಎಲ್.ಎಮ್. ಲಕ್ಷ್ಮೀ ನಾರಯಣ ಮಯ್ಯ ಹಾಗೂ ಜಯಶ್ರೀ ಎಚ್.ಎನ್. ಮಯ್ಯರವರ ಪುತ್ರ ಕೌಶಿಕ್ ಮಯ್ಯ (119/200), ಪಟ್ಟೆ ನಿವಾಸಿ ಶಿವಪ್ರಸಾದ್ ಪಟ್ಟೆ ಹಾಗೂ ಅದಿತಿ ಪ್ರಸಾದ್ ರವರ ಪುತ್ರಿ ನಿಶಾ ಭಟ್(119/200), ಬೆಳ್ಳಾರೆ ನಿವಾಸಿ ಶಿವಪ್ರಸಾದ್ ಭಟ್ ಹಾಗೂ ವಿದ್ಯಾ ಸರಸ್ವತಿ ಯವರ ಪುತ್ರ ಸ್ಕಂದಕೃಷ್ಣ (113/200) ರವರು ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿರುತ್ತಾರೆ. ಇವರು ನಾಲ್ವರು ವಿದ್ಯಾರ್ಥಿಗಳು ಕಳೆದ ಪಿ.ಯು.ಸಿ. ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದರು. ಕಳೆದ ನಾಲ್ಕು ವರ್ಷಗಳಿಂದ ಫಿಲೋಮಿನ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ತರಭೇತಿ ನಿಡಲಾಗುತ್ತಿದೆ. ಕಳೆದ ವರ್ಷ ಇಲ್ಲಿ ತರಭೇತಿ ಪಡೆದ ವಿದ್ಯಾರ್ಥಿ ಅರುಣ್ ಕುಮಾರ್ ಎಲ್. ಭಟ್ ರವರು ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದರು. ಪ್ರತಿ ಶನಿವಾರ ಅಪರಾಹ್ನ ಮತ್ತು ರಜಾ ದಿನವಾದ ಭಾನುವಾರದಂದು ಸಿ.ಪಿ.ಟಿ. ಪರೀಕ್ಷೇಯ ಕುರಿತಾದ ತರಭೇತಿಯನ್ನು ನುರಿತ ಹಾಗೂ ಅನುಭವಿ ಉಪನ್ಯಾಸಕರಿಂದ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪ್ರಸ್ತುತ ವಿದ್ಯಾಮಾನದಲ್ಲಿ ಉತ್ತಮ ಸ್ಕೋಪ್ ಇರುವ ಸಿ.ಪಿ.ಟಿ. ಪರೀಕ್ಷೆ ಉತ್ತಮ ವೇದಿಕೆಯಾಗಬಲ್ಲದು. ಕಲಿಕೆಗೆ ಪೂರಕವಾಗಿರುವ ಮತ್ತು ವ್ಯಾಸಂಗಕ್ಕೆ ಉತ್ತಮ ವಾತವರಣ ಹೊಂದಿರುವ ಈ ಸಂಸ್ಥೆಯಲ್ಲಿ ತರಭೇತಿ ಪಡೆಯಲು ಇಚ್ಚಿಸುವವರು ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸಿ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.