ರಕ್ಷಕ-ಶಿಕ್ಷಕ ಸಂಘದ ಉದ್ಘಾಟನೆ ಮತ್ತು ಮಹಾಸಭೆ

ಮಗುವನ್ನು ಮಾನವನನ್ನಾಗಿ ಮಾಡಲು, ವಿದ್ಯಾರ್ಥಿಯನ್ನು ಜವಾಬ್ದಾರಿಯುತ ಪ್ರಜೆಯನ್ನಾಗಿ ಮಾಡುವಲ್ಲಿ ಪೋಷಕರು ಶೈಕ್ಷಣಿಕವಾಗಿ ಯಾವ ಜವಾಬ್ದಾರಿಗಳನ್ನು ಹೊಂದಿರಬೇಕೆಂಬುದನ್ನು ಶ್ರೀ ಗಂಗಾಧರ್ ಬೆಳ್ಳಾರೆ ತಿಳಿಸಿದರು.
2014-15ನೇ ಶೈಕ್ಷಣಿಕ ವರ್ಷದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಉದ್ಘಾಟನೆ ಮತ್ತು ಮಹಾಸಭೆಯಲ್ಲಿ ಏರ್ಪಡಿಸಿದ ಚಿಂತನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜೀವನದಲ್ಲಿ ಪೋಷಕರ ಶೈಕ್ಷಣಿಕ ಜವಾಬ್ದಾರಿಗಳು ಎಂಬ ವಿಚಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಉದ್ಘಾಟನೆಯನ್ನು ದೀಪಬೆಳಗಿಸುವುದರೊಂದಿಗೆ ನೆರವೇರಿಸಿದ ಸಂಚಾಲಕರಾದ ರೆ| ಫಾ| ಆಲ್ಫ್ರೆಡ್ ಪಿಂಟೊರವರು ಮಾತನಾಡುತ್ತಾ ಸಂಸ್ಕಾರಯುತ ಕುಟುಂಬಗಳ ನಿರ್ಮಾಣದ ಮೂಲಕ ಒಳ್ಳೆಯ ಸಮಾಜದ ನಿರ್ಮಾತೃಗಳಾಗಿ ಎಂದು ಹಿತವಚನ ನೀಡಿದರು.
ಗೌರವ ಉಪಸ್ಥಿತರಾದ ಕ್ಯಾಂಪಸ್ ನಿರ್ದೇಶಕ ರೆ|ಫಾ| ಆಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ, ತಂದೆ-ತಾಯಿಯರು ಮಕ್ಕಳಿಗೆ ಆದರ್ಶರಾದರೆ ಸಾಲದು. ಅವರ ಜೊತೆಯಾಗಿರಬೇಕು. ಶಿಕ್ಷಕ ಮತ್ತು ಪೋಷಕರ ನಡುವೆ ಸಂವಾದವಿರಬೇಕು. ಇದು ವಿದ್ಯಾರ್ಥಿಯ ಪರಿಪಕ್ವತೆಗೆ ಕಾರಣವಾಗುತ್ತದೆ ಎಂದು ಪರಿಣಾಮಕಾರಿಯಾಗಿ ಹಿತವಚನ ನೀಡಿದರು.
ರಕ್ಷಕ-ಶಿಕ್ಷಕ ಸಂಘದ ಹಾಲಿ ಅಧ್ಯಕ್ಷರಾದ ಶ್ರೀ ವಿನ್ಸೆಂಟ್ ಮಿನೇಜಸ್ ಇವರು ಸಂಘದ ಅಧ್ಯಕ್ಷರಾಗಿ ತನ್ನ ಅನುಭವಗಳನ್ನು ಹಂಚಿಕೊಂಡರು.
ಸಂಘದ ನೂತನ ಆಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದು ಶ್ರೀ ವಿನ್ಸೆಂಟ್ ಮಿನೇಜಸ್ ಇವರು ಮರು ಆಯ್ಕೆಗೊಂಡರು. 2014ನೇ ಮಾರ್ಚ್‌ನಲ್ಲಿ  ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 95ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ವಿದ್ಯಾರ್ಥಿನಿ ಸಹನ ಮತ್ತು ತಂಡದವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ರಕ್ಷಕ-ಶಿಕ್ಷಕ ಸಂಘದ ಕಾರ್ಯದರ್ಶಿಗಳಾಗಿರುವ ಉಪನ್ಯಾಸಕ ಶ್ರೀ ಪ್ರಶಾಂತ್ ಭಟ್ ಪಿ. ಸ್ವಾಗತಿಸಿದರೆ, ಪ್ರಾಂಶುಪಾಲರಾದ ರೆ| ಪಾ| ವಿಜಯ್ ಲೋಬೊ ಪ್ರಾಸ್ತಾವಿಕ ಮಾತುಗಳನ್ನಾಡಿರು. ಉಪನ್ಯಾಸಕ ಶ್ರೀ ರಾಮನಾಯ್ಕ್ ಇವರು ಪ್ರತಿಭಾನ್ವಿತ ವಿದ್ಯಾರ್ಥಿಗಳ ಸಾಧನೆಗಳನ್ನು ತಿಳಿಸಿದರು, ಉಪನ್ಯಾಸಕಿ ಶ್ರೀಮತಿ ಅಶ್ವಿನಿ ಸಂಪನ್ಮೂಲ ವ್ಯಕ್ತಿಯನ್ನು ಸಭೆಗೆ ಪರಿಚಯಸಿದರು. ಸಂಘದ ಖಜಾಂಜಿ ಶ್ರೀ ಅನಿಲ್ ಕುಮಾರ್ ವಂದಿಸಿದರು. ಶ್ರೀಮತಿ ಉಷಾ ಯಶವಂತ್ ಕಾರ್ಯಕ್ರಮ ನಿರೂಪಿಸಿದರು.