19 ಕರ್ನಾಟಕ ಬೆಟಾಲಿಯನ್ ಎನ್‍ಸಿಸಿ ವಾರ್ಷಿಕ ಶಿಬಿರ

19 ಕರ್ನಾಟಕ ಬೆಟಾಲಿಯನ್ ಮಡಿಕೇರಿ ಕುಡ್ಗಿ ಸೈನಿಕ ಶಾಲೆಯಲ್ಲಿ ಆಯೋಜಿಸಿದ 10 ದಿನಗಳ ಎನ್‍ಸಿಸಿ ವಾರ್ಷಿಕ ಶಿಬಿರದಲ್ಲಿ ಪುತ್ತೂರು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನಿಂದ ಒಂಭತ್ತು ಮಂದಿ ಹುಡುಗರು ಹಾಗೂ ಮೂರು ಮಂದಿ ಹುಡುಗಿಯರು ಪಾಲ್ಗೊಂಡಿದ್ದಾರೆ. ಕಾಲೇಜ್‍ನಿಂದ ಒಟ್ಟು ಭಾಗವಹಿಸಿದ 11 ಮಂದಿ ಎನ್‍ಸಿಸಿ ಕೆಡೆಟ್‍ಗಳು 19 ಕರ್ನಾಟಕ ಬೆಟಾಲಿಯನ್ ಆಯೋಜಿಸಿದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿರುತ್ತಾರೆ. ಸೇವ್ ಗರ್ಲ್ ಚೈಲ್ಡ್ ವಿಭಾಗದ ಸಮೂಹ ನೃತ್ಯದಲ್ಲಿ ಕೆಡೆಟ್‍ಗಳಾದ ರಕ್ಷಾ ಅಂಚನ್, ಸನ್ನಿಧಿ ಶೆಣೈ ಹಾಗೂ ಕ್ಯಾತ್ರಿನಾ ಪಿ.ಎಕ್ಸ್‍ರವರು ಪ್ರಥಮ ಸ್ಥಾನವನ್ನು ಮತ್ತು ಸಮೂಹ ಗೀತೆಯಲ್ಲಿ ಆರ್ವಿನ್ ಗೊನ್ಸಾಲ್ವಿಸ್ ಹಾಗೂ ಅಲೆಕ್ಸ್ ಪ್ರಜ್ವಲ್‍ರವರು ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ. ಶಿಬಿರದಲ್ಲಿ ನಡೆದ ಫೈರಿಂಗ್ ವಿಭಾಗದಲ್ಲಿ ಎಲ್ಲಾ 11 ಮಂದಿ ಕೆಡೆಟ್‍ಗಳು ಭಾಗವಹಿಸಿ ವಿಶಿಷ್ಟ ಅನುಭವನ್ನು ಪಡೆದಿರುತ್ತಾರೆ. ಸೈನಿಕ ಶಾಲೆಯಲ್ಲಿ ಇರುವಂತಹ ಎಲ್ಲಾ ರೀತಿಯ ಯುದ್ಧ ಉಪಕರಣಗಳನ್ನು ಮತ್ತು ಭಾರತೀಯ ಸೈನ್ಯದಲ್ಲಿ ಇರುವ ಯುದ್ಧ ಉಪಕರಣಗಳು, ಮ್ಯಾಪ್ ರೀಡಿಂಗ್, ಡ್ರಿಲ್ ಮತ್ತು ಇತರ ಚಟುವಟಿಕೆಗಳಲ್ಲಿ ಕೆಡೆಟ್‍ಗಳಾದ ರಕ್ಷಾ ಅಂಚನ್, ಸನ್ನಿಧಿ, ಕ್ಯಾತ್ರಿನಾ, ಆರ್ವಿನ್, ಅಲೆಕ್ಸ್‍ರವರಲ್ಲದೆ ಅಬುಲ್ ಹಾಶಿಮ್, ಆಲ್ಬಿನ್ ಕೆ.ಸ್ಕರಿಯ, ಅಂಕಿತ್ ಕೆ.ಎಂ, ಧನುಷ್, ನಿರ್ಮಲ್ ರಾಝಿ, ಸರೋಶ್ ನಾೈಕ್, ಸೋಮಣ್ಣ ಬಿ.ಎಸ್‍ರವರು ಭಾಗವಹಿಸಿದ್ದಾರೆ. ಶಿಬಿರದ ದಂಡಾದಿಕಾರಿಯಾಗಿ ಕಾಲೇಜ್‍ನ ಎನ್‍ಸಿಸಿ ಅಧಿಕಾರಿ ಲೆಪ್ಟಿನೆಂಟ್ ಜೋನ್ಸನ್ ಡೇವಿಡ್ ಸಿಕ್ವೇರಾರವರು ಭಾಗವಹಿಸಿದ್ದು, ಕಾಲೇಜ್‍ನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋರವರು ಕೆಡೆಟ್‍ಗಳನ್ನು ಅಭಿನಂದಿಸಿರುತ್ತಾರೆ ಎಂದು ಕಾಲೇಜ್ ಪ್ರಕಟಣೆ ತಿಳಿಸಿದೆ.