ರಾಷ್ಟೀಯ ಅಥ್ಲೆಟಿಕ್ಸ್‍

ಗುಜರಾತ್‍ನ ನಾಡಿಯಾಡ್‍ನಲ್ಲಿ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾದವರು ಆಯೋಜಿಸಿದ ಪದವಿ ಪೂರ್ವ ವಿಭಾಗದ 6ನೇ ರಾಷ್ಟ್ರೀಯ ಅಥ್ಲೆಟಿಕ್ ಕೂಟದ ಪೋಲ್‍ವಾಲ್ಟ್ ವಿಭಾಗದಲ್ಲಿ ಪುತ್ತೂರು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಕಲಾವಿಭಾಗದ ಭವಿತ್ ಕುಮಾರ್ ಇವರು ಬೆಳ್ಳಿ ಪದಕ ಜಯಿಸಿದ ಸಾಧನೆಯನ್ನು ಮಾಡಿರುತ್ತಾರೆ.

ಫೆಬ್ರವರಿ 15ರಿಂದ 17ರವರೆಗೆ ಜರಗಿದ ಈ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭವಿತ್‍ರವರು 3.80 ಮೀ ಎತ್ತರ ಜಿಗಿಯುವುದರೊಂದಿಗೆ ಬೆಳ್ಳಿಪದಕವನ್ನು ತನ್ನದಾಗಿಸಿಕೊಂಡರಿ

ಮೈಸೂರಿನಲ್ಲಿ ಚಾಮುಂಡಿ ವಿಹಾರ ಕ್ರೀಡಾಂಗಣಾದಲ್ಲಿ ಜರಗಿದ ಪದವಿ ಪೂರ್ವ ಕಾಲೇಜುಗಳ ಅಥ್ಲೆಟಿಕ್ ಪೋಲ್‍ವಾಲ್ಟ್ ಸ್ಪರ್ಧೆಯಲ್ಲಿ ಭವಿತ್‍ರವರು 3.80 ಮೀ ರಾಜ್ಯ ನೂತನ ಕೂಟದಾಖಲೆಯೊಂದಿಗೆ ಚಿನ್ನದ ಪದಕವನ್ನು ಪಡೆದು ವಿಶೇಷ ಸಾಧನೆಗೈದಿದ್ದಾರೆ.

ಮೂಡಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಆಳ್ವಾಸ್ ಪ.ಪೂ. ಕಾಲೇಜಿನಲ್ಲಿ ಜರಗಿದ ಜಿಲ್ಲಾ ಮಟ್ಟದ ಕ್ರೀಡಕೂಟದಲ್ಲಿ ಈ ಬಾರಿ ಜರಗಿದ ರಾಜ್ಯ ಆಮೆಚೂರ್ ಅಥ್ಲೆಟಿಕ್ಸ್‍ನ 20 ವರ್ಷದ ವಯೋಮಿತಿಯ ಪೆÇೀಲ್‍ವಾಲ್ಟನಲ್ಲಿ ಬೆಳ್ಳಿಯ ಪದಕ ಜಯಿಸಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು.

ಭವಿತ್ ಕುಮಾರ್ ಇಅವರು ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಮಾಜಿ ರಾಷ್ಟ್ರೀಯ ಪೋಲ್‍ವಾಲ್ಟ್ ಕ್ರೀಡಾಪಟು ಸಜ್ಜನ್ ಕುಮಾರ್ ಇಅವರಲ್ಲಿ ತರಭೇತಿ ಪಡೆಯುತ್ತಿದ್ದಾರೆ.

ಭವಿತ್ ಇವರು ಶಾಂತಿಗೋಡು ಗ್ರಾಮದ ಮರಕ್ಕೂರು ನಿವಾಸಿಗಳಾದ ಶ್ರೀ ಎಮ್. ಶ್ರೀಧರ್ ಪೂಜಾರಿ ಹಾಗೂ ಶ್ರೀಮತಿ ಎಮ್. ವನಜಾಕ್ಷಿ ದಂಪತಿಗಳ ಪುತ್ರ.