ದಿ ಡೈಮಂಡ್ ಟ್ರೈಲ್ ಮ್ಯಾರಥಾನ್ 2018 – ಉಚಿತ ಪ್ರವೇಶ

ಸಂತ ಫಿಲೋಮಿಣಾ ಪದವಿ ಪೂರ್ವ ಕಾಲೇಜಿನ ವರ್ಜಮಹೋತ್ಸವದ ಆಚರಣೆಯ ಅಂಗವಾಗಿ ನವೆಂಬರ್ 1 ಕನ್ನಡ ರಾಜ್ಯೋತ್ಸವ ದಿನದಂದು ಮ್ಯಾರಥಾನ್ – 2018 ‘ಸೇವ್ ಅರ್ಥ್’ ಎಂಬ ಧ್ಯೇಯದೊಂದಿಗೆ ದಿ ಡೈಮಂಡ್ ಟ್ರೈಲ್- ದಿ ಗ್ರೀನ್ ರೇಸ್ ಎಂಬ ಹೆಸರಿನಲ್ಲಿ ಮ್ಯಾರಥಾನ್ ಓಟವನ್ನು ಹಮ್ಮಿಕೊಳ್ಳಲಾಗಿದೆ.

ಪುತ್ತೂರಿನ ಹಾಘೂ ಆಸುಪಾಸಿನ ಜನತೆಗಾಗಿ ಸಂತ ಫಿಲೋಮಿನಾ ಸಂಸ್ಥೆಯ ಹಿರಿಮೆಯ ಹಿರಿಯ ವಿದ್ಯಾರ್ಥಿಗಳಿಗಾಗಿ, ಕ್ರೀಡಾಸಕ್ತರಿಗಾಗಿ, ಸಂಸ್ಥೆಯ ಹಿತೈಷಿಗಳಿಗಾಗಿ ಸಂಸ್ಥೆಯ ವಜ್ರಮಹೋತ್ಸವದ ಸಂಭ್ರಮಾಚರಣೆ ಪ್ರಯುಕ್ತ ಇದೇ ಮೊದಲ ಬಾರಿಗೆ ಹಮ್ಮಿಕೊಳ್ಳಾಲಾಗಿದೆ.

ಬೆಳಿಗ್ಗೆ ಸಂತ ಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ ಮ್ರಾರಥಾನ್ ಓಟದ ಉದ್ಘಾಟನೆ ನಡೆಯಲಿದೆ. ಪುರುಷರಿಗೆ 21 ಕಿ.ಮೀ ಹಾಗೂ ಮಹಿಳೆಯರಿಗೆ 10 ಕಿ.ಮೀ ಓಟವನ್ನು ನಿಗದಿಪಡಿಸಲಾಗಿದೆ. ಮ್ಯಾರಥಾನ್ ಓಟವು ಮುಕ್ತವಾಗಿನಡೇಯುವಂತಹದಾಗಿದ್ದು, 18 ವರ್ಷ ಮೇಲ್ಪಟ್ಟವರು ಯಾರು ಕೂಡ ಭಾಗವಹಿಸಬಹುದಾಗಿದೆ.

ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ರೂ.10 ಸಾವಿರ ಹಾಗೂ ಟ್ರೋಫಿ, ದ್ವಿತೀಯ ರೂ 5 ಸಾವಿರ ಹಾಗೂ ಟ್ರೋಫಿ, ಮಹಿಳೆಯರ ಸ್ಪರ್ಧೆಯಲ್ಲಿ ಪ್ರಥಮ ರೂ 5 ಸಾವಿರ ಹಾಗೂ ಟ್ರೋಫಿ, ದ್ವಿತೀಯ ರೂ 3 ಸಾವಿರ ಹಾಗೂ ಟ್ರೋಫಿ, ತೃತೀಯ ರೂ 2 ಸಾವಿರ ಹಾಗೂ ಟ್ರೋಫಿ ಬಹುಮಾನ ನೀಡಾಲಾಗುವುದು. 40 ವರ್ಷ ಮೇಲ್ಪಟ್ಟ ಕ್ರೀಡಾಸಕ್ತರ ಸ್ಪರ್ಧಾ ಮನೋಭಾವನೆಯನ್ನು ಪ್ರಶಂಸಿಸುವ ನಿಟ್ಟಿನಲ್ಲಿ ಸಮಾಧಾನಕರ ಹಾಗ್ತೂ ಭಾಗವಹಿಸಿ ಪೂರ್ತಿಗೊಳಿಸಿದವರಿಗೆ ಪ್ರಮಾಣ ಪತ್ರ ಹಾಗೂ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.

ಅಕ್ಟೋಬರ್ 2018ರೊಳಗಿನ ಮೆಡಿಕಲ್ ಸರ್ಟಿಫಿಕೇಟ್ ಹಾಘೂ ಆಧಾರ್ ಕಾರ್ಡ್ ಕಡ್ಡಾಯವಾಗಿ ಹಾಜರು ಪಡಿಸತಕ್ಕದ್ದು. ಭಾಗವಹಿಸಿವ ಸ್ಪರ್ಧಾಳುಗಳು ಅ.27 ರ ಸಂಜೆ 5 ಗಂಟೆಯ ಒಳಗೆ ತಮ್ಮ ಪ್ರವೇಶಾತಿಯನ್ನು ಖಚಿತಪಡಿಸಿಕೊಳ್ಳತಕ್ಕದ್ದು. ನಂತರ ಬಂದ ಪ್ರವೇಶ ಪತ್ರಗಳನ್ನು ಸ್ವೀಕರಿಸಲಾಗುವುದಿಲ್ಲ ಹಾಗೂ 8722372271 ನ್ನು ಸಂಪರ್ಕಿಸಬಹುದಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ವಂ. ವಿಜಯ್ ಲೋಬೋ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.