ಸಾಂಸ್ಕೃತಿಕ ಸ್ಪರ್ಧೆ ಫಿಲೋ ಫ್ಲೇರ್ ಉದ್ಘಾಟನೆ

ಜೀವನ ಎನ್ನುವುದು ವಿದ್ಯಾಭ್ಯಾಸದಿಂದ ಗಳಿಸುವ ಸರ್ಟಿಫಿಕೇಟ್ ಅಲ್ಲ. ಜೀವನ ಎನ್ನುವುದು ಬದುಕಿನ ವಾಸ್ತವತೆಯನ್ನು ತಿಳಿದುಕೊಳ್ಳುವುದಾಗಿದೆ. ಪ್ರತಿಭೆ ಎನ್ನುವುದು ದೇವರು ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಕಲ್ಪಿಸಿರುತ್ತಾನೆ. ಆದರೆ ತನ್ನಲ್ಲಿದ್ದ ಪ್ರತಿಭೆಯನ್ನು ತೋರ್ಪಡಿಸಬಲ್ಲೆ ಎಂಬ ಸಾಧನೆಯ ಹಸಿವು ಇದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುವುದು ಎಂದು ಚಿತ್ರನಟ, ರಂಗಭೂಮಿ ಕಲಾವಿದ ಶ್ರೀರಾಂರವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲಿನ ಕಲಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ವರ್ಷಂಪ್ರತಿ ಅಂತರ್-ತರಗತಿ `ಟ್ಯಾಲೆಂಟ್ಸ್ ಡೇ’ ಹೆಸರಿನಲ್ಲಿ ಥೀಮ್ ಓರಿಯೆಂಟೆಡ್ ಮನರಂಜನಾ ಕಾರ್ಯಕ್ರಮವನ್ನು ಕಾಲೇಜಿನ ಲಲಿತಾ ಕಲಾ ಸಂಘದ ಆಶ್ರಯದಲ್ಲಿ ಏರ್ಪಡಿಸಲಾಗುತ್ತಿದ್ದು, ಈ ಬಾರಿ `ಫಿಲೋ ಫ್ಲೇರ್’ ನಾಮಾಂಕಿತದಲ್ಲಿ ಕಾಲೇಜಿನ ರಜತ ಮಹೋತ್ಸವದ ಸಭಾಭವನದಲ್ಲಿ ನ.೫ ರಂದು ಜರಗಿದ ಕಾರ್ಯಕ್ರಮದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತನ್ನ ಸಹಪಾಠಿಯೋರ್ವ ಅಥವಾ ಸಹಪಾಠಿಯೋರ್ವಳು ಸಾಧನೆಯನ್ನು ಕಂಡು ನಾವು ನಮ್ಮಷ್ಟಕ್ಕೆ ಹಿಗ್ಗುವುದು ಅಲ್ಲ. ಯಾಕೆಂದರೆ ಅವರಂತೆ ತನ್ನಲ್ಲೂ ಪ್ರತಿಭೆ ಇದೆ. ತಾನೂ ಪ್ರತಿಭೆಯನ್ನು ತೋರ್ಪಡಿಸುತ್ತೇನೆ ಎನ್ನುವ ಆದಮ್ಯ ಛಲ ನಮ್ಮಲ್ಲಿ ಮೊದಲು ಮೈಗೂಡಿಸಿಕೊಳ್ಳಬೇಕು. ವಿದ್ಯಾಭ್ಯಾಸ ಸಂದರ್ಭದಲ್ಲಿ ನಾವು ಭವಿಷ್ಯದಲ್ಲಿ ಹೇಗಿರಬೇಕು ಎನ್ನುವ ಕನಸನ್ನು ಈಗಲೇ ಹೊಂದುವುದು ಅಗತ್ಯ ಎಂದ ಅವರು ಯಶಸ್ವಿ ಜೀವನ ನಮ್ಮದಾಗಬೇಕಾದರೆ ಜೀವನದಲ್ಲಿ ದೊರೆತ ತೊಂದರೆಗಳೊAದಿಗೆ ಸೆಣಸಾಟ ಮಾಡಬೇಕಾಗುತ್ತದೆ. ವಿದ್ಯಾರ್ಥಿಗಳ ಜೀವನ ಎಂಬುದು ಗೋಲ್ಡನ್ ಲೈಫ್ ಎಂದು ಉಲ್ಲೇಖಿಸುತ್ತಾರೆ ನಿಜ. ಆದರೆ ವಿದ್ಯಾರ್ಥಿಗಳ ಜೀವನ ಗೋಲ್ಡನ್ ಲೈಫ್ ಎಂದೆನಿಸಬೇಕಾದರೆ ಶಾಲಾ-ಕಾಲೇಜುಗಳಲ್ಲಿ ಸಿಕ್ಕಂತಹ ಸುಂದರ ಅವಕಾಶಗಳ ಸದ್ವಿನಿಯೋಗವಾದಾಗ ಮಾತ್ರ ಗೋಲ್ಡನ್ ಲೈಫ್‌ಗೆ ಅರ್ಥ ಬರುತ್ತದೆ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ ಕಾಲೇಜ್‌ನ ಪ್ರಾಂಶುಪಾಲ ವಂ|ವಿಜಯ್ ಲೋಬೋರವರು ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಗೋಸ್ಕರ ಪ್ರತೀ ವರ್ಷ ಕಾಲೇಜು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಮಾತ್ರವಲ್ಲದೆ ವಿದ್ಯಾರ್ಥಿಗಳು ಕೂಡ ಆಯಾ ತರಗತಿಯ ಉಪನ್ಯಾಸಕರ ಮಾರ್ಗದರ್ಶನವನ್ನು ಪಡೆದುಕೊಂಡು ಗುಣಮಟ್ಟದ ಕಾರ್ಯಕ್ರಮವನ್ನು ಪ್ರದರ್ಶಿಸಿಸುತ್ತಿದ್ದಾರೆ. ಪ್ರತೀ ವರ್ಷದಂತೆ ಈ ವರ್ಷವೂ ಶೈಕ್ಷಣಿಕ ವಿಭಾಗದಲ್ಲಿ ಮತ್ತು ಕ್ರೀಡೆಯಲ್ಲಿ ಕಾಲೇಜ್‌ನ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸಲು ಅನೇಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ವಿದ್ಯಾರ್ಥಿಗಳು ಬಹಳ ಹುಮ್ಮಸ್ಸಿನಿಂದ ಪಾಲ್ಗೊಂಡಿರುವುದು ಅಭಿನಂದನೀಯವಾಗಿದೆ ಎಂದರು.

ಕಾಲೇಜ್‌ನಲ್ಲಿನ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾದಲ್ಲಿನ ಒಟ್ಟು ೧೭ ವಿಭಾಗಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ತೀರ್ಪುಗಾರರಾಗಿ ಪ್ರವೀಣ್ ವರ್ಣಕುಟೀರ, ವಿದುಷಿ ಪ್ರತೀಕ್ಷ ಆಚಾರ್ಯ, ವಿದುಷಿ ವಸುಧಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜು ವಾರ್ಷಿಕೋತ್ಸವದ ಅಂಗವಾಗಿ ನಡೆದ ಕ್ರೀಡೆ, ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ಪ್ರದರ್ಶನ ಕಲಾ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಲಲಿತಾ ಕಲಾ ಸಂಘದ ನಿರ್ದೇಶಕಿ ಡಾ|ಆಶಾ ಸಾವಿತ್ರಿ ಸ್ವಾಗತಿಸಿ, ಉಪನ್ಯಾಸಕ ಸಂತೋಷ್ ಕ್ಲಾö್ಯರೆನ್ಸ್ ಡಿ’ಸೋಜ ವಂದಿಸಿದರು. ಉಪನ್ಯಾಸಕಿ ಸುಮ ಕಾರ್ಯಕ್ರಮ ನಿರೂಪಿಸಿದರು.

ಪುತ್ತೂರಿನ ಉದಯೋನ್ಮುಖ ಚಿತ್ರನಟ ಶ್ರೀರಾಂ..
ಮೂಲತಃ ಪುತ್ತೂರಿನ ಇರ್ದೆ-ಬೆಟ್ಟಂಪಾಡಿ ನಿವಾಸಿಯಾಗಿರುವ ಚಿತ್ರನಟ ಶ್ರೀರಾಂರವರು ಈಗಾಗಲೇ ಕನ್ನಡ ಚಿತ್ರಗಳಾದ `ದಿ ಫ್ಲಾö್ಯನ್’ ಚಿತ್ರದಲ್ಲಿ ಸೆಕೆಂಡ್ ಹೀರೋ, `ದರ್ಪಣ’ ಚಿತ್ರದಲ್ಲಿ ಖಳನಾಯಕನಾಗಿ, `ಗಿಮಿಕ್’ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್‌ರವರೊಂದಿಗೆ ಮತ್ತು ತುಳು ಚಿತ್ರ `ಪೆಟ್ ಕಮ್ಮಿ’ ಇದರಲ್ಲಿ ನಾಯಕನಟನಾಗಿ ಅಭಿನಯದ ಖದರ್ ತೋರಿದ್ದಾರೆ. ಕರ‍್ಸ್ ಕನ್ನಡ ಟಿವಿಯಲ್ಲಿ ಬರುವ ಯಶಸ್ವಿ ಧಾರವಾಹಿ `ರಾಧಾ ರಮಣ’ದಲ್ಲೂ ಶ್ರೀರಾಂರವರು ಅಭಿನಯಿಸಿದ್ದಾರೆ ಅಲ್ಲದೆ ಶ್ರೀರಾಂ ನಾಯಕರಾಗಿ ಅಭಿನಯಿಸಿರುವ ಕನ್ನಡ ಚಿತ್ರ `ರಿಪ್ಪರ್’ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಶ್ರೀರಾಂರವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಮಾಯಿದೆ ದೇವುಸ್ ಶಾಲೆಯಲ್ಲಿ, ಪಿಯುಸಿ ಶಿಕ್ಷಣವನ್ನು ವಿವೇಕಾನಂದ ಕಾಲೇಜಿನಲ್ಲಿ, ಸುಳ್ಯ ಕೆವಿಜಿಯಲ್ಲಿ ಇಲೆಕ್ಟಿçಕಲ್ ಹಾಗೂ ಎಲೆಕ್ಟೊçÃನಿಕ್ಸ್ನಲ್ಲಿ ಇಂಜಿನಿಯರಿAಗ್ ಪದವಿಯನ್ನು ಅವರು ಗಳಿಸಿರುತ್ತಾರೆ.