ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಫಿಲೋಮಿನ  ಪ .ಪೂ. ಕಾಲೇಜಿಗೆ ಹಲವು ಪ್ರಶಸ್ತಿ

ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಫಿಲೋಮಿನ  .ಪೂ. ಕಾಲೇಜಿಗೆ ಹಲವು ಪ್ರಶಸ್ತಿ

ಪುತ್ತೂರು:  ವಿವೇಕಾನಂದ ಪದವಿ  ಕಾಲೇಜಿನಲ್ಲಿ ನಡೆದ ಮೇಧಾನ್ವೇಷ – 2023 ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಶಾಸ್ತ್ರೀಯ ಸಂಗೀತದಲ್ಲಿ   ಪ್ರಥಮ ವಿಜ್ಞಾನ ವಿಭಾಗದ ಪ್ರಾರ್ಥನಾ ಬಿ ಪ್ರಥಮ ಸ್ಥಾನ , ಭಾವಗೀತೆಯಲ್ಲಿ  ದ್ವಿತೀಯ ವಿಜ್ಞಾನ ವಿಭಾಗದ ವಿಂಧ್ಯಾಶ್ರೀ ರೈ ದ್ವಿತೀಯ ಸ್ಥಾನ, ಕೆಮ್- ರಂಗೋಲಿ ಸ್ಪರ್ಧೆಯಲ್ಲಿ  ದ್ವಿತೀಯ ವಿಜ್ಞಾನ ವಿಭಾಗದ ಕಿರಣ್ ಹಾಗೂ  ಡರೆಲ್  ದ್ವಿತೀಯ ಸ್ಥಾನ ಹಾಗೂ  ರಸಪ್ರಶ್ನೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಸೃಜನ್ ಆಳ್ವ ಹಾಗೂ ಪ್ರಥಮ ವಾಣಿಜ್ಯ ವಿಭಾಗದ ಸೃದನ್ ಆಳ್ವ ಕೆ ಪ್ರಥಮ ಸ್ಥಾನ ಹಾಗೂ ಗೂಗಲ್ ಕಣ್ಣಮುಚ್ಚಾಲೆಯಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ನೋರ್ಮನ್ ಡಿಸೋಜಾ ಮತ್ತು ಮನ್ವಿತ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.  ಪ್ರದರ್ಶನ ಕಲಾ ಸಂಘದ ನಿರ್ದೇಶಕರಾದ ಸುಮನಾ ಕೆ, ರಶ್ಮಿ ಪಿ.ಎಸ್ ಹಾಗೂ ಭರತ್ ಜಿ.ಪೈ ಉಪಸ್ಥಿತರಿದ್ದರು.