II PUC Exam 2020-21 Distinction holders

ದ್ವಿತೀಯ ಪಿಯುಸಿ:ಫಿಲೋಮಿನಾ ಪಿಯು ಕಾಲೇಜಿನ
ಅಮೃತ ಎಸ್.ವಿಗೆ 600 ಅಂಕ, ನಿಶ್ಚಯ್ ಕುಡ್ವಗೆ 599

ಅಮೃತ ಎಸ್.ವಿ
ನಿತಿನ್ ಕುಮಾರ್ ಎಸ್
ಒಲೆನ್ ಡೇಲ್ ಪಿಂಟೋ
ಸನ್ಮತಿ ಎಸ್
ಚಿನ್ಮಯಿ ತೇಜಸ್ವಿ
ಪ್ರೀಮಾ ರೋಶ್ನಿ ಪಿಂಟೋ
ದೀಪ್ತಿ ವಿ
ನಿಶ್ಚಯ್ ಕುಡ್ವ
ಅಫ್ರೀನಾ ಪಿ.ಬಿ
ಸ್ಮಿತಾ ಎಸ್.ರೈ
ಚೈತನ್ಯ
ಚೈತಾಲಿ ಎಸ್
ಎಂ.ಜನನಿ
ಫಾತಿಮತ್ ಶಮಾ

ಪುತ್ತೂರು: ಕೊರೋನಾ ಮಹಾಮಾರಿ ಹಿನ್ನೆಲೆಯಲ್ಲಿ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಅಮೃತ ಎಸ್.ವಿ(ಸಂಪ್ಯ ಡಾ|ವಿಘ್ನೇಶ್ವರ ಭಟ್ ಹಾಗೂ ಸುಪರ್ಣ ದಂಪತಿ ಪುತ್ರಿ)ರವರು ಕಾಲೇಜಿನಲ್ಲಿ ಹಾಗೂ ವಿಜ್ಞಾನ ವಿಭಾಗದಲ್ಲಿ 600 ಅಂಕಗಳಿಗೆ 600 ಅಂಕಗಳನ್ನು ಗಳಿಸಿ ಸಾಧನೆ ಮೆರೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಕೆ.ನಿಶ್ಚಯ್ ಕುಡ್ವ(ದರ್ಬೆ ಕೆ.ನಾರಾಯಣ ಕುಡ್ವ ಹಾಗೂ ಕೆ.ನಂದಿತ ಕುಡ್ವ ದಂಪತಿ ಪುತ್ರ) 599/600 ಅಂಕಗಳನ್ನು ಪಡೆದು ವಿಭಾಗದಲ್ಲಿ ವಿಭಾಗದಲ್ಲಿ ಟಾಪರ್ ಸ್ಥಾನ ಪಡೆದುಕೊಂಡಿದ್ದಾರೆ. ಉಳಿದಂತೆ ಅಫ್ರೀನಾ ಪಿ.ಬಿ(ಕೂರ್ನಡ್ಕ ಕೆ.ಉಮ್ಮರ್ ಹಾಗೂ ಆಯಿಷ ಪಿ.ಬಿ ದಂಪತಿ ಪುತ್ರಿ)ರವರು 598/600 ಅಂಕ, ಸ್ಮಿತಾ ಎಸ್.ರೈ(ಪೆರ್ಲಂಪಾಡಿ ಸಂಜೀವ ರೈ ಹಾಗೂ ಕಸ್ತೂರಿ ಎಸ್.ರೈ ದಂಪತಿ ಪುತ್ರಿ)ರವರು 597/600 ಅಂಕ, ಚೈತನ್ಯ(ಶಾಂತಿಗೋಡು ಪೇರಡ್ಕ ವೀರಪ್ಪ ಪೂಜಾರಿ ಹಾಗೂ ಅರುಣಾ ದಂಪತಿ ಪುತ್ರಿ), ಚೈತಾಲಿ ಎಸ್(ದರ್ಬೆ ಸತೀಶ್ ಶೆಟ್ಟಿ ಹಾಗೂ ಅಮಿತಾ ದಂಪತಿ ಪುತ್ರಿ)ರವರು 596/600 ಅಂಕ, ಎಂ.ಜನನಿ(ದರ್ಬೆ ಮೋಹನ ಎಂ ಹಾಗೂ ಎಂ ಮೋಹಿನಿ ದಂಪತಿ ಪುತ್ರಿ)
ವಿಜ್ಞಾನ ವಿಭಾಗದಲ್ಲಿ ನಿತಿನ್ ಕುಮಾರ್ ಎಸ್(ನರಿಮೊಗರು ಈಶ್ವರ ನಾಯ್ಕ ಯು ಹಾಗೂ ಶಾರದಾ ವಿ ದಂಪತಿ ಪುತ್ರ)ರವರು 599/600 ಅಂಕ, ಒಲೆನ್ ಡೇಲ್ ಪಿಂಟೋ(ಬೆಳ್ಳಾರೆ ಓವಿನ್ ಜಿ.ಎಲ್ ಹಾಗೂ ಸರಿತಾ ಓಲ್ಗಾ ಡಿ’ಸೋಜ ದಂಪತಿ ಪುತ್ರ)ರವರು 599/600 ಅಂಕ, ಸನ್ಮತಿ ಎಸ್(ನೈತಾಡಿ ಶಾಂತಪ್ಪ ಪೂಜಾರಿ ಹಾಗೂ ಕಸ್ತೂರಿ ಪಿ. ದಂಪತಿ ಪುತ್ರಿ)ರವರು 598/600 ಅಂಕ, ಚಿನ್ಮಯಿ ತೇಜಸ್ವಿ ಯು.ಎಸ್(ಭಕ್ತಕೋಡಿ ಉದಯಶಂಕರ ಭಟ್ ಹಾಗೂ ಜ್ಯೋತಿಲಕ್ಷ್ಮೀ ಯು.ಎಸ್ ದಂಪತಿ ಪುತ್ರ)ರವರು 594/600 ಅಂಕ, ಪ್ರೀಮಾ ರೋಶ್ನಿ ಪಿಂಟೋ(ಬನ್ನೂರು ಪೀಟರ್ ಪಿಂಟೋ ಹಾಗೂ ಅನಿತ ರೇಶ್ಮ ಪಿಂಟೋ ದಂಪತಿ ಪುತ್ರಿ)ರವರು 593/600 ಅಂಕ, ದೀಪ್ತಿ ವಿ(ವಿ.ಗೋಪಾಲಕೃಷ್ಣ ಭಟ್ ಹಾಗೂ ವಿ.ಮೀನಾಕ್ಷಿ ದಂಪತಿ ಪುತ್ರಿ)ರವರು 590/600 ಅಂಕ
ಕಲಾ ವಿಭಾಗದಲ್ಲಿ ಫಾತಿಮತ್ ಶಮಾ(ಅಬ್ದುಲ್ ಮಜೀದ್ ಹಾಗೂ ಸಮೀರ ದಂಪತಿ ಪುತ್ರಿ)ರವರು 523/600 ಅಂಕಗಳನ್ನು ಗಳಿಸಿ ವಿಭಾಗದಲ್ಲಿ ಟಾಪರ್ ಎನಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್, ಪ್ರಾಂಶುಪಾಲ ವಂ|ವಿಜಯ್ ಲೋಬೋ, ಆಡಳಿತ ಮಂಡಳಿ, ಉಪನ್ಯಾಸಕ ಹಾಗೂ ಆಡಳಿತ ಸಿಬ್ಬಂದಿ ವರ್ಗ ಸಂತಸ ವ್ಯಕ್ತಪಡಿಸಿರುತ್ತಾರೆ.

ಬಾಕ್ಸ್
140 ಮಂದಿ ಡಿಸ್ಟಿಂಕ್ಷನ್..
ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಒಟ್ಟು 542 ವಿದ್ಯಾರ್ಥಿಗಳಿದ್ದು, ಇದರಲ್ಲಿ 140 ಮಂದಿ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 339 ಮಂದಿ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 63 ಮಂದಿ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

ಕ್ಯಾರಪ್-ಮೊರಾಸ್