ದ್ವಿತೀಯ ಪಿಯು ಆರಂಭ ಮತ್ತು ಅಭಿನಂದನಾ ಕಾರ್ಯಕ್ರಮ

03ಜೂನ್ : 2 ಸರ್ವರ ಅಭ್ಯುದಯವು ಪ್ರೀತಿಯಿಂದಲೇ ಸಂತ ಫಿಲೋಮಿನಾ ಕಾಲೇಜು ಎಲ್ಲಾ ಧರ್ಮವನ್ನು ಪ್ರೀತಿಯಿಂದ ಕಂಡು ಅವರ ಶೈಕ್ಷಣಿಕ ಅಭ್ಯುದಯಕ್ಕೆ ಶ್ರಮಿಸುತ್ತಿದೆ. ಕೆ.ಜಿಯಿಂದ ಪಿ.ಜಿ.ಯವರೆಗೆ ಶೈಕ್ಷಣಿಕ ಅವಕಾಶವನ್ನು ಒದಗಿಸಿದ ಶ್ರೇಯಸ್ಸು ಸಂತ ಫಿಲೋಮಿನಾ ಕಾಲೇಜಿಗೆ ಸೇರುತ್ತದೆ ಎಂದು ಕಾಲೇಜಿನ ಸಂಚಾಲಕರಾದ ಅತೀ ವಂ| ಫಾ| ಅಲ್ಫ್ರೆಡ್ ಜೆ. ಪಿಂಟೊ ಅವರು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ತರಗತಿಗಳ ಪ್ರಾರಂಭೋತ್ಸವ ಮತ್ತು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಹೇಳಿದರು.

ನಮ್ಮ ಉನ್ನತಿ ಮತ್ತು ಅವನತಿಗೆ ನಾವೇ ಕಾರಣರು. ಕಠಿಣ ಪರಿಶ್ರಮದಿಂದ ಬದುಕಿನಲ್ಲಿ ಉನ್ನತಿಯನ್ನು ಪಡೆಯಬಹುದು ಎಂದು ಕಾಲೇಜಿನ ಕ್ಯಾಂಪಸ್ ನಿರ್ದೇಶಕರಾದ ಫಾ| ಆಂಟನಿ ಪ್ರಕಾಶ್ ಮೊಂತೆರೊರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು. ಪ್ರಾಂಶುಪಾಲರಾದ ಫಾ| ವಿಜಯ್ ಲೋಬೊರವರು ವಿದ್ಯಾರ್ಥಿಗಳಿಗೆ ಕಾಲೇಜಿನ ನಿಬಂಧನೆಗಳ ಕುರಿತು ವಿವರಿಸಿದರು.

ಕೃತಿಕಾ ಐತಾಳ್ ಮತ್ತು ಬಳಗದವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಸಂಚಾಲಕರಾದ ಅತೀ ವಂ| ಫಾ| ಅಲ್ಫ್ರೆಡ್ ಜೆ. ಪಿಂಟೊರವರು ದೀಪ ಬೆಳಗಿಸಿದರು. ಉಪನ್ಯಾಸಕರಾದ ಶ್ರೀ ಭರತ್ ಕುಮಾರ್ ಸ್ವಾಗತಿಸಿದರು. ಶ್ರೀ ಪ್ರಶಾಂತ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಅಶ್ವಿನಿ ಕೆ. ವಂದಿಸಿದರು.