ರಾಷ್ಟ್ರಮಟ್ಟದ ಡಿಸೈನ್ ಫಿಯೆಸ್ಟಾ – 2018 ಸ್ಪರ್ಧೆ

ಕರಾವಳಿ ಕಾಲೇಜು ಮಂಗಳೂರಿನಲ್ಲಿ ಇಂಟೀರಿಯನ್ ಡಿಸೈನ್ ಮತ್ತು ಫ್ಯಾಶನ್ ಡಿಸೈನ್ ವಿಭಾಗಗಳ ಆಶ್ರಯದಲ್ಲಿ ನಡೆದ ರಾಷ್ಟ್ರಮಟ್ಟದ ಡಿಸೈನ್ ಫಿಯೆಸ್ಟಾ – 2018 ಸ್ಪರ್ಧೆಯಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ದ್ವಿತೀಯ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.

ದೇಶದ ಪದವಿ ಪೂರ್ವ ಕಾಲೇಜು ಮತ್ತು ಪಾಲಿಟೆಕ್ನಿಕ್ ಸಂಸ್ಥೆಗಳು ಭಾಗವಹಿಸಿರುವ ಈ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ವಿದ್ಯಾರ್ಥಿಗಳು ಹಲವು ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಸ್ಥಾನವನ್ನು ಪಡೆಯುವ ಮೂಲಕ ದ್ವಿತೀಯ ಸಮಗ್ರ ಪ್ರಶಸ್ತಿ, 15000 ನಗದು ಹಾಗೂ ಟ್ರೋಫಿಯೊಂದಿಗೆ ಗಮನಾರ್ಹ ಸಾಧನೆಯನ್ನು ದಾಖಲಿಸಿದೆ.

ಪ್ರಥಮ್ ವಿಜ್ಞಾನ ವಿಭಾಗದ ನಯನ ಇಅವರು ಕ್ಲೇ ಮೊಡೆಲಿಂಗ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ರೂ. 2000 ನಗದು , ಟ್ರೋಫಿ ಮತ್ತು ಪ್ರಶಸ್ತಿ ಪತ್ರವನ್ನು, ದ್ವಿತೀಯ ವಾಣಿಜ್ಯ ವಿಭಾಗದ ಶ್ರೀ ದೇವಿ ಕೆ ಮತ್ತು ಲಹರಿ ಆಚಾರ್ಯ ಕೇಶಾಲಂಕಾರದಲ್ಲಿ ದ್ವಿತೀಯ , ರೂ. 1000 ನಗದು, ಟ್ರೋಫಿ ಹಾಗೂ ಪ್ರಶಸ್ತಿಯನ್ನು, ಪಾಶ್ಚತ್ಯ ನೃತ್ಯದಲ್ಲಿ ಮಹಾಲಸ ಪೈ, ವೈಭವಿ, ವೈಶ್ಣವಿ, ಧನ್ಯಶ್ರೀ, ಆಶ್ರಿತಾ, ಅನುಶ್ರೀ, ಸ್ವಪ್ನಾ, ಸನ್ನಿಧಿ, ಪೂಜಾ ದ್ವಿತೀಯ ಸ್ಥಾನವನ್ನು , ರೂ1000 ನಗದು, ಟ್ರೋಫಿ, ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಫಾ| ವಿಜಯ್ ಲೋಬೊ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಪ್ರದರ್ಶನ ಕಲಾ ವಿಭಾಗದ ನಿರ್ದೇಶಕರಾದ ಶ್ರೀಮತಿ ಸುಮನಾ ಪ್ರಶಾಂತ್ ಹಾಗೂ ಶ್ರೀಮತಿ ರಶ್ಮಿ ಉಪಸ್ಥಿತರಿದ್ದರು