ಜಿಲ್ಲಾ ಮಟ್ಟದ ಈಜು ಸ್ಪರ್ಧೆ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜ್‌ನ ಆಶ್ರಯದಲ್ಲಿ ಜರಗಿದ ಪದವಿ ಪೂರ್ವ ಕಾಲೇಜುಗಳ ದಕ್ಷಿಣ ಕನ್ನಡ ಜಿಲ್ಲಾ ಈಜು ಸ್ಪರ್ಧೆಯಲ್ಲಿ ದರ್ಬೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನ ಬಾಲಕರ ಮತ್ತು ಬಾಲಕಿಯರ ವಿಭಾಗದ ಈಜು ತಂಡಗಳು ಸಮಗ್ರ ದ್ವಿತೀಯ ಸ್ಥಾನ ಪಡೆದಿದೆ. ಕಾಲೇಜ್‌ನಿಂದ ಒಟ್ಟು 6 ಈಜುಪಟುಗಳು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ

ಈಜುಪಟುಗಳಾದ ದ್ವಿತೀಯ ವರ್ಷದ ವಾಣಿಜ್ಯ ವಿಭಾಗದ ರೋಯ್ಸ್‌ಟನ್ ರೊಡ್ರಿಗಸ್‌ರವರು 400 ಮೀ. ಐ.ಎಂನಲ್ಲಿ ಚಿನ್ನದ ಪದಕ, 200 ಮೀ. ಐ.ಎಂನಲ್ಲಿ ಚಿನ್ನದ ಪದಕ, 100ಮೀ. ಬಟರ್‌ಫ್ಲೈನಲ್ಲಿ ಚಿನ್ನದ ಪದಕ, 4 * 100ಮೀ. ಮೆಡ್ಲೆ ರಿಲೇಯಲ್ಲಿ ಬೆಳ್ಳಿ ಪದಕ, 4*100 ಮೀ. ಫ್ರೀ ಸ್ಟೈಲ್ ರಿಲೇಯಲ್ಲಿ ಬೆಳ್ಳಿ ಪದಕ, ಪ್ರಥಮ ವಾಣಿಜ್ಯ ವಿಭಾಗದ ತ್ರಿಶೂಲ್‌ರವರು 200ಮೀ. ಫ್ರೀ ಸ್ಟೈಲ್‌ನಲ್ಲಿ ಚಿನ್ನದ ಪದಕ, 200 ಮೀ. ಐ.ಎಂನಲ್ಲಿ ಬೆಳ್ಳಿ ಪದಕ, 4*100 ಮೀ ಫ್ರೀ ಸ್ಟೈಲ್ ರಿಲೇಯಲ್ಲಿ ಬೆಳ್ಳಿ ಪದಕ, ದ್ವಿತೀಯ ವಾಣಿಜ್ಯ ವಿಭಾಗದ ಜೈಶಾಮ್ ಭಟ್‌ರವರು 50 ಮೀ. ಬಟರ್ ಪ್ಲೈನಲ್ಲಿ ಬೆಳ್ಳಿ ಪದಕ, ೪*೧೦೦ಮೀ. ಮೆಡ್ಲೆ ರಿಲೇಯಲ್ಲಿ ಬೆಳ್ಳಿ ಪದಕ, 4 *100 ಮೀ. ಫ್ರೀ ಸ್ಟೈಲ್ ರಿಲೇಯಲ್ಲಿ ಬೆಳ್ಳಿ ಪದಕ, ೫೦ಮೀ. ಫ್ರೀ ಸ್ಟೈಲ್ ರಿಲೇಯಲ್ಲಿ ಬೆಳ್ಳಿ ಪದಕ, ಪ್ರಥಮ ವಿಜ್ಞಾನ ವಿಭಾಗದ ಆಶ್ರಿತ್‌ರವರು 200 ಮೀ. ಬ್ಯಾಕ್ ಸ್ಟ್ರೋಕ್‌ನಲ್ಲಿ ಕಂಚಿನ ಪದಕ, ಪ್ರಥಮ ವಿಜ್ಞಾನ ವಿಭಾಗದ ಶೇನ್ ಜೋಸೆಫ್ ಡಿ’ಸೋಜರವರು 4*100ಮೀ. ಫ್ರೀ ಸ್ಟೈಲ್ ರಿಲೇಯಲ್ಲಿ ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ.

ಪ್ರಥಮ ವಿಜ್ಞಾನ ವಿಭಾಗದ ಆಶ್ಲಿ ಬ್ರಿಯಾನ್ ಲೋಬೋರವರು 4*100 ಮೀ. ಮೆಡ್ಲೆ ರಿಲೇಯಲ್ಲಿ ಬೆಳ್ಳಿ ಪದಕ, ದ್ವಿತೀಯ ವಿಜ್ಞಾನ ವಿಭಾಗದ ಶ್ರೀಲಕ್ಷ್ಮೀ ಶೆಟ್ಟಿರವರು100 ಮೀ. ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಚಿನ್ನದ ಪದಕ, 4*100ಮೀ. ಮೆಡ್ಲೆ ರಿಲೇಯಲ್ಲಿ ಚಿನ್ನದ ಪದಕ, 200ಮೀ. ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಚಿನ್ನದ ಪದಕ, 4*100ಮೀ. ಫ್ರೀ ಸ್ಟೈಲ್ ರಿಲೇಯಲ್ಲಿ ಬೆಳ್ಳಿ ಪದಕ, ಪ್ರಥಮ ವಾಣಿಜ್ಯ ವಿಭಾಗದ ಸಿಂಚನಾ ಗೌಡರವರು ೧೦೦ಮೀ. ಬಟರ್ ಫ್ಲೈನಲ್ಲಿ ಚಿನ್ನ, 4*100ಮೀ. ಮೆಡ್ಲೆ ರಿಲೇಯಲ್ಲಿ ಚಿನ್ನದ ಪದಕ, ೫೦ಮೀ. ಬಟರ್‌ಫ್ಲೈನಲ್ಲಿ ಬೆಳ್ಳಿ ಪದಕ, ೪*೧೦೦ಮೀ. ಫ್ರೀ ಸ್ಟೈಲ್ ರಿಲೇಯಲ್ಲಿ ಬೆಳ್ಳಿ ಪದಕ,50 ಮೀ. ಬ್ಯಾಕ್ ಸ್ಟ್ರೋಕ್‌ನಲ್ಲಿ ಕಂಚಿನ ಪದಕ, ಪ್ರಥಮ ವಿಜ್ಞಾನ ವಿಭಾಗದ ಜೇನ್ ನೀನಾ ಕುಟಿನ್ಹಾರವರು 200 ಮೀ. ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಬೆಳ್ಳಿ ಪದಕ, 200ಮೀ. ಬ್ಯಾಕ್ ಸ್ಟ್ರೋಕ್‌ನಲ್ಲಿ ಬೆಳ್ಳಿ ಪದಕ, 200ಮೀ. ಫ್ರೀ ಸ್ಟೈಲ್‌ನಲ್ಲಿ ಬೆಳ್ಳಿ ಪದಕ, 4*100ಮೀ. ಮೆಡ್ಲೆ ರಿಲೇಯಲ್ಲಿ ಚಿನ್ನದ ಪದಕ, 4*100ಮೀ. ಫ್ರೀ ಸ್ಟೈಲ್ ರಿಲೇಯಲ್ಲಿ ಬೆಳ್ಳಿ ಪದಕ, ದ್ವಿತೀಯ ವಾಣಿಜ್ಯ ವಿಭಾಗದ ವರ್ಷಿನಿ ಎಫ್.ಜಿರವರು 4*100 ಮೀ. ಮೆಡ್ಲೆ ರಿಲೇಯಲ್ಲಿ ಚಿನ್ನದ ಪದಕ, 4*100ಮೀ. ಫ್ರೀ ಸ್ಟೈಲ್ ರಿಲೇಯಲ್ಲಿ ಬೆಳ್ಳಿ ಪದಕ, 200ಮೀ. ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ.

ಇವರುಗಳಿಗೆ ಪಾರ್ಥ ವಾರಣಾಸಿ, ವಸಂತ್ ಕುಮಾರ್, ನಿರೂಪ್ ಜಿ.ಆರ್‌ರವರು ತರಬೇತಿಯನ್ನು ನೀಡಿರುತ್ತಾರೆ ಹಾಗೂ ಎಲ್ಲಾ ಈಜುಪಟುಗಳು ಪುತ್ತೂರಿನ ಶಿವರಾಮ ಕಾರಂತ ಈಜುಕೊಳದಲ್ಲಿ ತರಬೇತಿ ನಡೆಸಿರುತ್ತಾರೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.

ರೋಯ್‌ಸ್ಟನ್-3 ಚಿನ್ನ, 2 ಬೆಳ್ಳಿ
ತ್ರಿಶೂಲ್-1 ಚಿನ್ನ, 3ಬೆಳ್ಳಿ
ಜೈಶಾಮ್ ಭಟ್-3ಬೆಳ್ಳಿ, 1ಕಂಚು
ಶ್ರೀಲಕ್ಷ್ಮೀ ಶೆಟ್ಟಿ-3ಚಿನ್ನ, 1ಬೆಳ್ಳಿ
ಸಿಂಚನಾ ಗೌಡ-2ಚಿನ್ನ, 2ಬೆಳ್ಳಿ, 1ಕಂಚು
ಜೇನ್ ನೀನಾ-4 ಬೆಳ್ಳಿ, 1 ಕಂಚು
ವರ್ಷಿನಿ ಎಫ್.ಜಿ-1 ಚಿನ್ನ, 1 ಬೆಳ್ಳಿ,1ಕಂಚು
ಶೇನ್ ಜೋಸೆಫ್-1ಬೆಳ್ಳಿ
ಆಶ್ಲಿ ಬ್ರಿಯಾನ್-1 ಬೆಳ್ಳಿ
ಆಶ್ರಿತ್-1ಕಂಚು