‘ಗೀತ ವೈವಿಧ್ಯ’ ಕಾರ್ಯಕ್ರಮ

ವಿದ್ಯಾರ್ಥಿಗಳು ಜೀವನದ ವಾಸ್ತವಿಕತೆಯನ್ನು ಅರ್ಥಮಾಡಿಕೊಂಡು ಅಂಕವನ್ನೇ ಹೆಚ್ಚಾಗಿ ಅವಲಂಬಿಸದೆ ಜೀವನದಲ್ಲಿ ರಿಮಾರ್ಕ್ ಬಾರದ ರೀತಿಯಲ್ಲಿ ವ್ಯಕ್ತಿತ್ವವನ್ನು ಬೆಳೆಸುತ್ತಾ ಬೆಳೆಸುತ್ತಾ ಬೆಳೆಯುವುದು ಮುಖ್ಯವಾಗಿದೀಮ್ದು ಬೋಳಂತಿಮೊಗರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕ ವಿಠಲ್ ನಾಯಕ್‍ರವರು ಹೇಳಿದರು.

ಅವರು ಅ. 24 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಜ್ರ ಮಹೋತ್ಸವದ ಅಂಗವಾಗಿ ಕನ್ನಡ ವಿಭಾಗದ ಆಶ್ರಯದಲ್ಲಿ ನಡೆದ ‘ಗೀತ ವೈವಿಧ್ಯ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಭಆರಾ.ಬ್ಫು ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಯುವ ಶಕ್ತಿಯನ್ನು ಹೊಂದಿರುವ ರಾಷ್ಟ್ರ. ಇಂದಿನ ತಂತ್ರಜ್ಞಾನ ಯುಗದಲ್ಲಿ ಅಮೂಲ್ಯವಾದ ಈ ಯುವಶಕ್ತಿ ಮಾನವೀಯ ಮೌಲ್ಯಗಳ ಕಡೆಗೆ ಹೆಚ್ಚಿನ ಗಮನ ಕೊಡದೆ ವ್ಯರ್ಥವಾಗುತ್ತಿದೆ. ವಿದ್ಯಾರ್ತಿ ಜೀವನದಲ್ಲಿಉತ್ತಮ ರೀತಿಯ ಜೀವನ ಮೌಲ್ಯ ಬೆಳೆಸುವಲ್ಲಿ ಆಸಕ್ತಿ ವಹಿಸಿದಾಗ ಮುಂದಿನ ಜೀವದವು ಉಜ್ವಲವಾಗುವುದರಲ್ಲಿ ಯೂವುದೇ ಸಂದೇಹವಿಲ್ಲ. ಸ್ವಂತಿಕೆ ಮತ್ತು ಸಾಮಾನ್ಯ ಜ್ಞಾನವನ್ನು ಸಂಪಾದಿಸುವಲ್ಲಿ ವಿದ್ಯಾರ್ಥಿಗಳು ಪ್ರಯತ್ನಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ವಂ. ವಿಜಯ್ ಲೋಬೊರವರು ಮಾತಾನಾಡಿ, ವಿಠಲ ನಾಯಕ್ ರವರು ಉತ್ತಮ ಕಲಾವಿದರು. ಗೀತಿಗಳಲ್ಲಿ ಎಷ್ಟು ವಿಧಗಳಿವೆ, ಅವುಗಳನ್ನು ಅರ್ಥಗರ್ಭಿತವಾಗಿ ಹಾಡುವುದು ಹೇಗೆ ಎಮ್ಬುದನ್ನು ವಿವರಾವಾಗಿ ತಿಳಿಸಿದ್ದಾರೆ. ನಮ್ಮ ಬದುಕಿನಲ್ಲಿ ಸಾಹಿತ್ಯದ ಪಾತ್ರ ಅತ್ಯಮೂಲ್ಯವಾದದ್ದು ಎಂದರು.

ಕನ್ನಡ ಸಂಘದ ನಿರ್ದೇಶಕರಾದ ಉಷಾ ಯಶವಂತ್ ಉಪಸ್ಥಿತರಿದ್ದರು. ಕನ್ನಡ ವಿಭಾಗ ಉಪನ್ಯಾಸಕರಾದ ರಾಮ ನಾಯ್ಕ, ಸುಮನಾ ಪ್ರಶಾಂತ್, ಕಾಲೇಜಿನ ಉಪನ್ಯಾಸಕ ವರ್ಗದವರು ಸಹಕರಿಸಿದರು. ಲಹರಿ ಮತ್ತು ತಂಡದವರು ಪ್ರಾರ್ಥಿಸಿ, ವಿಜಯಲಕ್ಷ್ಮೀ ಸ್ವಾಗತಿಸಿ, ಆಯಿಸ್ ಕುಮಾರ್ ವಂದಿಸಿದರು. ಮಹಮ್ಮದ್ ಆಶಿಕ್ ಕಾರ್ಯಕ್ರಮ ನಿರೂಪಿಸಿದರು.