‘ಪ್ರೇರಣಾ-2017’

ಮಂಗಳೂರಿನ ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜ್ ಇದರ ಆಶ್ರಯದಲ್ಲಿ ನ.3 ರಂದು ನಡೆದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪದವಿ ಪೂರ್ವ ಕಾಲೇಜ್‌ಗಳ ವಿದ್ಯಾರ್ಥಿಗಳಿಗೆ ನಡೆಸಿದ ಅಂತರ್ ಕಾಲೇಜ್ ಸಾಂಸ್ಕೃತಿಕ ಸ್ಪರ್ಧೆ ‘ಪ್ರೇರಣಾ-2017’ಯಲ್ಲಿ ದರ್ಬೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ತಂಡಕ್ಕೆ ಪ್ರಶಸ್ತಿ ಹಾಗೂ ನಗದು ಬಹುಮಾನ ಲಭಿಸಿದೆ.

ಕ್ಲೇ-ಮಾಡೆಲಿಂಗ್‌ನಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಚಿಂತನ್ ಕೆ ದ್ವಿತೀಯ, ಸ್ಥಳದಲ್ಲೇ ಡ್ಯಾನ್ಸ್ ಮಾಡುವ ನಾಕೌಟ್ ಡ್ಯಾನ್ಸ್‌ನಲ್ಲಿ ಹರ್ಷಲ್ ಪ್ರೀಮಾ ಡಿ’ಸೋಜ ಪ್ರಥಮ ಸ್ಥಾನ, ಥಿಮ್ಯಾಟಿಕ್ ಡ್ಯಾನ್ಸ್‌ನಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ತೇಜಸ್ವಿ, ಪ್ರಜ್ಞಾ, ಮರ‍್ಲಿನ್, ದೀಕ್ಷಾ, ಕೃತಿಕಾ, ಸೃಜನಾ, ಅಶ್ವಿತಾ, ಜಯ, ಮಾನಸರವರ ತಂಡಕ್ಕೆ ದ್ವಿತೀಯ ಸ್ಥಾನ ಲಭಿಸಿದೆ. ಪ್ರಶಸ್ತಿ ವಿಜೇತ ತಂಡಕ್ಕೆ ಕಾಲೇಜು ಪ್ರಾಂಶುಪಾಲ ವಂ|ವಿಜಯ್ ಲೋಬೋರವರ ಮಾರ್ಗದರ್ಶನದಲ್ಲಿ ಸಂಯೋಜಕಿ ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ ದಿವ್ಯಾರವರು ವಿದ್ಯಾರ್ಥಿಗಳ ತಂಡದ ನೇತೃತ್ವ ವಹಿಸಿದ್ದರು.