`ಕಂಪೆನಿ ಸೆಕ್ರೆಟರಿ’ ಕೋರ್ಸ್ ಕಾರ್ಯಾಗಾರ

ಭಾರತದಲ್ಲಿ ಕೇವಲ 52 ಸಾವಿರ ಮಂದಿ ಮಾತ್ರ ಕಂಪೆನಿ ಸೆಕ್ರೆಟರಿ(ಸಿ.ಎಸ್) ಕೋರ್ಸ್‍ನಲ್ಲಿ ನೈಪುಣ್ಯತೆ ಪಡೆದವರಾಗಿದ್ದಾರೆ. ಮಾತ್ರವಲ್ಲದೆ ಕಂಪೆನಿ ಸೆಕ್ರೆಟರಿ ಕೋರ್ಸ್ ಪರೀಕ್ಷೆ ಸಿ.ಎ ಪರೀಕ್ಷೆಗಿಂತಲೂ ಬಹಳ ಸುಲಭವಾಗಿರುತ್ತದೆ ಎಂದು ಮಂಗಳೂರಿನ ಯಶಸ್ ಕಾಲೇಜ್‍ನ ಮುಖ್ಯಸ್ಥೆ ಹಾಗೂ ಪ್ರ್ಯಾಕ್ಟಿಸಿಂಗ್ ಚಾರ್ಟರ್ಡ್ ಎಕೌಂಟೆಂಟ್ ಆಗಿರುವ ಯಶಸ್ವಿನಿ ಕೆ.ಅಮೀನ್‍ರವರು ಹೇಳಿದರು.

ಅವರು ಜೂ.11 ರಂದು ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ವಾಣಿಜ್ಯ ಸಂಘದ ಆಶ್ರಯದಲ್ಲಿ ಕಾಲೇಜ್‍ನ ಸಭಾಂಗಣದಲ್ಲಿ ನಡೆದ `ಕಂಪೆನಿ ಸೆಕ್ರೆಟರಿ’ ಕೋರ್ಸ್‍ನ ಬಗ್ಗೆ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದರು. ಕಂಪೆನಿ ಸೆಕ್ರೆಟರಿ ಕೋರ್ಸ್‍ನಲ್ಲಿ ಫೌಂಡೇಶನ್, ಎಕ್ಸಿಕ್ಯೂಟಿವ್, ಪ್ರೊಫೆಶನಲ್ ಹೀಗೆ ಮೂರು ಹಂತಗಳಿದ್ದು, ಫೌಂಡೇಶನ್ ಕೋರ್ಸ್‍ನಲ್ಲಿ 4 ಪೇಪರ್ಸ್, ಎಕ್ಸಿಕ್ಯೂಟಿವ್ ಕೋರ್ಸ್‍ನಲ್ಲಿ 8(4+4) ಪೇಪರ್ಸ್, ಪ್ರೊಫೆಶನಲ್ ಕೋರ್ಸ್‍ನಲ್ಲಿ 9(3+3+3) ಪೇಪರ್ಸ್ ಇದ್ದು, ಇವುಗಳನ್ನು ಕಠಿಣ ಪರಿಶ್ರಮದಿಂದ ಹಾಗೂ ಸಾಧಿಸುತ್ತೇನೆ ಎಂಬ ಛಲದಿಂದ ಮುಂದಡಿಯಿಟ್ಟರೆ ಗುರಿ ಪ್ರಾಪ್ತಿಯಾಗುತ್ತದೆ ಎಂದ ಅವರು ಜೊತೆಗೆ ಉನ್ನತ ಹೆಸರಾಂತ ಕಂಪೆನಿಗಳ ಮುಖ್ಯಸ್ಥರ ಜೊತೆಗೆ ವ್ಯವಹರಿಸಲು ಆಂಗ್ಲ ಭಾಷೆಯಲ್ಲಿ ಸಂವಹನ ನೈಪುಣ್ಯತೆಯನ್ನೂ ಹೊಂದಿರಬೇಕಾದ್ದು ಅಗತ್ಯವಾಗಿ ಬೇಕಾಗುತ್ತದೆ. ಕಂಪೆನಿ ಸೆಕ್ರೆಟರಿ ಕೋರ್ಸ್ ಥಿಯರಿ ಓರಿಯೆಂಟೆಡ್ ಕೋರ್ಸ್ ಇದಾಗಿದ್ದು, ಇದನ್ನು ಒಲಿಸಿಕೊಂಡಲ್ಲಿ ಜೀವನವನ್ನು ಆರಾಮಾದಾಯಕವಾಗಿ ಮುನ್ನೆಡೆಸಿಕೊಂಡು ಹೋಗಬಲ್ಲುದು ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ ಕಾಲೇಜ್‍ನ ಪ್ರಾಂಶುಪಾಲ ವಂ|ವಿಜಯ್ ಲೋಬೋರವರು ಮಾತನಾಡಿ, ಪ್ರಸಕ್ತ ವಿದ್ಯಾಮಾನದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಒಳ್ಳೆಯದಾಗಲು ಅನೇಕ ಕೋರ್ಸ್‍ಗಳಿದ್ದು, ಅವುಗಳಲ್ಲಿ ಕಂಪೆನಿ ಸೆಕ್ರೆಟರಿ ಕೋರ್ಸ್ ಕೂಡ ಒಂದಾಗಿದೆ. ಕಂಪೆನಿ ಸೆಕ್ರೆಟರಿ ಕೋರ್ಸ್ ಬಗ್ಗೆ ವಿದ್ಯಾರ್ಥಿಗಳಿಗೆ ಬಹಳಷ್ಟು ಜಾಗೃತಿಯನ್ನು ಮೂಡಿಸುವುದು ಇಂದಿನ ಅಗತ್ಯತೆಯಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತಾಗಬೇಕು ಎಂದರು.

ವಾಣಿಜ್ಯ ಸಂಘದ ನಿರ್ದೇಶಕರಾದ ರಾಹುಲ್ ಕೆ, ಗೀತಾ ಕುಮಾರಿ, ಉಪನ್ಯಾಸಕರಾದ ಸಂತೋಷ್ ಕ್ಲ್ಯಾರೆನ್ಸ್ ಡಿ’ಸೋಜ. ಯಶಸ್ವಿನಿರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಯರಾದ ಅಮನ್ ಶೆಟ್ಟಿ ಸ್ವಾಗತಿಸಿ, ಧೀಮಂತ್ ಶೆಟ್ಟಿ ವಂದಿಸಿದರು. ಅನುಶ್ರೀ ಮತ್ತು ಬಳಗ ಪ್ರಾರ್ಥಿಸಿದರು. ಹಿಮಾಶ್ರೀ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

ಬಾಕ್ಸ್
ಕಂಪೆನಿ ಸೆಕ್ರೆಟರಿ ಕೋರ್ಸ್ ಕಂಪೆನಿಯ ಕಾನೂನು ಸಲಹೆಗಾರರಾಗಿ ಆಗಿ ಕಂಪೆನಿಗೆ ಸೂಕ್ತ ಮಾರ್ಗದರ್ಶನ ನೀಡಬಲ್ಲುದು. ಕಂಪೆನಿ ಸೆಕ್ರೆಟರಿ ಕೋರ್ಸ್ ಮಾಡುವ ಸಂದರ್ಭದಲ್ಲಿ ಜಾಸ್ತಿ ಹಣ ಖರ್ಚು ಮಾಡುವ ಅಗತ್ಯವಿಲ್ಲ ಅಲ್ಲದೆ ಸ್ಟೈಫಂಡ್ ಕೂಡ ಸಿಗಲಿದ್ದು ಕೋರ್ಸ್ ಫೀಸ್ ಕವರ್ ಆಗಲು ಸಾಧ್ಯವಾಗುತ್ತದೆ. ಆಧುನಿಕ ಕೋರ್ಪೋರೇಟ್ ವೃತ್ತಿಪರರಾಗಿ ಕೆಲಸ ನಿರ್ವಹಿಸಲು ಕಂಪೆನಿ ಸೆಕ್ರೆಟರಿ ಕೋರ್ಸ್ ಸಹಕಾರಿ ಎನಿಸಿದೆ. ಕಂಪೆನಿ ಸೆಕ್ರೆಟರಿ ಪರೀಕ್ಷೆ ಬರೆಯಲು ಮಂಗಳೂರು, ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಭದ್ರಾವತಿ ಇಲ್ಲಿ ಮಾತ್ರ ಪರೀಕ್ಷಾ ಸೆಂಟರ್‍ಗಳು ಲಭ್ಯವಿದೆ. ವಿದ್ಯಾರ್ಥಿಗಳು ಮಾಜಿ ರಾಷ್ಟ್ರಪತಿ ಕಲಾಂರವರು ಹೇಳಿದಂತೆ ಕನಸು ಕಾಣಿರಿ, ಕನಸನ್ನು ನನಸು ಮಾಡುವತ್ತ ಗುರಿ ಇರಲಿ ಎಂಬ ಉದ್ಧೇಶವನ್ನು ಅಳವಡಿಸಿಕೊಳ್ಳಿ.
-ಯಶಸ್ವಿನಿ ಕೆ.ಆಮೀನ್, ಯಶಸ್ ಕಾಲೇಜು, ಮಂಗಳೂರು