ವೃತ್ತಿ ಮಾರ್ಗದರ್ಶನ ತರಭೇತಿ ಕಾರ್ಯಗಾರ

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ಇಂಟರ್ಯಾಕ್ಟ್ ಕ್ಲಬ್‍ನ ಆಶ್ರಯದಲ್ಲಿ ಸೆ. 24 ರಂದು ವೃತ್ತಿ ಮಾರ್ಗದರ್ಶನ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮವು ಕಾಲೇಜು ಸಭಾಂಗಣದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಗಿ ಮೆಕಾನಿಕಲ್ ಇಂಜಿನಿಯರ್ ಹಾಗೂ ಜೆ.ಸಿ. ತರಭೇತುದಾರರಾದ ಶ್ರೀ ಸುಭಾಷ್ ಬಂಗೇರ ಇವರು ಮಾತನಾಡಿ ಇಂದು ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೂ ಬಿರುಸಿನ ಸ್ಪರ್ಧೆಯನ್ನು ಎದುರಿಸಬೇಕಾದ ಅನಿವಾರ್ಯತೆ ಇದೆ. ಅತೀ ಕಡಿಮೆ ಸ್ಪರ್ಧೆ ಇರುಉವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಯಶಸ್ಸನ್ನು ಗಳಿಸಲು ಪ್ರಯತ್ನಿಸಬೇಕು. ನಾವು ಮಾಡುವ ಕೆಲಸವನ್ನು ಇಷ್ಟಪಡಬೇಕು ಮತ್ತು ಇಷ್ಟ ಪಟ್ಟ ಕೆಲಸವನ್ನು ಮಾತ್ರ ಮಾಡಬೇಕು. ನಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕಾದರೆ ಶ್ರದ್ಧೆಯಿಂದ ದುಡಿಯಬೇಕು ಎಂದರು. ವೇದಿಕೆಯಲ್ಲಿ ಇಂಟರ್ಯಾಕ್ಟ್ ಕ್ಲಬ್‍ನ ಸಂಯೋಜಕರಾದ ಶ್ರೀಮತಿ ಆಶಾಲತಾ ಹಾಘೂ ಶ್ರೀಮತಿ ರೇಖಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶ್ಯಾನಿಯೆಲ್ ಸ್ವಾಗತಿಸಿ ವರ್ಷ ವಂದಿಸಿದರು. ಸುಚಿತ್ರಾ ಭಟ್ ಕಾರ್ಯಕ್ರಮ ನಿರೂಪಿಸಿದರು.