ತಾಲೂಕು ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆ

ಅಂಬಿಕ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ಪ್ರಥಮ ಹಾಗೂ ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಬಹುಮಾನವನ್ನು ಪಡೆಯುವ ಮೂಲಕ ಸಾಧನೆಗೈದಿದ್ದಾರೆ.

ಬಾಲಕರ ವಿಭಾಗದಲ್ಲಿ ದ್ವಿತೀಯ ವಾಣೀಜ್ಯ ವಿಭಾಗದ ನಿತಿನ್ ಕುಮಾರ್, ದ್ವಿತೀಯ ವಿಜ್ಞಾನ ವಿಭಾಗದ ಏಷನ್ ಡಿ’ಸೋಜ, ಪ್ರಥಮ ವಿಜ್ಞಾನ ವಿಭಾಗದ ಶಶಾಂಕ್ ಎಕ್. ಎನ್. ಪ್ರಥಮ ವಾಣಿಜ್ಯ ವಿಭಾಗದ ವೀರೇಶ್ ಎನ್.ವಿ. ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಥಮ ವಾಣಿಜ್ಯ ವಿಭಾಗದ ಗ್ರೀಷ್ಮ ಎಂ.ಡಿ., ಸುಶ್ಮಿತ ಟಿ, ಹಿಮಶ್ರೀ ಕೆ. ಬಹುಮಾನವನ್ನು ಪಡೆದುಕೊಂಡಿರುತ್ತಾರೆ.

ಕಾಲೇಜಿನ ಪ್ರಾಂಶುಪಾಲರಾದ ಫಾ| ವಿಜಯ್ ಲೋಬೊ ಸಾಧಕರನ್ನು ಅಭಿನಂದಿಸಿದರು.