ಅಥ್ಲೆಟಿಕ್ಸ್ ಕ್ರೀಡಾಕೂಟ

ಪದವಿ ಪೂರ್ವ ಶಿಕ್ಷಣ ಇಲಾಖೆ, ನೂಜಿಬಾಳ್ತಿಲ ಬೆಥನಿ ಸಂಯುಕ್ತ ಪದವಿ ಪೂರ್ವ ಕಾಲೇಜ್‍ನ ಆಶ್ರಯದಲ್ಲಿ ನೂಜಿಬಾಳ್ತಿಲದಲ್ಲಿ ನಡೆದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ಹುಡುಗರ ತಂಡವು 11 ಚಿನ್ನ, 6 ಬೆಳ್ಳಿ ಹಾಗೂ 2 ಕಂಚಿನ ಪದಕದೊಂದಿಗೆ ಒಟ್ಟು 83 ಅಂಕಗಳನ್ನು ಪಡೆದು ಸಮಗ್ರ ಪ್ರಶಸ್ತಿಯೊಂದಿಗೆ ಚಾಂಪಿಯನ್ ಎನಿಸಿಕೊಂಡಿದೆ. 5 ಚಿನ್ನ, 6 ಬೆಳ್ಳಿ ಹಾಗೂ 6 ಕಂಚಿನ ಪದಕಗಳನ್ನು ಪಡೆದು ಒಟ್ಟು 50 ಅಂಕಗಳನ್ನು ಪಡೆದ ಹುಡುಗಿಯರ ವಿಭಾಗದ ಫಿಲೋಮಿನಾ ಪದವಿ ಪೂರ್ವ ಕಾಲೇಜ್ ತಂಡ ರನ್ನರ್ಸ್ ಪ್ರಶಸ್ತಿ ಪಡೆದುಕೊಂಡಿತು.

ಹುಡುಗರ ವಿಭಾಗದಲ್ಲಿ ದ್ವಿತೀಯ ಪಿಸಿಎಂಸಿಯ ಪ್ರೀತಂ ರೈರವರು ಲಾಂಗ್‍ಜಂಪ್, ತ್ರಿಪಲ್ ಜಂಪ್, ಜಾವೆಲಿನ್ ಥ್ರೋ, 4*100ಮೀ. ರಿಲೇಯಲ್ಲಿ 4 ಚಿನ್ನ, ದ್ವಿತೀಯ ಕಲಾ ವಿಭಾಗದ ಭವಿತ್ ಕುಮಾರ್‍ರವರು ಪೋಲ್‍ವಾಲ್ಟ್ ಹಾಗೂ ಹೈಜಂಪ್‍ನಲ್ಲಿ 2 ಚಿನ್ನ, ದ್ವಿತೀಯ ಇಸಿಬಿಎಯ ಎಲ್ಸನ್ ಪಿರೇರಾರವರು 200ಮೀ, 4*100ಮೀ.ರಿಲೇಯಲ್ಲಿ 2 ಚಿನ್ನ, ದ್ವಿತೀಯ ಇಸಿಬಿಎಯ ಮೊಹಮ್ಮದ್ ಉನೈಜ್‍ರವರು 100ಮೀ, 200ಮೀ, 4*100ಮೀ ರಿಲೇಯಲ್ಲಿ 2 ಚಿನ್ನ ಹಾಗೂ 1 ಬೆಳ್ಳಿ, ದ್ವಿತೀಯ ಪಿಸಿಎಂಸಿಯ ತಿಲಕ್ ಗೌಡರವರು 400ಮೀ, 4*400ಮೀ ರಿಲೇಯಲ್ಲಿ 1 ಚಿನ್ನ ಹಾಗೂ 1 ಬೆಳ್ಳಿ, ಪ್ರಥಮ ಪಿಸಿಎಂಬಿ`ಬಿ’ಯ ವಿನೀತ್ ಜಿ.ಆರ್‍ರವರು ಡಿಸ್ಕಸ್ ಥ್ರೋ ಹಾಗೂ ಹ್ಯಾಮರ್ ಥ್ರೋನಲ್ಲಿ 2 ಚಿನ್ನ, ಪ್ರಥಮ ಪಿಸಿಎಂಬಿ`ಡಿ’ಯ ಭವಿತ್‍ರವರು ಪೋಲ್‍ವಾಲ್ಟ್ ಹಾಗೂ 110ಮೀ.ಹರ್ಡಲ್ಸ್‍ನಲ್ಲಿ 2 ಬೆಳ್ಳಿ, ದ್ವಿತೀಯ ಎಸ್‍ಸಿಬಿಎಯ ರಿಕ್ಸನ್ ಮಾರ್ಟಿಸ್‍ರವರು 400ಮೀ.ಹರ್ಡಲ್ಸ್, 4*400ಮೀ ರಿಲೇಯಲ್ಲಿ 1 ಚಿನ್ನ, 1 ಕಂಚು, ದ್ವಿತೀಯ ಇಸಿಬಿಎಯ ರೆಲ್ವಿನ್‍ರವರು 4*400ಮೀ ರಿಲೇಯಲ್ಲಿ 1 ಬೆಳ್ಳಿ, ದ್ವಿತೀಯ ಎಸ್‍ಇಬಿಎ`ಎ’ಯ ಲೋಹಿತ್ ಎ.ರವರು 5ಕಿ.ಮೀ ನಡಿಗೆಯಲ್ಲಿ 1 ಕಂಚು, ದ್ವಿತೀಯ ಇಸಿಬಿಎಯ ಮೊಹಮ್ಮದ್ ಮೊಯಿನ್‍ರವರು ಹೈಜಂಪ್‍ನಲ್ಲಿ 1 ಬೆಳ್ಳಿ, ದ್ವಿತೀಯ ಎಸ್‍ಇಬಿಎ`ಎ’ಯ ನಿಶ್ಚಿತ್ ರೈರವರು ಹ್ಯಾಮರ್ ಥ್ರೋನಲ್ಲಿ 1 ಬೆಳ್ಳಿ, ಪ್ರಥಮ ಪಿಸಿಎಂಬಿ`ಡಿ’ಯ ಮಂಜುನಾಥ್‍ರವರು 4*400ಮೀ.ರಿಲೇಯಲ್ಲಿ ಬೆಳ್ಳಿ ಹಾಗೂ ದ್ವಿತೀಯ ಪಿಸಿಎಂಬಿ`ಬಿ’ಯ ಆ್ಯಸ್ಟನ್ ಡಿ’ಸೋಜರವರು 4*400ಮೀ.ರಿಲೇಯಲ್ಲಿ 1 ಬೆಳ್ಳಿ ಪದಕವನ್ನು ಗಳಿಸಿದ್ದಾರೆ.

ಹುಡುಗಿಯರ ವಿಭಾಗದಲ್ಲಿ ಪ್ರಥಮ ಪಿಸಿಎಂಬಿ`ಎ’ಯ ನೇಹರವರು 100ಮೀ, 200ಮೀ, 400ಮೀ, 4*100ಮೀ ಮತ್ತು 4*400ಮೀ.ರಿಲೇಯಲ್ಲಿ 1 ಚಿನ್ನ, 2 ಬೆಳ್ಳಿ, 2 ಕಂಚು, ಪ್ರಥಮ ಇಸಿಬಿಎಯ ಹರ್ಷಿತಾ ಎ.ಯವರು 800ಮೀ, 1500ಮೀ, 3000ಮೀ, 4*100ಮೀ ಮತ್ತು 4*400ಮೀ ರಿಲೇಯಲ್ಲಿ 2 ಚಿನ್ನ, 1 ಬೆಳ್ಳಿ, 3 ಕಂಚು, ದ್ವಿತೀಯ ಇಸಿಬಿಎಯ ಧನ್ಯಶ್ರೀರವರು ಹ್ಯಾಮರ್ ಥ್ರೋ, ಜಾವೆಲಿನ್ ಥ್ರೋ, ಶಾಟ್‍ಪುಟ್‍ನಲ್ಲಿ 1 ಚಿನ್ನ, 1 ಬೆಳ್ಳಿ, 1 ಕಂಚು, ಪ್ರಥಮ ಪಿಸಿಎಂಬಿ`ಬಿ’ಯ ಅಂಕಿತಾ ಬಿ.ರವರು ಲಾಂಗ್‍ಜಂಪ್, ತ್ರಿಪಲ್ ಜಂಪ್‍ನಲ್ಲಿ 1 ಬೆಳ್ಳಿ, 1 ಕಂಚು, ದ್ವಿತೀಯ ಎಸ್‍ಸಿಬಿಎಯ ಹರ್ಷಿತಾ ಶೆಟ್ಟಿರವರು ಪೋಲ್‍ವಾಲ್ಟ್‍ನಲ್ಲಿ 1 ಬೆಳ್ಳಿ, ಪ್ರಥಮ ಪಿಸಿಎಂಬಿ`ಡಿ’ಯ ರಕ್ಷಾ ಅಂಚನ್‍ರವರು 5ಕಿ.ಮೀ ನಡಿಗೆ, 4*400ಮೀ ರಿಲೇಯಲ್ಲಿ 1 ಚಿನ್ನ, 1 ಬೆಳ್ಳಿ, ಪ್ರಥಮ ಪಿಸಿಎಂಬಿ`ಎ’ಯ ನಯನಾರವರು 4*400ಮೀ ರಿಲೇಯಲ್ಲಿ 1 ಕಂಚು, ದ್ವಿತೀಯ ಎಸ್‍ಸಿಬಿಎಯ ದಿವ್ಯಾ ಕೆ.ರವರು ಪೋಲ್‍ವಾಲ್ಟ್‍ನಲ್ಲಿ 1 ಕಂಚು ಹಾಗೂ ದ್ವಿತೀಯ ಪಿಸಿಎಂಬಿ`ಡಿ’ಯ ಮಹಿಮಾ ರಾಜ್‍ರವರು 400ಮೀ, 4*100ಮೀ ರಿಲೇಯಲ್ಲಿ 1 ಬೆಳ್ಳಿ, 1 ಕಂಚಿನ ಪದಕಗಳನ್ನು ಗಳಿಸಿದ್ದಾರೆ. ಪೋಲ್‍ವಾಲ್ಟ್ ವಿಭಾಗಕ್ಕೆ ಫಿಲೋಮಿನಾ ಕಾಲೇಜ್‍ನ ಹಿರಿಯ ವಿದ್ಯಾರ್ಥಿ ಸಜ್ಜನ್ ಕುಮಾರ್‍ರವರು ತರಬೇತಿ ನೀಡಿರುತ್ತಾರೆ ಎಂದು ಕಾಲೇಜ್‍ನ ಪ್ರಾಂಶುಪಾಲ ವಂ|ವಿಜಯ್ ಲೋಬೋ, ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರಕಾಶ್ ಡಿ’ಸೋಜ, ರಾಜೇಶ್ ಮೂಲ್ಯರವರು ತಿಳಿಸಿದ್ದಾರೆ.

ಬಾಕ್ಸ್

ಪ್ರೀತಂ ರೈ ವೈಯಕ್ತಿಕ ಚಾಂಪಿಯನ್

16 ಮಂದಿ ಜಿಲ್ಲಾಮಟ್ಟಕ್ಕೆ ಆಯ್ಕೆ

ದ್ವಿತೀಯ ಪಿಸಿಎಂಸಿಯ ಪ್ರೀತಂ ರೈರವರು ಲಾಂಗ್‍ಜಂಪ್, ತ್ರಿಪಲ್ ಜಂಪ್, ಜಾವೆಲಿನ್ ಥ್ರೋ, 4*100ಮೀ. ರಿಲೇಯಲ್ಲಿ 4 ಚಿನ್ನದ ಪದಕಗಳನ್ನು ಪಡೆದು ಹುಡುಗರ ವಿಭಾಗದ ಕ್ರೀಡಾಕೂಟದಲ್ಲಿ ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ ಅಲ್ಲದೆ ಹುಡುಗರ ವಿಭಾಗದಲ್ಲಿ ಪ್ರೀತಂ ರೈ, ಭವಿತ್ ಕುಮಾರ್, ವಿನೀತ್ ಜಿ.ಆರ್, ಮಹಮ್ಮದ್ ಉನೈಜ್, ಎಲ್ಸನ್ ಪಿರೇರಾ, ತಿಲಕ್ ಗೌಡ, ರಿಕ್ಸನ್ ಮಾರ್ಟಿಸ್, ಭವಿತ್, ಮಹಮ್ಮದ್ ಮೊಯಿನ್, ನಿಶ್ಚಿತ್ ರೈ ಹಾಗೂ ಹುಡುಗಿಯರ ವಿಭಾಗದಲ್ಲಿ ನೇಹಾ, ಹರ್ಷಿತಾ ಎ, ಧನ್ಯಶ್ರೀ, ರಕ್ಷಾ ಅಂಚನ್, ಅಂಕಿತಾ, ಹರ್ಷಿತಾ ಶೆಟ್ಟಿ ಹೀಗೆ 16 ಮಂದಿ ವಿದ್ಯಾರ್ಥಿಗಳು ನವೆಂಬರ್ 10 ಹಾಗೂ 11 ರಂದು ಮೂಡಬಿದ್ರೆ ಆಳ್ವಾಸ್‍ನಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.