ವಾರ್ಷಿಕ ಕ್ರೀಡಾಕೂಟ ಸಮಾರೋಪ

 

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿ- ವಿದ್ಯಾರ್ಥಿನಿಯರಲ್ಲಿನ ಸುಪ್ತವಾದ ಕ್ರೀಡಾ ಪ್ರತಿಭೆಯನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಅ.26 ರಂದು ಕಾಲೇಜಿನ  ಐತಿಹಾಸಿಕ ಕ್ರೀಡಾಂಗಣಾದಲ್ಲಿ ವಾರ್ಷಿಕ ಕ್ರೀಡಾ ಕೂಟವನ್ನು ಏರ್ಪಡಿಸಲಾಗಿತ್ತು

ಸಂಜೆ ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆದಿದ್ದು, ಕಾಲೇಜ್‍ನ ಪ್ರಾಂಶುಪಾಲ ವಂ|ವಿಜಯ್ ಲೋಬೋರವರು ವಿಜೇತರಿಗೆ ಬಹುಮಾನವನ್ನು ವಿತರಿಸಿದರು.

ತರಗತಿವಾರು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಎಂಬಂತೆ ಏರ್ಪಡಿಸಿದ ಒಟ್ಟು 15 ಸ್ಪರ್ಧೆಗಳಲ್ಲಿ ಭಾಗವಹಿಸಿ, ಅತೀ ಹೆಚ್ಚು ಅಂಕ ಗಳಿಸಿದ ತರಗತಿಗೆ ಸಮಗ್ರ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಅದರಂತೆ ಪ್ರಥಮ ಪಿಸಿಎಂಬಿ `ಎ’ ವಿಭಾಗವು ಎಲ್ಲಾ ಸ್ಪರ್ಧೆಗಳಲ್ಲೂ ಭಾಗವಹಿಸಿ ಕೂಟದ ಚಾಂಪಿಯನ್ ಆಗಿ ಹೊರಹೊಮ್ಮಿ ಸಮಗ್ರ ಪ್ರಶಸ್ತಿಯನ್ನು ಬಾಚಿಕೊಂಡಿತು. ದ್ವಿತೀಯ ಇಸಿಬಿಎ ವಿಭಾಗವು ರನ್ನರ್ಸ್ ಪ್ರಶಸ್ತಿ ಪಡೆಯಿತು. ದ್ವಿತೀಯ ಪಿಸಿಎಂಸಿ ವಿಭಾಗವು ತೃತೀಯ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.

ಪ್ರಥಮ ಪಿಯುಸಿಯ ಹರ್ಷಿತಾ(ಇಸಿಬಿಎ) ಹಾಗೂ ನೇಹ(ಪಿಸಿಎಂಬಿ`ಎ’)ರವರು ಹುಡುಗಿಯರ ವಿಭಾಗದಲ್ಲಿ ಮತ್ತು ಹುಡುಗರ ವಿಭಾಗದಲ್ಲಿ ದ್ವಿತೀಯ ಪಿಯುಸಿಯ ಪ್ರೀತಂ ರೈ(ಪಿಸಿಎಂಸಿ`ಡಿ’) ಹಾಗೂ ಪ್ರಥಮ ಪಿಯುಸಿಯ ವಿನೀತ್ ರೈ(ಪಿಸಿಎಂಬಿ`ಬಿ’)ಯವರು ಕೂಟದ ವೈಯಕ್ತಿಕ ಚಾಂಪಿಯನ್ ಆಗಿ ಮೂಡಿ ಬಂದಿದ್ದಾರೆ.

ಕಾಲೇಜ್‍ನ ಉಪನ್ಯಾಸಕರ ಹಾಗೂ ಆಡಳಿತ ಸಿಬ್ಬಂದಿ ವರ್ಗದವರ ನಡುವೆ ಗುಂಡೆಸೆತ ಹಾಗೂ 400ಮೀ ನಡಿಗೆ ಸ್ಪರ್ಧೆ ನಡೆದಿದ್ದು ಶಾಟ್‍ಪುಟ್ ಸ್ಪರ್ಧೆಯಲ್ಲಿ ವಿಜ್ಞಾನ ವಿಭಾಗದ ರೋಹಿತ್ ಕುಮಾರ್(ಪ್ರ), ಗಣಕ ವಿಜ್ಞಾನ ವಿಭಾಗದ ಹರ್ಷದ್ ಇಸ್ಮಾಯಿಲ್(ದ್ವಿ), ಗೋವಿಂದ ಪ್ರಕಾಶ್(ತೃ), ಮಹಿಳೆಯರ ಸ್ಪರ್ಧೆಯಲ್ಲಿ ಕನ್ನಡ ವಿಭಾಗದ ಉಷಾ ಯಶ್ವಂತ್(ಪ್ರ), ಅರ್ಥಶಾಸ್ತ್ರ ವಿಭಾಗದ ಗೀತಾ ಕುಮಾರಿ(ದ್ವಿ), ವಿಜ್ಞಾನ ವಿಭಾಗದ ಆಶಾಲತಾ(ತೃ) ಮತ್ತು ನಡಿಗೆ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಗಣಕ ವಿಜ್ಞಾನ ವಿಭಾಗದ ಹರ್ಷದ್ ಇಸ್ಮಾಯಿಲ್(ಪ್ರ), ಅನಿಲ್ ಕುಮಾರ್(ದ್ವಿ), ವಾಣಿಜ್ಯ ವಿಭಾಗದ ಭರತ್ ಜಿ.ಪಿ(ತೃ), ಮಹಿಳೆಯರ ವಿಭಾಗದಲ್ಲಿ ಕಲಾ ವಿಭಾಗದ ಜ್ಯೋತಿ(ಪ್ರ), ಸವಿತಾ(ದ್ವಿ), ವಿಜ್ಞಾನ ವಿಭಾಗದ ಆಶಾಲತಾ(ತೃ)ರವರು ಸ್ಥಾನವನ್ನು ಪಡೆದುಕೊಂಡರು.

ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರಕಾಶ್ ಡಿ’ಸೋಜ, ರಾಜೇಶ್ ಮೂಲ್ಯರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ರೀಡಾ ಕಾರ್ಯದರ್ಶಿ ಪ್ರೀತಂ ರೈ ವಂದಿಸಿದರು. ಉಪನ್ಯಾಸಕ ಸಂದೇಶ್ ಲೋಬೋ ವಿಜೇತರ ಪಟ್ಟಿ ವಾಚಿಸಿದರು. ಉಪನ್ಯಾಸಕಿ ಸುಮಾ ಡಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ವೃಂದ ಮತ್ತು ಆಡಳಿತ ಸಿಬ್ಬಂದಿ ವರ್ಗ ಸಹಕರಿಸಿದರು.