ಸಂತ ಫಿಲೋಮಿನಾ ಪಿ. ಯು ಕಾಲೇಜಿನಲ್ಲಿ ರೋವರ್ಸ್ ರೇಂಜರ್ಸ್ ಪ್ರವೇಶ ಪರೀಕ್ಷಾ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ  ಸಂಸ್ಥೆ , ಫಿಲೋ ರೋವರ್ಸ್ ರೇಂಜರ್ಸ್ ಘಟಕ, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಪುತ್ತೂರು  ಇಲ್ಲಿಯ ರೋವರ್ಸ್ ಮತ್ತು ರೇಂಜರ್ಸ್ಗಳಿಗೆ  ಫೆ.5ರಂದು ಪ್ರವೇಶ ಪರೀಕ್ಷೆಯು ನಡೆಯಿತು.  ಕಾಲೇಜಿನ ಪ್ರಾಚಾರ್ಯರಾದ ರೆ.ಫಾ ವಿಜಯ್ ಲೋಬೊ  ಪ್ರವೇಶ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಅತಿಥಿಯಾಗಿದ್ದ  ಜಿಲ್ಲಾ ಯುವ  ಘಟಕದ ಅಧ್ಯಕ್ಷ ಮತ್ತು ಹಿಮಾಲಯನ್ ವುಡ್ ಬ್ಯಾಜ್ ರೋವರ್  ಸ್ಕೌಟ್ ಲೀಡರ್ ಪ್ರೀತೇಶ್  ಸಹಕರಿಸಿದರು.

ರೋವರ್ ಸ್ಕೌಟ್ ನಾಯಕ  ಮತ್ತು ಉಪನ್ಯಾಸಕ ಶರತ್ ಆಳ್ವ,  ಉಪನ್ಯಾಸಕ  ಸಂದೇಶ್ ಜೋನ್ ಲೋಬೊ,  ದೈಹಿಕ ಶಿಕ್ಷಣ ಶಿಕ್ಷಕ ರಾಜೇಶ್ ಮೂಲ್ಯ , ಪದವಿ ಕಾಲೇಜಿನ ರೋವರ್ ಸ್ಕೌಟ್ ನಾಯಕ ಧನ್ಯ ಕುಮಾರ್ ಪಿ .ಟಿ , ರೇಂಜರ್ ಲೀಡರ್ ಮತ್ತು ಉಪನ್ಯಾಸಕಿ ಪೂರ್ಣಿಮಾ ಉಪಸ್ಥಿತರಿದ್ದು  ಸಲಹೆ ಸೂಚನೆಗಳನ್ನು ನೀಡಿದರು.  ರೋವರ್ಸ್ ನಿಹಾಲ್ , ಚಂದ್ರಾಕ್ಷ   ಉಪಸ್ಥಿತರಿದ್ದು ಸಹಕರಿಸಿದರು. ಒಟ್ಟು 60 ರಷ್ಟು ರೋವರ್ಸ್ ರೇಂಜರ್ಸ್ಗಳು ಪ್ರವೇಶ ಪರೀಕ್ಷೆಯಲ್ಲಿ ಪಾಲ್ಗೊಂಡರು .