ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜು ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಯಶಸ್ಸು ಸಾಧಕರ ಆಸ್ತಿ : ಝೇವಿಯರ್ ಡಿ ಸೋಜ

ಪುತ್ತೂರು: ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಕನಸು ಕಾಣದಿದ್ದರೆ ಯಶಸ್ಸು ಸಾಧ್ಯವಿಲ್ಲ.ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅವಕಾಶಗಳನ್ನು ಸವಾಲಾಗಿ ಸ್ವೀಕರಿಸಬೇಕು. ಈ ಸವಾಲನ್ನು ಎದುರಿಸಲು ಧೈರ್ಯವಿಲ್ಲದವರು,ಸೋಮಾರಿಗಳ ಬಳಿ ಯಶಸ್ಸು ಸುಳಿಯುವುದಿಲ್ಲ.ಯಶಸ್ಸು ಸಾಧಕರ ಆಸ್ತಿಯಾಗಿರುತ್ತದೆ. ಎಲ್ಲಾ ವಿಧ್ಯಾರ್ಥಿಗಳು ಯಶಸ್ಸನ್ನು ಪಡೆಯಲು ಪ್ರಯತ್ನಿಸಬೇಕು ಎಂದು ನಿವೃತ್ತ ಪ್ರಾಂಶುಪಾಲ ಝೇವಿಯರ್ ಡಿ ಸೋಜ ನುಡಿದರು.
ಇವರು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಶೈಕ್ಷಣಿಕ ವರ್ಷದ ಉದ್ಘಾಟನಾ ಸಮಾರಂಭ ಹಾಗೂ 2020-21ರ ಶೈಕ್ಷಣಿಕ ವರ್ಷದಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆಗೈದ ವಿದಾರ್ಥಿಗಳಿಗೆ ಟಿಡೆದ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕ್ಯಾಂಪಸ್ ನಿರ್ದೇಶಕರಾದ ರೆ.ಫಾ.ಸ್ಟ್ಯಾನಿ ಪಿಂಟೋ ಮಾತನಾಡಿ ನಮ್ಮ ಬದುಕಿನಲ್ಲಿ ನಾವು ಹೇಗಿದ್ದೇವೆ; ಏನಾಗಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಆಸಕ್ತಿ, ಛಲ,ಏಕಾಗ್ರತೆಯಿಂದ ಯಶಸ್ಸನ್ನು ಸಾಧಿಸಬೇಕು ಎಂದರು.
ಮಾಯಿದೇ ದೇವುಸ್ ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನಸ್ ಫಾ ಪತ್ರವೋರವರ ಬಹುದೊಡ್ಡ ಕನಸು ಪುತ್ತೂರಿನಲ್ಲಿ ಅಗಾಧವಾದ ಶಿಕ್ಷಣ ಕ್ರಾಂತಿ.ಈ ಶಿಕ್ಷಣ ಸಂಸ್ಥೆಯಲ್ಲಿ ಮಾರ್ಗದರ್ಶಕರಾಗಿ ಪ್ರಾಂಶುಪಾಲರು, ಉಪನ್ಯಾಸಕ ವರ್ಗ, ಸಿಬ್ಬಂದಿ ವರ್ಗದವರಿಗೂ ಅಭಿನಂದನೆಯನ್ನು ಹರಸಬೇಕು.ಸಾಧಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಎಂದು ಹೇಳಿದರು.
ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶಶಿಕುಮಾರ್ ಬಾಲ್ಯೋಟ್ಟುರವರು ವಿದ್ಯಾರ್ಥಿಗಳು ನಿಷ್ಠೆಯಿಂದ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಯಶಸ್ಸು ಸಾಧ್ಯ.ಮುಂದೆ ಕೂಡ ವಿದಾರ್ಥಿಗಳು ಕಾಲೇಜಿಗೆ ಹೆಸರನ್ನು ತರುವ ಕೆಲಸ ಕಾರ್ಯಗಳನ್ನು ಮಾಡಲಿ ಎಂದು ಹರಸಿದರು. ಅಧ್ಯಕ್ಷತೆಯನ್ನು ವಹಿಸಿದ ಕಾರ್ಯಕ್ರಮದ ಕಾಲೇಜಿನ ಸಂಚಾಲಕರು ರೆ.ಫಾ ಲಾರೆನ್ಸ್ ಮಸ್ಕರೇನಸ್ ಮಾತನಾಡಿ ಕೊರೋನಾ ಮಹಾಮಾರಿಯ ಅಬ್ಬರದಲ್ಲಿಯೂ ಉಪನ್ಯಾಸಕ ವೃಂದದ ಪ್ರೋತ್ಸಾಹದಿಂದ ವಿದ್ಯಾರ್ಥಿಗಳು ಸಾಧಿಸಿ ತೋರಿಸಿದ್ದಾರೆ.ನಾವು ಸಕಾರಾತ್ಮಕವಾಗಿ ಬದುಕಿದಾಗ ಯಶಸ್ಸು ಪಡೆಯುತ್ತೇವೆ.ಸಾಧಿಸಿದರೆ ಮಾತ್ರ ಮೌಲ್ಯಯುತ ಬದುಕನ್ನು ಸಾಧಿಸಬೇಕು.ಜೀವನ ನಿಸ್ವಾರ್ಥದಿಂದ ಕೂಡಿರಬೇಕು ಆಗ ಮಾತ್ರ ಬದುಕಿನಲ್ಲಿ ಸಂತೃಪ್ತಿ ದೊರಕುತ್ತದೆ ಎಂದರು.
2020-21 ಶೈಕ್ಷಣಿಕ ವರ್ಷದ ಪಠ್ಯ ಚಟುವಟಿಕೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಸಾಧಕ ವಿದ್ಯಾರ್ಥಿಗಳಾದ ವಿಜ್ನಾನ ವಿಭಾಗದ ಅಮೃತ ಎನ್.ಎ,ವಾಣಿಜ್ಯ ವಿಭಾಗದ ನಿಶ್ಚಯ ಕುಡ್ವ,ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.ಕ್ರೀಡಾಕ್ಷೇತ್ರದಲ್ಲಿ ಸಾಧನೆಗೈದ ಈಜುಪಟು ನೀಲ್ ಮಸ್ಕರೇನಸ್‍ರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಈ ಸಂದರ್ಭ ಉಪಾನ್ಯಾಸಕ ವೃಂದ,ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.ವಿದ್ಯಾರ್ಥಿ ಸಂಘದ ಸಂಯೋಜಕರಾದ ಯಶವಂತ್ ಎಂ.ಡಿ, ಉಷಾ ಎ,ಉಪಸ್ಥಿತರಿದ್ದರು.
ಪ್ರದರ್ಶನದ ಕಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ.ವಿಜಯ್ ಲೋಬೋ ಸ್ವಾಗತಿಸಿ, ವಿಜ್ಞಾನ ವಿಭಾಗದ ಉಪಾನ್ಯಾಸಕ ಸಂತೋಷ್ ಕ್ಲಾರೆನ್ಸ್ ಡಿ ಸೋಜ ಕಾರ್ಯಕ್ರಮ ನಿರೂಪಿಸಿದರು.