ಸಂತ ಫಿಲೋಮಿನಾ ಪಿ. ಯು ಕಾಲೇಜಿನಲ್ಲಿ  ಕನ್ನಡ ರಾಜ್ಯೋತ್ಸವ ಆಚರಣೆ.

ಪುತ್ತೂರು: ಕನ್ನಡ ರಾಜ್ಯೋತ್ಸವ  ಆಚರಣೆಯು ನ. 1 ರಂದು  ಸಂತ ಫಿಲೋಮಿನಾ ಪ. ಪೂ ಕಾಲೇಜಿನಲ್ಲಿ ನಡೆಯಿತು. ಪ್ರಾಚಾರ್ಯರಾದ ರೆ.ಫಾ.ವಿಜಯ್ ಲೋಬೊ ಮಾತನಾಡಿ ಕನ್ನಡ ರಾಜ್ಯೋತ್ಸವ ಆಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಕನ್ನಡ ನಾಡು ನುಡಿಯ ಚಿಂತನೆಯು ನಮ್ಮಲ್ಲಿ ಸದಾ ಇರಬೇಕು. ಕನ್ನಡ ಭಾಷೆಯನ್ನು ಬೆಳೆಸಿ , ಉಳಿಸಿ ಕಾಪಾಡುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ. ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಇದನ್ನು ಬೆಳೆಸುವ , ಪಾಲಿಸುವ ಜವಾಬ್ದಾರಿಯಿದೆ ಎಂದರು. ನಮ್ಮ ನಿಜ ಜೀವನದಲ್ಲಿ ಕನ್ನಡ ಸಂಸ್ಕೃತಿ ಬೆಳೆಯಬೇಕು , ಉಳಿಯಬೇಕು ಎಂದರು. ಪ್ರದರ್ಶನ ಕಲಾಸಂಘದ ವಿದ್ಯಾರ್ಥಿಗಳು ಪ್ರಾಥಿಸಿದರು ಮತ್ತು ಕನ್ನಡ ಗೀತ ಗಾಯನವನ್ನು ನೆರವೇರಿಸಿದರು. ಕನ್ನಡ ಉಪನ್ಯಾಸಕಿ ಉಷಾಯಶವಂತ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ವೃಂದ , ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು , ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳು ಸಂಭ್ರಮದಿಂದ ಪಾಲ್ಗೊಂಡರು.