ಫೆ.1: ಫಿಲೋಮಿನಾ ಪಿಯು ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳ `ಫಿಲೋ ಮಿಲನ್’

ಇಲ್ಲಿನ ದರ್ಬೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಕಾಲೇಜ್‍ನ ಆರಂಭದಿಂದ ಇಲ್ಲಿಯವರೆಗೆ ಫಿಲೋಮಿನಾದಲ್ಲಿ ಕೇವಲ ಪದವಿ ಪೂರ್ವ ಶಿಕ್ಷಣವನ್ನು ಪಡೆದು ತೆರಳಿದ ಹಿರಿಯ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಅವರೊಂದಿಗೆ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಅಪರೂಪದ ಕಾರ್ಯಕ್ರಮ `ಫಿಲೋ ಮಿಲನ್-2020′ ಅನ್ನು ಕಾಲೇಜ್ ಹಮ್ಮಿಕೊಂಡಿದೆ.

ಸಂಜೆ ಕಾಲೇಜಿನ ಪ್ರಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಾಯಿದೆ ದೇವುಸ್ ವಿದ್ಯಾಸಂಸ್ಥೆಗಳ ಸಂಚಾಲಕ ವಂ|ಆಲ್ಫ್ರೆಡ್ ಜಾನ್ ಪಿಂಟೋರವರು ಅಧ್ಯಕ್ಷತೆ ವಹಿಸಲಿದ್ದು, ಕಾಲೇಜಿನ ಕ್ಯಾಂಪಸ್ ಇನ್-ಚಾರ್ಜ್ ವಂ|ಡಾ|ಆ್ಯಂಟನಿ ಪ್ರಕಾಶ್ ಮೊಂತೇರೋ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಗೌರವ ಅತಿಥಿಗಳಾಗಿ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಸುಳ್ಯ ಬಾರ್ ಎಸೋಸಿಯೇಶನ್‍ನ ಸದಸ್ಯ ಹಾಗೂ ನೋಟರಿ ವಕೀಲರಾದ ನಳಿನ್ ಕುಮಾರ್ ಕೊಡ್ತಗುಳಿ, ಪುತ್ತೂರು ಶ್ರೀರಾಮ ಕನ್‍ಸ್ಟ್ರಕ್ಷನ್‍ನ ಮಾಲಕ ಪ್ರಸನ್ನ ಎನ್.ಭಟ್, ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಯ ಪೆಥಾಲಜಿ ವಿಭಾಗದ ಪ್ರೊಫೆಸರ್ ಹಾಗೂ ಮುಖ್ಯಸ್ಥೆ ಡಾ.ಸತ್ಯವತಿ ಆರ್.ಆಳ್ವರವರು ಭಾಗವಹಿಸಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ವಂ|ವಿಜಯ್ ಲೋಬೋ ಹಾಗೂ ಕಾರ್ಯಕ್ರಮದ ಕೋ-ಆರ್ಡಿನೇಟರ್ ದಿವ್ಯ ಕೆ.ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.