ಷಷ್ಟ್ಯಬ್ದದ ಸಂಭ್ರಮದ ಸಮಾರೋಪ ಮಹೋತ್ಸವ ಕಾರ್ಯಕ್ರಮ

ವಿದ್ಯಾರ್ಥಿಗಳು ಹೊಸ ಹೊಸ ವಿಷಯಗಳನ್ನು ಸಂಗ್ರಹಿಸಿದಾಗ ಜ್ಞಾನ ವೃದ್ಧಿಗೊಳ್ಳುತ್ತದೆ ನಿಜ. ಆದರೆ ಕೇವಲ ಜ್ಞಾನ ವೃದ್ಧಿಗೊಂಡರೆ ಸಾಲದು. ವಿಷಯಗಳ ಬಗೆಗಿನ ಆಳವಾದ ಅಧ್ಯಯನಾಸಕ್ತಿ ಬೆಳೆಸಿಕೊಂಡಾಗ ನಿಜವಾದ ಜ್ಞಾನ ವೃದ್ಧಿಗೊಳ್ಳುತ್ತದೆ ಎಂದು ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾದ ವಂ|ಡಾ|ಪೀಟರ್ ಪಾವ್ಲ್ ಸಲ್ದಾನ್ಹಾರವರು ಹೇಳಿದರು.

ಅವರು ದ.18 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ಗೆ ಷಷ್ಟ್ಯಬ್ದದ ಸಂಭ್ರಮದ ಸಮಾರೋಪ ಮಹೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಕಾಲೇಜ್‍ನ ಷಷ್ಠ್ಯಬ್ದ ಮಹೋತ್ಸವದ ಲಾಂಛನವನ್ನು ಬಟನ್ ಅದುಮಿ ಉರಿಸುವ ಮೂಲಕ ಹಾಗೂ ವಜ್ರಮಹೋತ್ಸವದ ಅಂಗವಾಗಿ ನಡೆದ 60 ಚಟುವಟಿಕೆಗಳ ವರದಿಯನ್ನೊಳಗೊಂಡ `ಫಿಲೋ ಆರುಷ್’ನ್ನು ಉದ್ಘಾಟಿಸಿ ಮಾತನಾಡಿದರು. ಪ್ರಭು ಯೇಸುಕ್ರಿಸ್ತರು ಹೇಳೀದ್ದಾರೆ ನಾನೇ ಸತ್ಯ ಎಂದು. ಯಾರು ಸತ್ಯ ಮತ್ತು ನೀತಿ ಮಾರ್ಗದಲ್ಲಿ ನಡೆಯುತ್ತಾರೋ ಅವರು ಜೀವನದಲ್ಲಿ ಯಶಸ್ಸು ಕಾಣುತ್ತಾರೆ. ಪ್ರತಿಯೋರ್ವರಲ್ಲೂ ಭಗವಂತ ಯಾವುದಾದರೊಂದು ಪ್ರತಿಭೆಯನ್ನು ಕರುಣಿಸಿದ್ದಾನೆ ನಿಜ. ಆದರೆ ದೇವರು ಕರುಣಿಸಿದಂತಹ ಪ್ರತಿಭೆಯನ್ನು ಅನಾವರಣಗೊಳಿಸಿದಾಗ ಮಾತ್ರ ಪ್ರತಿಭೆಗೆ ನಿಜವಾದ ಅರ್ಥ ಬರುತ್ತದೆ ಎಂದ ಅವರು ವಿದ್ಯಾರ್ಥಿಗಳು ತಮ್ಮ ಅಧ್ಯಾಪಕರಲ್ಲಿ ಪಾಠದ ಬಗ್ಗೆ ಪ್ರಶ್ನೆಯನ್ನು ಕೇಳುವಂತಿರಬೇಕು. ಆವಾಗ ಅಧ್ಯಾಪಕನಲ್ಲೂ ಜ್ಞಾನ ವೃದ್ಧಿಗೊಳ್ಳಲು ಶಕ್ತವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಸಾಧನೆ ಮಾಡುವಂತಹ ತುಡಿತವಿರಬೇಕು. ಕಠಿಣ ಪರಿಶ್ರಮ, ಸಮರ್ಪಣಾ ಮನೋಭಾವ ಮತ್ತು ಬದ್ಧತೆಯನ್ನು ಮೈಗೂಡಿಸಿಕೊಂಡಲ್ಲಿ ಯಶಸ್ಸು ಕಾಣುವುದಕ್ಕೆ ಸಾಧ್ಯವಿದೆ ಎಂಧು ಅವರು ಹೇಳಿದರು.

ಷಷ್ಠ್ಯಬ್ದದ ಸವಿನೆನಪಿಗೆ ಗಿಡಗಳನ್ನು ನೆಡಿ-ವಂ|ಆ್ಯಂಟನಿ ಮೈಕಲ್:
ಮಂಗಳೂರು ಕಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ವಂ|ಆ್ಯಂಟನಿ ಮೈಕಲ್ ಸೆರಾರವರು ಮಾತನಾಡಿ, ಜೀವನ ಅಂದರೆ ಏನು?, ಜೀವನ ಅಂದರೆ ದೇವರು ಕೊಟ್ಟ ಒಂದು ಅಪೂರ್ವ ಅವಕಾಶವಾಗಿದೆ. ಇದೇ ಜೀವನವನ್ನು ತಮ್ಮ ಪ್ರತಿಭೆಯ ಮೂಲಕ ಬೆಳಗುವುದು ನಮ್ಮ ಕರ್ತವ್ಯವಾಗಿದೆ. ತಮ್ಮ ಪ್ರತಿಭೆಯ ಅನಾವರಣವಾಗುವ ಮೂಲಕ ಸಮಾಜಕ್ಕೆ ಅರ್ಥವನ್ನು ಕೊಡುವ ವ್ಯಕ್ತಿಗಳಾಗಿ ನಾವು ಬೆಳೆಯಬೇಕಾಗಿದೆ ಎಂದ ಅವರು ರಸ್ತೆ ಅಗಲೀಕರಣಕ್ಕೆ ಸರಕಾರ, ಮನೆ, ಸಂಸ್ಥೆ ನಿರ್ಮಾಣಕ್ಕೆ ಮನುಷ್ಯ ತಮ್ಮ ಸ್ವಾರ್ಥಕ್ಕನುಗುಣವಾಗಿ ಮರಗಳನ್ನು ಕಡಿಯುವ ಮೂಲಕ ಜಾಗತಿಕ ಮಟ್ಟದಲ್ಲಿ ತಾಪಮಾನದ ಬಿಸಿ ಏರುತ್ತಿದೆ. ಜಗದ್ಗುರು ಪೋಪ್‍ರವರ ಸಂದೇಶದಂತೆ ಮರಗಳನ್ನು ಬೆಳೆಸಿ, ಆಮ್ಲಜನಕವನ್ನು ಉಳಿಸಿಕೊಳ್ಳಿ ಎಂಬಂತೆ ವಿದ್ಯಾರ್ಥಿಗಳು ಕಾಲೇಜ್‍ನ ಷಷ್ಠ್ಯಬ್ದದ ಸವಿನೆನಪಿಗೆ ಮನೆಯ ಪರಿಸರದಲ್ಲಿ ಒಂದೊಂದು ಗಿಡಗಳನ್ನು ನೆಟ್ಟು ಅದರ ಪೋಷಣೆಯನ್ನು ಮಾಡಿದಾಗ ವಾರ್ಷಿಕೋತ್ಸವಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಅವರು ಹೇಳಿದರು.

ಫಿಲೋಮಿನಾ ಸಂಸ್ಥೆ ಪವಿತ್ರ ದೇಗುಲವಿದ್ದಾಗೆ-ಪ್ರೊ|ಲಿಯೋ:
ಫಿಲೋಮಿನಾ ಕಾಲೇಜ್‍ನ ಪ್ರಾಂಶುಪಾಲ ಪ್ರೊ|ಲಿಯೋ ನೊರೋನ್ಹಾರವರು 2019ರ ಸಾಲಿನ ಕಾಲೇಜ್ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿ, ಫಿಲೋಮಿನಾ ಪಿಯು ಕಾಲೇಜ್ ಅನೇಕ ಸಾಧಕ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಪರಿಚಯಿಸಿದೆ. ಫಿಲೋಮಿನಾ ವಿದ್ಯಾಸಂಸ್ಥೆ ಎಂಬುದು ಪವಿತ್ರ ದೇಗುಲವಿದ್ದಾಗೆ. ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿರುವ ನನಗೆ ಇಂದು ವಿಶ್ವವಿದ್ಯಾಲಯದಲ್ಲಿ ಜರಗುವ ಸಭೆಗೆ ಹಾಜರಾಗಬೇಕಿತ್ತು. ಆದರೆ ಇಂದು ನಡೆಯಬೇಕಿದ್ದ ಸಭೆಯು ಶನಿವಾರಕ್ಕೆ ಮುಂದೂಡಿದ್ದರಿಂದ ನನಗೆ ಇಂದು ಈ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಯಿತು. ನಾನು ಎಂದಿಗೂ ಫಿಲೋಮಿನಾದಲ್ಲಿ ಜರಗುವ ಕಾಲೇಜು ವಿದ್ಯಾರ್ಥಿ ಸಂಘ ಮತ್ತು ವಾರ್ಷಿಕೋತ್ಸವವನ್ನು ತಪ್ಪಿಸುತ್ತಿರಲಿಲ್ಲ. ನನ್ನ ಪ್ರಾರ್ಥನೆ ದೇವರು ಆಲಿಸಿದ್ದಾರೆ. ಆದ್ದರಿಂದ ಇಲ್ಲಿ ಭಕ್ತಿಯಿಂದ ಪ್ರಾರ್ಥಿಸಿದವರಿಗೆ ದೇವರು ಖಂಡಿತಾ ವರವನ್ನು ಪ್ರಾರ್ಥಿಸುತ್ತಾನೆ ಎಂಬುದು ನಿಜ ಎಂದ ಅವರು ನಾವು ಹೇಗೆ ನಮ್ಮ ಮನೆಯನ್ನು ಕಟ್ಟಿ ಬೆಳೆಸುತ್ತೇವೆಯೋ ಹಾಗೆಯೇ ತಾನು ಕಲಿತ ಸಂಸ್ಥೆಯನ್ನು ಅಷ್ಟೇ ಮುತುವರ್ಜಿಯಿಂದ ಬೆಳೆಸಬೇಕಾಗಿದೆ. ನಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ಸಮಾಜಕ್ಕೆ ನಾವು ಕೊಡುಗೆ ನೀಡುವವರಾಗಬೇಕು ಎಂದು ಅವರು ಹೇಳಿದರು.

ಒಗ್ಗಟ್ಟಿನಲ್ಲಿ ಕಾರ್ಯ ನಿರ್ವಹಿಸಿದಾಗ ಯಶಸ್ಸು-ವಂ|ಆ್ಯಂಟನಿ ಪ್ರಕಾಶ್:
ಕಾಲೇಜ್ ಕ್ಯಾಂಪಸ್ ನಿರ್ದೇಶಕ ವಂ|ಡಾ|ಆ್ಯಂಟನಿ ಪ್ರಕಾಶ್ ಮೊಂತೇರೋರವರು ಮಾತನಾಡಿ, ಯಾವುದೇ ಕಾರ್ಯಕ್ರಮವಾಗಲಿ, ಎಲ್ಲರೂ ಒಟ್ಟಿಗೆ ಸೇರಿಕೊಂಡು ಕೆಲಸವನ್ನು ನಿರ್ವಹಿಸಿದಾಗ ಕಾರ್ಯಕ್ರಮ ಯಶಸ್ಸು ಪಡೆಯುವುದು. ಅದರಂತೆ ಸಂಸ್ಥೆಯ ಅಭಿವೃದ್ಧಿಗೆ ಪ್ರತಿಯೋರ್ವರು ಕೈಜೋಡಿಸಿದಾಗ ಸಂಸ್ಥೆಯು ಅಭಿವೃದ್ಧಿಗೊಳ್ಳುವುದು ಮಾತ್ರವಲ್ಲದೆ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ತೋರ್ಪಡಿಸಿದ ಹಾಗೆ ಆಗುತ್ತದೆ ಎಂದರು.

ಸನ್ಮಾನ:
ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ನೇಮಕಗೊಂಡ ವಂ|ಡಾ|ಪೀಟರ್ ಪಾವ್ಲ್ ಸಲ್ದಾನ್ಹಾ, ಮಂಗಳೂರು ಕಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿಯಾಗಿ ನೇಮಕಗೊಂಡ ವಂ|ಆ್ಯಂಟನಿ ಮೈಕಲ್ ಸೆರಾ, ಮಂಗಳೂರು ಸಂತ ಆಗ್ನೇಸ್ ಕಾಲೇಜ್‍ನ ವಾಣಿಜ್ಯ ವಿಭಾಗದ ಮುಖ್ಯಸ್ಥರು ಹಾಗೂ ಕಾಲೇಜ್‍ನ ಹಿರಿಯ ವಿದ್ಯಾರ್ಥಿನಿ ಡಾ|ದೇವಿಪ್ರಭಾ ಆಳ್ವ, ಭೌತಶಾಸ್ತ್ರ ವಿಷಯಕ್ಕೆ ಸಂಬಂಧಪಟ್ಟಂತೆ ಸಂಶೋಧನಾ ಪ್ರಬಂಧ ಅಂತರ್ರಾಷ್ಟ್ರೀಯ ಮಟ್ಟದ ನಿಯತಕಾಲಿಕೆಗಳಳ್ಲಿ ಪ್ರಕಟಿಸಿ ವಿಜಿಎಸ್‍ಟಿ ಪ್ರಶಸ್ತಿ ಪುರಸ್ಕøತರಾಗಿರುವ ಕಾಲೇಜ್‍ನ ಕ್ಯಾಂಪಸ್ ನಿರ್ದೇಶಕ ಹಾಗೂ ಕಾಲೇಜ್‍ನ ಹಿರಿಯ ವಿದ್ಯಾರ್ಥಿ ವಂ|ಡಾ|ಆ್ಯಂಟನಿ ಪ್ರಕಾಶ್ ಮೊಂತೇರೋರರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಸನ್ಮಾನಿತರ ಪರಿಚಯವನ್ನು ಉಪನ್ಯಾಸಕರಾದ ಸುಮಾ ಡಿ, ಸಂತೋಷ್ ಕ್ಲ್ಯಾರೆನ್ಸ್ ಡಿ’ಸೋಜ, ನಿರಂಜನ್, ಲವೀನಾ ಸಾಂತ್‍ಮಾಯೆರ್‍ರವರು ನೀಡಿದರು.

ಅಭಿನಂದನೆ:
ಕಾಲೇಜ್‍ನ ಸಾಹಿತ್ಯಕ, ಸಾಂಸ್ಕøತಿಕ ಹಾಗೂ ಕ್ರೀಡೆ, ಎನ್‍ಸಿಸಿ, ರೋವರ್ಸ್-ರೇಂಜರ್ಸ್‍ನಲ್ಲಿ ಗಮನಾರ್ಹ ಸಾಧನೆಗೈದ ವಿದ್ಯಾರ್ಥಿಗಳನ್ನು ಮತ್ತು 2017-18ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.95 ಅಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಅಭಿನಂದಿಸಲಾಯಿತು. ಉಪನ್ಯಾಸಕರಾದ ಭರತ್ ಕುಮಾರ್, ಅನಿಲ್ ಕುಮಾರ್, ವತ್ಸಲಾ ಪಿ, ಸುಮಾ ಪಿ.ಆರ್, ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ್ ಡಿ’ಸೋಜರವರು ಪಠ್ಯ ಹಾಗೂ ಪಠ್ಯೇತರ ಮತ್ತು ಉಪನ್ಯಾಸಕ ಹಾಗೂ ಆಡಳಿತ ಸಿಬ್ಬಂದಿಗೆ ಏರ್ಪಡಿಸಿದ ಕ್ರೀಡಾ ಚಟುವಟಿಕೆಯಲ್ಲಿ ವಿಜೇತರಾದವರ ಬಹುಮಾನ ಪಟ್ಟಿಯನ್ನು ವಾಚಿಸಿದರು.
ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆ.ಪಿ ರೊಡ್ರಿಗಸ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೈರಾಜ್ ಭಂಡಾರಿ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ನ್ಯಾಯವಾದಿ ದುರ್ಗಾಪ್ರಸಾದ್ ರೈ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಆಕಾಶ್ ಭಟ್, ಜೊತೆ ಕಾರ್ಯದರ್ಶಿ ಡೆಲ್ಮಾ ಲೋರಾ ಕುಟಿನ್ಹಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಚಾಲಕ ಪ್ರದರ್ಶನ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಂ|ಆಲ್ಫ್ರೆಡ್ ಜಾನ್ ಪಿಂಟೋ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀದೇವಿ ಕೆ ವಂದಿಸಿದರು. ಉಪನ್ಯಾಸಕರಾದ ಸಂಜಯ್ ಎಸ್, ಪ್ರಶಾಂತ್ ಭಟ್, ತೆರೆಸಾ ನ್ಯಾನ್ಸಿ ಲೋಬೋ, ವತ್ಸಲ ಪಿ, ಅನಿಲ್ ಕುಮಾರ್‍ರವರು ಅತಿಥೀಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಪ್ರಾಂಶುಪಾಲ ವಂ|ವಿಜಯ್ ಲೋಬೋ ವರದಿ ವಾಚಿಸಿದರು. ಉಪನ್ಯಾಸಕಿ ಡಾ|ಆಶಾ ಸಾವಿತ್ರಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರಗಿತು.

ಬಾಕ್ಸ್
ಸರ್ವಶ್ರೇಷ್ಟ ವಿದ್ಯಾಸಂಸ್ಥೆಯಾಗಿರುವ ಈ ಫಿಲೋಮಿನಾ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಜನೆ ಪಡೆದಿರುವ ವಿದ್ಯಾರ್ಥಿಗಳು ನಿಜಕ್ಕೂ ಧನ್ಯರು. ನಾನು ಇಂದು ಸಮಾಜದಲ್ಲಿ ಓರ್ವ ಗೌರವಾನ್ವಿತೆಯಾಗಿ ಬೆಳೆಯಬೇಕಾದರೆ ಅದಕ್ಕೆ ಕಾರಣ ಈ ಫಿಲೋಮಿನಾ ವಿದ್ಯಾಸಂಸ್ಥೆ ಎಂದರೆ ತಪ್ಪಲ್ಲ. ಈ ಆರುವತ್ತು ವರ್ಷಗಳ ಸವಿನೆನಪಿಗೆ ಸಂಸ್ಥೆಯು ಆರುವತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ನಿಜಕ್ಕೂ ಪ್ರಶಂಸನೀಯ. ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ತೋರ್ಪಡಿಸಲು ಅವಕಾಶ ದಕ್ಕಿದಾಗ ಅದನ್ನು ಧನಾತ್ಮಕ ರೀತಿಯಲ್ಲಿ ಬಳಸಿಕೊಳ್ಳುವಂತಾಗಬೇಕು. ಕೇವಲ ಅಂಕಗಳ ಹೆಚ್ಚಳಗೋಸ್ಕರ ವಿದ್ಯಾಭ್ಯಾಸ ಮಾಡುವುದಲ್ಲ. ಅಂಕ ಗಳಿಕೆಯೊಂದಿಗೆ ವ್ಯಕ್ತಿತ್ವದ ಬೆಳವಣಿಗೆಯ ಕೌಶಲ್ಯವನ್ನು ಕೂಡ ವೃಧ್ಧಿಸಿಕೊಂಡಾಗ ಜೀವನ ಸಫಲತೆ ಕಾಣುವುದು.

-ಡಾ|ದೇವಿಪ್ರಭಾ ಆಳ್ವ, ವಾಣಿಜ್ಯ ವಿಭಾಗದ ಮುಖ್ಯಸ್ಥರು, ಮಂಗಳೂರು ಸಂತ ಆಗ್ನೇಸ್ ಕಾಲೇಜ್, ಹಾಗೂ ಕಾಲೇಜ್‍ನ ಹಿರಿಯ ವಿದ್ಯಾರ್ಥಿನಿ

ರೌಂಡ್ ಬಾಕ್ಸ್
ಪ್ಲಾಸ್ಟಿಕ್ ಬಳಸುವುದರಿಂದ ಮತ್ತು ಮರಗಿಡಗಳನ್ನು ಕಡಿಯುವುದರಿಂದ ಪರಿಸರದ ಮತ್ತು ಆರೋಗ್ಯದ ಮೇಲೆ ಯಾವ ರೀತಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಸಂಸ್ಥೆಯು ಅತಿಥಿಗಳಿಗೆ ಸಭಾ ಕಾರ್ಯಕ್ರಮದ ವೇಳೆ ಕುಡಿಯಲು ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸುವುದು ಮತ್ತು ಸ್ಮರಣಿಕೆಯನ್ನು ನೀಡುವ ಬದಲು ಕುಡಿಯಲು ಗ್ಲಾಸ್‍ನಲ್ಲಿ ನೀರು ಮತ್ತು ಗಿಡಗಳನ್ನು ಸ್ಮರಣಿಕೆಯನ್ನಾಗಿ ನೀಡುವ ಮೂಲಕ ಮತ್ತು ಕಾಲೇಜ್‍ನ ಪ್ರವೇಶ ದ್ವಾರದ ಬಳಿ ಹಳೆಯ ಬಜಾಜ್ ಸ್ಕೂಟರ್‍ನ ಸೆಲ್ಫಿ ಪಾಯಿಂಟ್‍ನ್ನು ಇರಿಸಿ ಕಾರ್ಯಕ್ರಮದ ಕಳೆಯನ್ನು ಏರಿಸಿದ್ದರು.

ಹುಡುಗರ ವಿಭಾಗದಲ್ಲಿ ಮಲ್ಟಿ ಟ್ಯಾಲೆಂಟ್‍ಡ್ ವಿದ್ಯಾರ್ಥಿಯಾಗಿ ಆಕಾಶ್ ಸಿ.ಭಟ್, ಹುಡುಗಿಯರ ವಿಭಾಗದಲ್ಲಿ ಶ್ರೀದೇವಿ ಕೆ, ಸಾಂಸ್ಕøತಿಕ, ಸಾಹಿತ್ಯಕ ಹಾಗೂ ಕ್ರೀಡೆಯಲ್ಲಿ ಸಮಗ್ರ ಪ್ರಶಸ್ತಿ ಪಡೆದ ದ್ವಿತೀಯ ಎಸ್‍ಇಬಿಎ`ಎ’ ತರಗತಿ, ಶೈಕ್ಷಣಿಕ ವರ್ಷದ ಉತ್ತಮ ಸಾಧನೆಗಾಗಿ ಕಲಾ ವಿಭಾಗದಿಂದ ಪಾವ್ಲ್ ವರ್ಗೀಸ್, ವಾಣಿಜ್ಯ ವಿಭಾಗದಿಂದ ಹರ್ಷಿತಾ, ವಿಜ್ಞಾನ ವಿಭಾಗದಿಂದ ಚೆನ್ನಬಸಮ್ಮ, ಕ್ರೀಡೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ ಪ್ರೀತಂ ರೈ(ಅಥ್ಲೆಟಿಕ್ಸ್), ಸಿಂಚನಾ ಡಿ.ಗೌಡ(ಸರ್ಫಿಂಗ್), ಭವಿತ್ ಕುಮಾರ್(ಪೋಲ್‍ವಾಲ್ಟ್), ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈಯ್ದ ತ್ರಿಶೂಲ್(ವಲ್ರ್ಡ್ ಲೈಫ್ ಸೇವಿಂಗ್ ಸ್ವಿಮ್ಮಿಂಗ್), ರಾಜ್ಯ ಮಟ್ಟದ ಸಾಧನೆಗೈಯ್ದ ರಕ್ಷಾ ಅಂಚನ್(ಅಥ್ಲೆಟಿಕ್ಸ್) ವಿಭಾ ಬಿದ್ದಪ್ಪ, ಹಿಮಾಶ್ರೀ(ಹಾಕಿ), ನಿಶಾನಿ ರೈ(ಟೇಬಲ್ ಟೆನ್ನಿಸ್) ವೀರೇಶ್ ಎನ್. ವಿ(ಟೆನ್ನಿಕೊೈಟ್), ನಯನಾ, ಸಹನಾ, ಮೊಹಮ್ಮದ್ ನೌಫಲ್ ರಝಾಕ್(ಕರಾಟೆ), ಉಪನ್ಯಾಸಕರ ಸಾಧನೆಗಾಗಿ ಹರ್ಷದ್ ಇಸ್ಮಾಯಿಲ್(ಸ್ಕೌಟ್ಸ್, ಗೈಡ್ಸ್), ಅತ್ತ್ಯುತ್ತಮ ಕ್ರೀಡಾ ವಿದ್ಯಾರ್ಥಿಯಾಗಿ ತ್ರಿಶೂಲ್ ಹಾಗೂ ಸಿಂಚನಾ ಗೌಡ, ಉತ್ತಮ ಎನ್‍ಸಿಸಿ ಅಲ್‍ರೌಂಡರ್ ಭವಿತ್ ಕುಮಾರ್, ಉತ್ತಮ ಎನ್‍ಸಿಸಿ ನಿರ್ಗಮನ ವಿದ್ಯಾರ್ಥಿ ಚೇತನ್ ಪಿ, ಉತ್ತಮ ಬೆಸ್ಟ್ ಕೆಡೆಟ್ ಆಶಿಶ್ ಅಶ್ರಫ್ ಕಮ್ಮಾಡಿ ಹಾಗೂ ಮಹಾಲಸಾ ಪೈ, ಉತ್ತಮ ಎನ್‍ಸಿಸಿ ಅಚೀವರ್ ಸೇನ್ ಜೋಸೆಫ್ ಡಿ’ಸೋಜ, ಉತ್ತಮ ರೋವರ್ ಮೊಹಮ್ಮದ್ ಆಶಿಕ್, ಉತ್ತಮ ರೇಂಜರ್, ಸಿಂಚನಾ ಡಿ.ಗೌಡರವರನ್ನು ಗೌರವಿಸಲಾಯಿತು.