ಉಪನ್ಯಾಸಕ ಹರ್ಷದ್ ಇಸ್ಮಾಯಿಲ್‍ರವರಿಗೆ `ಯೂತ್ ಅವಾರ್ಡ್’

ಭಾರತೀಯ ಸ್ಕೌಟ್ ಮತ್ತು ಗೈಡ್ಸ್ ಫೆಲೋಶಿಪ್‍ನ 13ನೇ ರಾಷ್ಟ್ರೀಯ ಒಕ್ಕೂಟದ ಯೂತ್ ಅವಾರ್ಡ್‍ಗೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕ ಹರ್ಷದ್ ಇಸ್ಮಾಯಿಲ್‍ರವರು ಭಾಜನರಾಗಿದ್ದಾರೆ.

ಮಹಾರಾಷ್ಟ್ರದ ಲೊನಾವಲಾದಲ್ಲಿ ಮಾರ್ಚ್ 12ರಿಂದ 14ರ ವರೆಗೆ ನಡೆದ ರಾಷ್ಟ್ರೀಯ ಒಕ್ಕೂಟದ ಸಮ್ಮೇಳನದಲ್ಲಿ ಟಿವಿ ಸೀರಿಯಲ್ ಶಕ್ತಿಮಾನ್ ಖ್ಯಾತಿಯ ಮುಖೇಶ್ ಆರ್.ಖನ್ನಾರವರು ಹರ್ಷದ್‍ರವರಿಗೆ ಯೂತ್ ಅವಾರ್ಡ್-2019ನ್ನು ಪ್ರದಾನ ಮಾಡಿದ್ದಾರೆ. ಅದೇ ರೀತಿ ಭಾರತೀಯ ಸ್ಕೌಟ್ ಮತ್ತು ಗೈಡ್ ಫೆಲೋಶಿಪ್‍ನ ಅತ್ತ್ಯುನ್ನತ ಅವಾರ್ಡ್ ಎನಿಸಿರುವ `ಸತೀಶ್ ಆರ್ ಖನ್ನಾ ಫೆಲೋಶಿಪ್ ಅವಾರ್ಡ್-2019′ ಅನ್ನು ಕೂಡ ಹರ್ಷದ್‍ರವರು ಬಗಲಿಗೆ ಹಾಕಿಕೊಂಡಿದ್ದಾರೆ. ಈ ಅವಾರ್ಡ್‍ನ್ನು ಜಮ್ಮು ಮತ್ತು ಕಾಶ್ಮೀರ್‍ನ ಚೀಫ್ ಜಸ್ಟೀಸ್ ಗೀತಾ ಮಿತ್ತಲ್‍ರವರು ಪ್ರದಾನ ಮಾಡಿರುತ್ತಾರೆ. ಸ್ಕೌಟ್ ಮತ್ತು ಗೈಡ್‍ನಲ್ಲಿ ನೀಡಿರುವ ಸೇವೆಗಳನ್ನು ಪರಿಗಣಿಸಿ ಸ್ಕೌಟ್ ಮತ್ತು ಗೈಡ್ ರಾಷ್ಟ್ರೀಯ ಒಕ್ಕೂಟವು ಹರ್ಷದ್‍ರವರಿಗೆ ಪ್ರಶಸ್ತಿಯನ್ನು ನೀಡಿದುದಾಗಿದೆ. ಚಂದಳಿಕೆ ನಿವಾಸಿಯಾದ ಇವರು ಅಬ್ದುಲ್ ರಹಿಮಾನ್ ಹಾಗೂ ಖತೀಜಮ್ಮ ದಂಪತಿಗಳ ಪುತ್ರರಾಗಿರುತ್ತಾರೆ.